ದಿ.ಅನಂತ್ ಕುಮಾರ್ ಸೂತಕದ ಕಾರಣ – ಮಕ್ಕಳ ಗ್ರಂಥಾಲಯ ಕಟ್ಟಡವನ್ನೇ ಸಂಸದರ ಕಚೇರಿಯನ್ನಾಗಿ ಬದಲಿಸಲು ಮುಂದಾದ ತೇಜಸ್ವಿ ಸೂರ್ಯ !

ಬೆಂಗಳೂರು ರಾಜಕೀಯ ರಾಜ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ತೇಜಸ್ವಿ ಸೂರ್ಯ ಅವರು ಇದೀಗ ತಮ್ಮ ಸಂಸದರ ಕಚೇರಿಯನ್ನು ಪ್ರತ್ಯೇಕವಾಗಿ ನಿರ್ಮಿಸಿಕೊಳ್ಳಲು ನಿರ್ಧರಿಸಿದ್ದು ಇದಕ್ಕಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಕೆಯಾಗುತ್ತಿದ್ದ ಕಟ್ಟಡವನ್ನು ಬಳಸಿಕೊಳ್ಳಲು ಹೊರಟಿದ್ದು ಸಾರ್ವಜನಿಕರಿಂದ ಈ ನಡೆಗೆ ಪ್ರತಿರೋಧ ವ್ಯಕ್ತವಾಗಿದೆ.

No photo description available.

ಈಗಾಗಲೇ ಸೌತ್ ಎಂಡ್ ಸರ್ಕಲ್ ಬಳಿಯಲ್ಲಿರುವ ಅನಂತ್ ಕುಮಾರ್ ಅವರ ಕಚೇರಿಯು ಸಾಕಷ್ಟು ಪ್ರಶಸ್ತವಾಗಿದ್ದು ಬಸ್ ಸ್ಟ್ಯಾಂಡ್ ಮತ್ತು ಮೆಂಟ್ರೋ ಸಂಪರ್ಕ ಇದ್ದರೂ ಸಹ ಕಚೇರಿಯನ್ನು ಅಲ್ಲಿಯೇ ತಮ್ಮ ಕಚೇರಿಯನ್ನು ಮಾಡಿಕೊಳ್ಳದ ಇವರು ಈ ಹಿಂದೆ ಜಯನಗರದ ಶಾಸಕ ವಿಜಯ್ ಕುಮಾರ್ ಅವರ ಆದಿಯಾಗಿ ಬಹಳಷ್ಟು ಮಂದಿ ಶಿಕ್ಷಕರು ಮಕ್ಕಳಿಗೆ ಪಾಠವನ್ನು ಮಾಡುತ್ತಿದ್ದ ಸ್ಥಳವಾಗಿದ್ದ ಜಯನಗರ ಶಿಕ್ಷಣ ಸಮಿತಿಯ ಕಟ್ಟಡದಲ್ಲೇ ತಮ್ಮ ಕಚೇರಿಯನ್ನು ಮಾಡಿಕೊಳ್ಳಲು ಮುಂದಾಗಿರುವ ಇವರಿಗೆ ಬೇರೆಯ ಜಾಗ & ಕಟ್ಟಡಗಳು ಸಿಗಲಿಲ್ಲವೇ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅನಂತ್ ಕುಮಾರ್ ಅವರ ಕಟ್ಟಡದಲ್ಲಿ ಕಚೇರಿ ರೂಪಿಸಿಕೊಳ್ಳಲಿಲ್ಲವೇಕೆ ?

ಸಾರ್ವಜನಿಕರ ಸಂಪರ್ಕದ ನಿಟ್ಟಿನಲ್ಲಿ ಬಹಳಷ್ಟು ಅನುಕೂಲಕರ ಸ್ಥಳವಾಗಿದ್ದ ಅನಂತ್ ಕುಮಾರ್ ಅವರ ಕಟ್ಟಡವನ್ನು ತೊರೆದು ಬೇರೆಡೆ ಕಚೇರಿಯನ್ನು ತೆರೆಯುವ ಕಾರಣ ಏನಿತ್ತು ಎಂದು ಕೇಳಿದರೆ ಯಾವ ಕಾರಣವೂ ಇಲ್ಲ ಎನ್ನುತ್ತಿದ್ದಾರೆ.

ಆದರೆ ಸೂಕ್ಷ್ಮಗಳ ಪ್ರಕಾರ ಅನಂತ್ ಕುಮಾರ್ ಅವರ ಸಾವಿನ ನಂತರ ಅವರ ಕಟ್ಟಡದಲ್ಲಿ ಸೂತಕದ ಛಾಯೆ ಇರುವಂತಹ ಸಾಧ್ಯತೆಯಿದ್ದು ಈ ಕಾರಣಕ್ಕಾಗಿಯೇ ತಮ್ಮ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿರುವ ತೇಜಸ್ವಿ ಸೂರ್ಯ ಅವರು ಸ್ಥಳದ ಆಯ್ಕೆಯ ವಿಷಯದಲ್ಲಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.

ಆದರೂ ಎಲ್ಲಾ ಬಿಟ್ಟು ಮಕ್ಕಳ ಕಲಿಕಾ ಶಿಬಿರಕ್ಕೆ ಬಳಕೆಯಾಗುತ್ತಿದ್ದ ಗ್ರಂಥಾಲಯವನ್ನೇ ಕಚೇರಿ ಯಾಗಿಸುವ ಬದಲು ಬೇರೆಡೆ ಕಚೇರಿಯನ್ನು ರೂಪಿಸಿಕೊಳ್ಳಬಹುದಾಗಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Please follow and like us:

Leave a Reply

Your email address will not be published. Required fields are marked *