ವಿಧಾನಸಭೆ ವಿರೋಧ ಪಕ್ಷದ ನಾಯಕ & ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ಧರಾಮಯ್ಯನವರ ಹೆಸರು ಬಹುತೇಕ ಅಂತಿಮ !

ರಾಜಕೀಯ ರಾಜ್ಯ

ಕಾಂಗ್ರೆಸ್ ನ ಜನಪ್ರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನೇ ವಿಧಾನಸಭೆ ವಿರೋಧ ಪಕ್ಷದ ನಾಯಕ & ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

Image result for siddaramaiah and sonia gandhi

ಹಲವಾರು ನಾಯಕರ ಸಭೆಯನ್ನು ನಡೆಸಿದ ನಂತರದಲ್ಲಿ ಸಿದ್ದರಾಮಯ್ಯನವರ ಹೆಸರನ್ನೇ ಸೂಚಿಸಿದ್ದರಿಂದ ಅವರ ಹೆಸರನ್ನೇ ಎರಡೂ ಸ್ಥಾನಗಳಿಗೂ ಸಹ ಅಂತಿಮಗೊಳಿಸಲು ಹೈಕಮಾಂಡ್ ನಿರ್ಧರಿಸಿದೆ.

ಸದನದ ಒಳಗೆ ಮತ್ತು ಹೊರಗೆ ಹೆಚ್ಚಿದ ಕಾಂಗ್ರೆಸ್ ಬಲ

ಈಗಾಗಲೇ ಜನಪ್ರಿಯತೆಯ ಮುದ್ರೆಯನ್ನು ಹೊಂದಿರುವ ಸಿದ್ದರಾಮಯ್ಯನವರಿಗೆ ನೀಡುತ್ತಿರುವ ಈ ಆಯ್ಕೆಯು ರಾಜ್ಯದಲ್ಲಿ ಕಾಂಗ್ರೆಸ್ ನ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿದ್ದು ಬಹು ಜನರ ಅಭಿಪ್ರಾಯದಂತೆಯೇ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಂತಿದೆ.

Image result for siddaramaiah and sonia gandhi

ಇನ್ನು ಸಿದ್ದರಾಮಯ್ಯನವರ ವಿರುದ್ಧ ದನಿ ಎತ್ತಲು ಆರಂಭಿಸಿದ್ದ ಬಿ.ಕೆ.ಹರಿಪ್ರಸಾದ್, ಮುನಿಯಪ್ಪ ಹಾಗೂ ಪರಮೇಶ್ವರ್ ಬಣವು ರಾಜ್ಯದಲ್ಲಿ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ಮಾಡಿದ ಪ್ರತಿರೋಧವು ಕೇವಲ ಪ್ರತಿರೋಧವಾಗಿಯೇ ಉಳಿದಿದೆ.

Please follow and like us:

Leave a Reply

Your email address will not be published. Required fields are marked *