“ಚಪಾಕ್ “ ಚಿತ್ರದ ಹಿನ್ನಲೆ ಅರಿಯದೇ ವಿರೋಧಿಸುತ್ತಿರುವ ಮೃಗ ಸ್ವರೂಪಿ ದೇಶದ್ರೋಹಿಗಳು!

ಬಾಲಿವುಡ್ ರಾಜಕೀಯ ರಾಷ್ಟ್ರೀಯ ಸಿನಿಮಾ

ಹೆಣ್ಣು ಮಕ್ಕಳ ಮೇಲಿನ ಆ್ಯಸಿಡ್ ದಾಳಿಯ ಪರಿಣಾಮದ ಭೀಕರತೆಯನ್ನು ವಿವರಿಸುವ ಮತ್ತು ಅ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಬದುಕು ಬವಣೆಗಳನ್ನು ಚಿತ್ರಿಸುವ “ಚಪಾಕ್” ಚಲನ ಚಿತ್ರವನ್ನು ರಾಜಕೀಯ ಕಾರಣಗಳಿಗಾಗಿ ನೋಡಬೇಡಿ ಎಂಬ ಸುದ್ದಿಯನ್ನು ಹಬ್ಬಿಸುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಚಿತ್ರದ ಆಶಯವನ್ನು ತಿಳಿಯದೇ ಮೃಗ ಸ್ವರೂಪಿಯಾಗಿ ವರ್ತಿಸುತ್ತಿದ್ದಾರೆ.

Image result for chapak real story character

ಮೊನ್ನೆಯಷ್ಟೇ ದೀಪಿಕಾ ಪಡುಕೋಣೆಯವರು ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನನನ ಹಲ್ಲೆಯನ್ನು ಖಂಡಿಸಿ ದಾಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಅವರನ್ನು ಬೆಂಬಲಿಸಿದ್ದರು. ಇದಾದ ಬಳಿಕವೇ ದೀಪಿಕಾ ಅವರ ಮುಂದಿನ ಸಿನಿಮಾ ಚಪಾಕ್ ಬಗ್ಗೆ ಎಲ್ಲೆಡೆ ಅಪಸ್ವರಗಳು ಏಳಲಾರಂಭಿಸಿದವು. ಇನ್ನು ಕೆಲವರು ದೀಪಿಕಾ ಪಡುಕೋಣೆ ದೇಶದ್ರೋಹಿ ಎಂಬ ಹೇಳಿಕೆಗಳನ್ನೂ ನೀಡಿದರು.

ಆದರೆ ಇದೀಗ ಈ ಚಿತ್ರ ನಿರ್ಮಾಣಗೊಳ್ಳಲು ಮೂಲ ಪ್ರೇರಣೆಯಾಗಿದ್ದ ಆ್ಯಸಿಡ್ ಸಂತ್ರಸ್ತೆಯು ಸ್ವತಃ ಸಾಮಾಜಿಕ ಜಾಲತಾಣದ ಮೂಲಕ ಈ ಚಿತ್ರದ ಉದ್ದೇಶವನ್ನು ಸಾರಿದ್ದು ನಟ ವಿಕ್ರಾಂತ್ ಕೂಡಾ ಚಿತ್ರಕ್ಕೆ ಅಡ್ಡಿಪಡಿಸಿಸುವುದು ಮಾನವೀಯತೆಗೆ ವಿರುದ್ಧವಾದ ಕೆಲಸವೆಂದು ವ್ಯಾಖ್ಯಾನ ನೀಡಿದ್ದಾರೆ. ಅಲ್ಲದೇ ಈಗಾಗಲೇ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು ಕೇವಲ ದೀಪಿಕಾ ಅವರ ಮೇಲಿನ ವಿವಾದದ ಕಾರಣಕ್ಕೆ ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ಇವರುಗಳು ಹೇಳುತ್ತಿರುವುದು ತೀರಾ ಅವಮಾನವೀಯ ಸಂಗತಿಯಾಗಿದೆ.

Image result for deepika padukone

ಒಂದೊಳ್ಳೆ ಉದ್ದೇಶವಿಟ್ಟುಕೊಂಡು ಮಾಡಿದ ಚಿತ್ರವನ್ನು ಪ್ರೋತ್ಸಾಹಿಸಲು ಮನಸ್ಸಿಲ್ಲದೇ ಎಲ್ಲದ್ದಕ್ಕೂ ದೇಶದ್ರೋಹ ಟ್ಯಾಗ್ ಅನ್ನು ಅಂಟಿಸುವ ಬಿಜೆಪಿಯ ಹುಚ್ಚು ಹಾಗೂ ವಿವೇಕ ರಹಿತ ಅಭಿಮಾನಿಗಳಿಗೆ ಆ್ಯಸಿಡ್ ಸಂತ್ರಸ್ತರ ನೈಜವಾದ ಗೋಳು ತಿಳಿದಿದಲ್ಲ. ಹೀಗಾಗಿಯೇ ಅವರು ಈ ದಿನ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಕಳೆದುಕೊಂಡ ದೇಶದ್ರೋಹಿಗಳಂತೆ ಆಡುತ್ತಿದ್ದು ತಮ್ಮ ಅಮಾನವೀಯ ಮುಖವನ್ನು ಸಮಾಜದ ಎದುರು ತೆರೆದಿಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *