ರಿಷಬ್ ಪಂತ್ ಅಸಮರ್ಥ ನಿರ್ವಹಣೆ – ಭಾರತಕ್ಕೆ ಸರಣಿ ಸೋಲು !

ಕ್ರಿಕೆಟ್ ಕ್ರೀಡೆ

ವಿಶ್ವಕಪ್ ಗೆ ಮುನ್ನ ಅಭ್ಯಾಸದಂತೆ ಇರುವ ಭಾರತ – ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತವು 2-3 ಅಂತರದಿಂದ ಸೋಲು ಕಂಡಿದ್ದು ವಿಶ್ವಕಪ್ ಗೆ ತಾನಿನ್ನೂ ಸಂಪೂರ್ಣವಾಗಿ ಸಜ್ಜಾಗಿಲ್ಲ ಎಂಬ ಸಂದೇಶವನ್ನು ಸಾರಿದೆ.

Related image

ಧವನ್, ಕೋಹ್ಲಿ, ಶರ್ಮಾ ಹಾಗೂ ಬೂಮ್ರಾ ಹೊರತಾಗಿ ಮಿಕ್ಕವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಹಿನ್ನಲೆಯಲ್ಲಿ ತಂಡವು ಕೆಟ್ಟದಾಗಿ ಸೋಲು ಕಂಡಿದ್ದು ಸತತವಾಗಿ 2 ಗೆಲುವು ಗಳಿಸಿದರೂ ಸಹ ಸರಣಿಯನ್ನು ಗೆಲ್ಲಲು ವಿಫಲವಾಗಿದೆ.

ರಿಷಬ್ ಪಂತ್ ಅಸಮರ್ಥ ನಿರ್ವಹಣೆ :

ಧೋನಿಯ ನಂತರ ಭಾರತೀಯ ಕ್ರಿಕೆಟ್ ಗೆ ಉತ್ತಮ ವಿಕೆಟ್ ಕೀಪರ್ ಎಂದು ಪರಿಗಣಿತವಾಗಿದ್ದ ರಿಷಬ್ ಪಂತ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಲ್ಲಿ ಸಂಪೂರ್ಣ ವಿಫಲಗೊಳ್ಳುವ ಮೂಲಕ ಸರಣಿ ಸೋಲಿಗೆ ಕಾರಣವಾಗಿದ್ದಾರೆ.

ಸರಣಿಯ ನಾಲ್ಕು ಮತ್ತು ಐದನೇ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಆಡುವಲ್ಲಿ ವಿಫಲರಾದ ಇವರು ವಿಕೆಟ್ ಕೀಪಿಂಗ್ ನಲ್ಲಿಯೂ ಸಹ ಸ್ಟಂಪಿಂಗ್ ಮತ್ತು ಕೆಲವು ಪ್ರಮುಖ ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ಪಂದ್ಯ ಸೋಲಲು ಕಾರಣವಾಗಿದ್ದರು. ಇವರ ಮೇಲೆ ಇಟ್ಟಿದ್ದ  ನಂಬಿಕೆಯು ಹುಸಿಯಾಗಿರುವ ಹಿನ್ನಲೆಯಲ್ಲಿ ಬಹುಶಃ  ಮುಂದಿನ ಸರಣಿಗಳಲ್ಲಿ ಪಂತ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.

Please follow and like us:

Leave a Reply

Your email address will not be published. Required fields are marked *