ವೈವಿಧ್ಯತೆಯಲ್ಲಿ ಏಕತೆ ಸಂದೇಶ ಹರಡಲು 4600 ಕಿ.ಮೀ ಸೈಕಲ್ ಜಾಥಾ ನಡೆಸುತ್ತಿರುವ ಸಂತೋಷ್ ಕೋಲ್ಕುಂದ ಎಂಬ ಯುವಕ !

ರಾಜಕೀಯ ರಾಷ್ಟ್ರೀಯ

ದೇಶದ ಯುವಕರಲ್ಲಿ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಹರಡುವ ಮಹತ್ತರ ಉದ್ದೇಶವನ್ನು ಇಟ್ಟುಕೊಂಡು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸುಮಾರು 4,600 ಕಿಲೋ ಮೀಟರ್ ಗಳಷ್ಟು ದೂರದ ಸೈಕಲ್ ಜಾಥಾವನ್ನು ಮಾಡುತ್ತಿರುವ ಯುವಕ ಸಂತೋಷ್ ಕೋಲ್ಕುಂದ ಅವರು ಈ ಮೂಲಕ ಒಂದಷ್ಟು ಹಣವನ್ನು ಸಂಗ್ರಹಿಸಿ ದೇಶದ ವೈವಿಧ್ಯತೆಯಲ್ಲಿ ಏಕತೆ ಎಂಬ ಆಶಯದೆಡೆಗೆ ಕೆಲಸ ಮಾಡುತ್ತಿರುವ ಎನ್ ಜಿಓ ಗಳಿಗೆ ನೀಡುವ ಉದ್ದೇಶವನ್ನು ಹೊಂದಿದ್ದಾರೆ.

ಒಟ್ಟು 40 ದಿನಗಳ ತಮ್ಮ ಈ ಸುದೀರ್ಘ ಪಯಣದಲ್ಲಿ ಸುಮಾರು 12 ರಾಜ್ಯಗಳ ಮೂಲಕ ಹಾದು ಹೋಗುವ ಇವರು ಈಗಾಗಲೇ ತಮ್ಮ 14 ದಿನಗಳ ಪಯಣವನ್ನು ಪೂರೈಸಿದ್ದು ಇನ್ನೂ 26 ದಿನಗಳ ಪಯಣವು ಬಾಕಿ ಉಳಿದಿದೆ. ತಮ್ಮ ಯಾತ್ರೆಯ ಮೂಲಕ ಒಟ್ಟು 5 ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹಣೆಯ ಉದ್ದೇಶವನ್ನು ಹೊಂದಿರುವ ಇವರು ಆ ಹಣವನ್ನು ಆರೋಗ್ಯ, ಶಿಕ್ಷಣ, ಕ್ರೀಡೆ ಹಾಗೂ ಪರಿಸರದ ಹಿತಕ್ಕಾಗಿ ಕೆಲಸ ಮಾಡುವ ಸಂಘ ಸಂಸ್ಥೆಗಳಿಗೆ ನೀಡಲಿದ್ದಾರೆ.

ಸದ್ಯ ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿಗಳಾಗಿರುವ ಸಂತೋಷ್ ಅವರು ಪ್ರಸ್ತುತ ಛತ್ತೀಸ್ ಗಡ, ಅಂಡಮಾನ್ & ನಿಕೋಬಾರ್ ಹಾಗೂ ಆಂಧ್ರಪ್ರದೇಶದ ಉಸ್ತುವಾರಿಕೆಯನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದು ತಮ್ಮ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಯುವ ಕಾಂಗ್ರೆಸ್ ವೇದಿಕೆಯ ಬೆಂಬಲವನ್ನು ಮನದುಂಬಿ ನೆನೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *