ಮಹಮದ್ ಶಮಿಗೆ ಕಳೆದೆರಡು ಪಂದ್ಯಗಳಲ್ಲೂ ಪಂದ್ಯಪುರುಷ ಪ್ರಶಸ್ತಿ ಸಿಗಲಿಲ್ಲವೇಕೆ ?

ಕ್ರಿಕೆಟ್ ಕ್ರೀಡೆ ರಾಷ್ಟ್ರೀಯ

ಗಾಯಾಳು ಭುವನೇಶ್ವರ ಕುಮಾರ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಮಹಮದ್ ಶಮಿಯವರು ಅಫ್ಘಾನಿಸ್ತಾನ ಹಾಗೂ ನಿನ್ನೆಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಭಾರತಕ್ಕೆ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

Image result for shami hat trick

ಅಫ್ಘಾನಿಸ್ತಾನದ ಎದುರಿನ ಪಂದ್ಯದಲ್ಲಿ ಅತ್ಯಂತ ಕಡಿಮೆ ಮೊತ್ತ ಗಳಿಸಿದ್ದ ಭಾರತವು ದುರ್ಬಲ ಅಫ್ಘಾನಿಸ್ತಾನದ ಎದುರು ಸುಲಭವಾಗಿ ಗೆಲ್ಲುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮಹಮದ್ ನಬಿ, ರಹಮತ್ ಷಾ ಹಾಗೂ ಗುಲ್ಬುದೀನ್ ನೈಬ್ ಅವರು ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಆತಂಕ ಹುಟ್ಟಿಸಿದ್ದರು.

ಆದರೆ ಕೊನೆಯಲ್ಲಿ ನಬಿ ಸೇರಿದಂತೆ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ ಶಮಿ ಅವರು ಭಾರತಕ್ಕೆ ಗೆಲುವನ್ನು ತಂದಿದತ್ತರು.  ತಮ್ಮ 9.5 ಓವರ್ ಗಳಲ್ಲಿ 40 ರನ್ ಗಳನ್ನು ನೀಡುವ ಮೂಲಕ  ಹ್ಯಾಟ್ರಿಕ್ ಸಮೇತ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಿತ್ತಿದ್ದರು. ಆದರೆ ಈ ಪಂದ್ಯದಲ್ಲಿ ಬೂಮ್ರಾ ಅವರಿಗೆ ಪಂದ್ಯಪುರುಷ ಪ್ರಶಸ್ತಿ ಲಭಿಸಿತ್ತು.

Related image

ಇನ್ನು ನಿನ್ನೆಯ ವೆಸ್ಟ್ ಇಂಡೀಸ್ ಪಂದ್ಯದಲ್ಲೂ ಸಹ ಮೋಡಿ ಮಾಡಿದ ಶಮಿ ಅವರು ತಮ್ಮ 6.2 ಓವರ್ ಗಳಲ್ಲಿ ಕೇವಲ 16 ರನ್ ಗಳನ್ನು ನೀಡುವ ಮೂಲಕ ಪ್ರಮುಖ 4 ವಿಕೆಟ್ ಗಳನ್ನು ಕಬಳಿಸಿದ್ದರು. ಆದರೂ ಈ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಪಂದ್ಯ ಪುರುಷ ಪ್ರಶಸ್ತಿಯನ್ನು ಪಡೆದಿದ್ದರು.

Image result for shami  4 wickets windies

ಆದರೂ ಸಹ ಎರಡೂ ಪಂದ್ಯಗಳಲ್ಲೂ ಶಮಿ ಅವರು ಪಂದ್ಯ ಪುರುಷ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಹ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಅವುಗಳಲ್ಲಿ ಕೆಲವು ಧರ್ಮವನ್ನು ಆಧರಿಸಿದ್ದಾಗಿವೆ ಎಂಬುದು ಸೋಜಿಗದ ಸಂಗತಿಯಾಗಿದೆ.

Please follow and like us:

Leave a Reply

Your email address will not be published. Required fields are marked *