ಸಿದ್ದರಾಮಯ್ಯ ಎಂಬ ಕನ್ನಡ ಮಾಧ್ಯಮ ಲೋಕದ ಟಿ.ಆರ್.ಪಿ ಸರಕು !

ರಾಜಕೀಯ ರಾಜ್ಯ

ಸಿದ್ದರಾಮಯ್ಯ ಎಂಬ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. 2013 ರಿಂದ 2018 ರವರೆಗೆ 5 ವರ್ಷದ ಪೂರ್ಣಾವಧಿಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾಗಿ ಯಶಸ್ವಿಯಾಗಿ ಸೇವೆಯನ್ನು ಸಲ್ಲಿಸಿದವರು. ತಮ್ಮ 5 ವರ್ಷಗಳ ಅವಧಿಯಲ್ಲಿ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಮಾತೃಪೂರ್ಣ, ಶಾದಿಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್, ರೈತರ ಸಾಲಮನ್ನಾದಂತಹ ಜನಪರ ಯೋಜನೆಯನ್ನು ನೀಡಿ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳೆಂದು ಹೆಸರು ಪಡೆದಿದ್ದು ಈಗಲೂ ಇವರ ಯೋಜನೆಗಳು ಬಹಳಷ್ಟು ಜನ ಬಡವರಿಗೆ ಅನುಕೂಲಕಾರಿಯಾಗಿವೆ.

Image result for siddaramaiah anna bhagya

ಆದರೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಸರಳ ಬಹುಮತ ಬರುವುದೆಂಬ ಸುದ್ದಿ ಪ್ರಕಟವಾಗಿದ್ದರೂ ಸಹ ಚುನಾವಣೆಯ ಫಲಿತಾಂಶದ ದಿನ ಮಾತ್ರ ಕಾಂಗ್ರೆಸ್ 78 ಸ್ಥಾನಗಳನ್ನು ಪಡೆಯುವಲ್ಲಿ ಮಾತ್ರ ಸಫಲವಾಗಿ, ಬಿಜೆಪಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊಮ್ಮಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿಯು ನಿರ್ಮಾಣವಾಯಿತು. ಈ ನಡುವೆ ನಾವು ಗಮನಿಸ ಬೇಕಾಗಿದ್ದು ಎಲ್ಲಾ ನಮ್ಮ ರಾಜ್ಯದ ಮಾಧ್ಯಮಗಳು ಹೇಗೆ ವರ್ತಿಸಿದವು ಎಂಬುದರ ಬಗ್ಗೆ.

ನಮಗೆ ಈಗಾಗಲೇ ತಿಳಿದಿರುವಂತೆ ಪತ್ರಿಕೋದ್ಯಮದ ಬಹಳಷ್ಟು ಡಿಜಿಟಲ್ ಹಾಗೂ ಪ್ರಿಂಟ್ ಮೀಡಿಯಾಗಳು ಬಿಜೆಪಿಯ ಮಾಲೀಕರನ್ನು ಹೊಂದಿದ್ದು ಸಹಜವಾಗಿಯೇ ಪತ್ರಿಕಾ ಧರ್ಮದ ನಿಷ್ಪಕ್ಷಪಾತ ಮೌಲ್ಯಗಳನ್ನು ಬಳಸಿ ಬಿಜೆಪಿಯ ಪರವಾಗಿ ಕೆಲಸ ಮಾಡುವುದನ್ನು ಕಂಡಿದ್ದೇವೆ. ಈ ಪೈಕಿ ಕರ್ನಾಟಕದ ಮಾಧ್ಯಮದವರಿಗೆ ಅತಿ ಹೆಚ್ಚಿನ ಟಿ ಆರ್ ಪಿ ಬರುವುದು ಪ್ರಧಾನಿ ಮೋದಿಯವರ ಸುದ್ದಿಗಳಿಂದ ಅಲ್ಲವಂತೆ.

Image result for siddaramaiah lost elections

ಹೌದು ! ಇವರಿಗೆ ಹೆಚ್ಚಿನ ಟಿ ಆರ್ ಪಿ ಯನ್ನು ತಂದುಕೊಡುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕುರಿತಾದ ನೆಗೆಟಿವ್ ಸುದ್ದಿಗಳಿಗಾಗಿ. ಕನ್ನಡ ಮಾಧ್ಯಮದ ಟಿ ಆರ್ ಪಿ ಲೆಕ್ಕಾಚಾರಗಳನ್ನು ಈ ಕೆಳಕಂಡಂತೆ ಇನ್ನಷ್ಟು ಸೂಚ್ಯವಾಗಿ ಗಮನಿಸಬಹುದಾಗಿದೆ.

  • ಯಡಿಯೂರಪ್ಪ ಹಾಗೂ ಬಿಜೆಪಿಯ ಪರವಾದ ಸುದ್ದಿಗಳಿಗೆ ಬರುವ ಪ್ರತಿಕ್ರಿಯೆಗಳು ನೀರಸವಾಗಿರುತ್ತದೆ. ಅದು ಕೇವಲ ಯಾವುದೋ ಒಂದು ಜಾತಿಗೆ ಸೀಮಿತವಾದ ಮತ್ತು ಅಷ್ಟೊಂದು ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಪ್ರತಿಕ್ರಿಯೆಗಳನ್ನು ಪಡೆಯದ ಸುದ್ದಿಗಳಾಗಿವೆ.
  • ಇನ್ನು ಮೋದಿ ಪರವಾದ ಸುದ್ದಿಗಳೂ ಸಹ ಯಾವಾಗಲೋ ಒಮ್ಮೆ (ಯುದ್ಧ, ಪಾಕಿಸ್ತಾನದ ಸಂದರ್ಭದಲ್ಲಿ ಬಿಟ್ಟರೆ ) ಹೆಚ್ಚಿನ ಟಿ ಆರ್ ಪಿಯನ್ನು ಪಡೆಯುತ್ತದೆ.  ಇನ್ನು ಬಿಜೆಪಿಯ ಕೇಂದ್ರ ನಾಯಕರ ಸುದ್ದಿಗಳಿಗಳಿಗೆ ಅಷ್ಟಾಗಿ ಟಿ ಆರ್ ಪಿ ಇಲ್ಲ.
  • ಇನ್ನು ಮಾಧ್ಯಮಗಳು ಸೃಷ್ಟಿಸಿದ ಸಾಂದರ್ಭಿಕ ಟಿಆರ್ ಪಿ ಶಿಶುಗಳಾದ ಹುಚ್ಚ ವೆಂಕಟ್. ಕುರಿ ಹನುಮಂತ ಅಂತವರು ಎಂದೋ ಒಮ್ಮೆ ಅಪರೂಪಕ್ಕೆ ಸಿಗುವ ಟಿ ಆರ್ ಪಿ ಸರಕಾದರೂ ಅವುಗಳು ಬಹಳ ಕಾಲ ಬಾಳುವುದಿಲ್ಲ.
  • ಅದಷ್ಟೇ ಅಲ್ಲದೇ ಹೆಚ್.ಡಿ.ದೆವೇಗೌಡ ಹಾಗೂ ಕುಮಾರಸ್ವಾಮಿಯವರಿಗೆ ಸಂಬಂಧಿಸಿದ ಸುದ್ದಿಗಳು ಚುನಾವಣಾ ವೇಳೆಯಲ್ಲಿ ಬಿಟ್ಟು ಬೇರೆಯ ಸಂದರ್ಭದಲ್ಲಿ ಅಷ್ಟಾಗಿ ಮಹತ್ವ ಪಡೆದುಕೊಳ್ಳುವುದಿಲ್ಲ.

ಆದರೆ ಸಿದ್ದರಾಮಯ್ಯನವರ ವಿಷಯ ಹಾಗಲ್ಲ. ಅವರ ಕುರಿತಂತೆ ಬರುವ ಎಲ್ಲಾ ಸುದ್ದಿಗಳೂ ಸಹ ಬಹುತೇಕ ನೆಗೇಟಿವ್ ಆಗಿರುತ್ತದೆ ಅಥವಾ ಹಾಗೆ ರೂಪಿಸಲಾಗಿರುತ್ತದೆ. ಈ ನೆಗೆಟೀವ್ ದೃಷ್ಟಿಯಲ್ಲಿ ಎಷ್ಟು ಸ್ಟೋರಿಗಳನ್ನು ಮಾಡಿದರೂ ಸಹ ಮೇಲ್ಜಾತಿಯ ವೀಕ್ಷಕರು ಮತ್ತು ಬಿಜೆಪಿಯ ಬೆಂಬಲಿಗರು ಹೆಚ್ಚು ಹೆಚ್ಚು ಶೇರ್ ಮಾಡುವ ಮೂಲಕ, ಮೂಲ ನೆಗೇಟಿವ್ ಸುದ್ದಿಗೆ ಇನ್ನಷ್ಟು ಮಸಾಲೆಯನ್ನು ಬೆರೆಸಿ ಹರಡಿಸುತ್ತಾರೆ ಮತ್ತು ಮಾರುಕಟ್ಟೆ ದೃಷ್ಟಿಯಲ್ಲಿ ಅತಿ ಹೆಚ್ಚಿನ ಟಿ ಆರ್ ಪಿ ಗಳಿಸುವ ಸರಕೂ ಕೂಡಾ ಅದಾಗಿದೆ.

Image result for Narendra modi

ಈ ಟಿ ಆರ್ ಪಿ ಸರಕು ಸಿದ್ದರಾಮಯ್ಯನವರೇ ಎಂದು ಹೇಳಲು ಇನ್ನಷ್ಟು ಬಲವಾದ ಕಾರಣಗಳು ಇವೆ. ಅದರಲ್ಲಿ ಮುಖ್ಯವಾಗಿ ಸಿದ್ದರಾಮಯ್ಯನವರು ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯದ ನಾಯಕರಾಗಿದ್ದು ಅವರನ್ನು ಬೆಂಬಲಿಸುವ ಅತಿದೊಡ್ಡ ಬಳಗವೇ ಇದೆ. ಸಿದ್ದರಾಮಯ್ಯನವರು ವ್ಯಕ್ತಿಗತವಾಗಿ ರಾಜಕೀಯದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಬಲ್ಲಂತಹ ದೊಡ್ಡ ಶಕ್ತಿಕೇಂದ್ರವೇ ಆಗಿರುವುದರಿಂದ ಅಧಿಕಾರಕ್ಕೆ ಅವರನ್ನು ಅನೈತಿಕಗೊಳಿಸುವ ಪ್ರಯತ್ನಗಳು ಹೆಚ್ಚೇ ಆಗಿವೆ. ಮತ್ತು ಇಂತಹ ಅನೈತಿಕ ಗೊಳಿಸುವ ಸಂಗತಿಯನ್ನು ವಿರೋಧಿಸುವ ಬಣವು ದೊಡ್ಡದಾಗಿರುವಂತೆ ಅವರನ್ನು ಬೆಂಬಲಿಸುವ ಬಣವೂ ಸಹ ದೊಡ್ಡದಾಗಿದೆ.

ಹೀಗಾಗಿ ಸಿದ್ದರಾಮಯ್ಯನವರ ಕುರಿತ ನೆಗೇಟಿವ್ ಸ್ಟೋರಿಗಳನ್ನು ಹೆಚ್ಚು ಹೆಚ್ಚು ಪಸರಿಸುವುದು ಕನ್ನಡದ ಮಾಧ್ಯಮಗಳಿಗೆ ಎಲ್ಲೂ ಸಿಗದ ಟಿ ಆರ್ ಪಿಯನ್ನು ತಂದುಕೊಡುತ್ತದೆ. ಹೀಗಾಗಿ ಅವರ ಒಂದು ಸಣ್ಣ ಪ್ರತಿಕ್ರಿಯೆಯನ್ನೂ ಸಹ ದೊಡ್ಡ ಸುದ್ದಿಯಾಗಿ ಬ್ರೇಕಿಂಗ್ ನ್ಯೂಸ್ ಮಾಡುವುದು ನಮ್ಮ ಸದ್ಯದ ಕನ್ನಡ ಮಾಧ್ಯಮ ಲೋಕದ ದಿನಚರಿಯಾಗಿದ್ದು ಸಿದ್ದರಾಮಯ್ಯನವರನ್ನು “ಕನ್ನಡ ಮಾಧ್ಯಮ ಲೋಕದ ಟಿ ಆರ್ ಪಿ ಡಾರ್ಲಿಂಗ್ ” ಎನ್ನಬಹುದು.

Image result for siddaramaiah

ಈ ಟಿ ಆರ್ ಪಿಯ ಭಾಗವಾಗಿಯೇ ಇಂದು ಅಗತ್ಯಕ್ಕಿಂತಲೂ ಹೆಚ್ಚಾಗಿ ಪ್ರಸಾರ ವಾಗುತ್ತಿರುವ ದೇವೇಗೌಡ –ಸಿದ್ದರಾಮಯ್ಯನವರ ಸುದ್ದಿ, ಕಳೆದ ಚುನಾವಣೆಯಲ್ಲಿ ದಿನಬೆಳಗಾದರೆ ಕಾಣುತ್ತಿದ್ದ ಲಿಂಗಾಯತ ಧರ್ಮ ಒಡೆಯುವ ಹಾಗೂ ಹಿಂದುತ್ವಕ್ಕೆ ಸಂಬಂಧಿಸಿದಂತಹ ಮತ್ತು ಮೈತ್ರಿ ಸರ್ಕಾರವನ್ನು ಒಡೆಯಲು ಸಿದ್ಧರಾಮಯ್ಯನೇ ಕಾರಣ ಎಂಬಂತಹ ಸುದ್ದಿಗಳನ್ನು ಮಾಧ್ಯಮದಲ್ಲಿ ಹರಿಯಬಿಡಲಾಗುತ್ತಿದ್ದು ಈ ಪ್ರಕ್ರಿಯೆ ಇನ್ನು ಮುಂದೆಯೂ ಸಹ ಹೀಗೆ ಮುಂದುವರೆಯಲಿದೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಎಂದರೆ ಕೇವಲ ಜನ ನಾಯಕರಾಗಿರದೇ ಮಾಧ್ಯಮ ಲೋಕದ ಟಿ ಆರ್ ಪಿ ಹಸಿವನ್ನು ಸಮರ್ಥವಾಗಿ ನೀಗಿಸುವ ಸರಕಾಗಿರುವುದು ಈ ಸದ್ಯ ನಮಗೆಲ್ಲಾ ಸುಲಭವಾಗಿ ಅರ್ಥವಾಗಬೇಕಾದ ಸಂಗತಿಯಾಗಿದೆ.

Please follow and like us:

1 thought on “ಸಿದ್ದರಾಮಯ್ಯ ಎಂಬ ಕನ್ನಡ ಮಾಧ್ಯಮ ಲೋಕದ ಟಿ.ಆರ್.ಪಿ ಸರಕು !

  1. ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದ ಶಕ್ತಿ. ಮಾದ್ಯಮಗಳು ಸಿದ್ದರಾಮಯ್ಯನವರನ್ನು ಎಷ್ಟೆ ನೆಗೆಟಿವ್ ಆಗಿ ತೋರಿಸಿದರು ಕೂಡಾ ಅವರ ವರ್ಚಸ್ಸು ಕಡಿಮೆ ಆಗಲ್ಲ.

Leave a Reply

Your email address will not be published. Required fields are marked *