ರಾಮ ಮಂದಿರ & ಬಾಬ್ರಿ ಮಸೀದಿಯ ಜಾಗದಲ್ಲಿ ಒಂದು ಉತ್ತಮ ಶಾಲೆಯನ್ನೋ, ಗ್ರಂಥಾಲಯವನ್ನೋ ನಿರ್ಮಿಸಿದರೆ ಹೇಗೆ ? ನಿಮ್ಮ ಅಭಿಪ್ರಾಯವೇನು ?

ಬೆಂಗಳೂರು ರಾಜ್ಯ

ಮತ್ತೊಮ್ಮೆ ಭಾರತದ ಮುಗಿಯದ ಅಧ್ಯಾಯದಂತೆ ರಾಮ ಮಂದಿರ ನಿರ್ಮಾಣದ ವಿಷಯವು  ಮುನ್ನೆಲೆಗೆ ಬಂದಿದೆ. ಅದಾಗಲೇ ಹಳಸಲು ವಿಷಯವಾಗಿ ಮಾರ್ಪಟ್ಟಿರುವ ಈ ಸಂಗತಿಯು ಸುಮಾರು 2 ದಶಕಗಳಿಂದ ಬಿಜೆಪಿಯ ಮತಬ್ಯಾಂಕ್ ವಿಷಯವಾಗಿದೆ ಎಂಬುದು ರಾಜಕೀಯ ವಲಯದಲ್ಲಿ ಸಕ್ರಿಯವಾಗಿರುವ ಮಂದಿಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ.

Image result for sulibele

ಇನ್ನು ಇದೀಗ ಬಿಜೆಪಿಯ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ “ರಾಮ ಮಂದಿರವನ್ನು ಇಷ್ಟರಲ್ಲೇ ನಿರ್ಮಿಸಲಾಗುವುದು “ ಎಂಬ ಹೇಳಿಕೆಯನ್ನು ನೀಡಿದ್ದು ಈ ಬರಹವು ಮೂಡಲು ಅದೇ ಪ್ರಮುಖ ಕಾರಣವಾಗಿದೆ.

ಅಷ್ಟಕ್ಕೂ ಸಾವಿರಾರು ದೇವಾಲಯ, ಮಸೀದಿ & ಚರ್ಚುಗಳ ತಾಣವಾಗಿರುವ ಭಾರತದಲ್ಲಿ ಧರ್ಮಾಚರಣೆಗಳು ಯೆಥೇಚ್ಛವಾಗಿವೆ. ಅದರಲ್ಲೂ ಹಿಂದೂಗಳ ಪಾಲಿಗೆ ಮುಕ್ಕೋಟಿ ದೇವರುಗಳು ಇವೆ ಎಂದು ಹೇಳಲಾಗಿದ್ದು ಒಂದೊಂದು ಸಮುದಾಯವೂ ಸಹ ಒಂದೊಂದು ದೇವರನ್ನು ನಂಬಿ ಪೂಜಿಸುತ್ತದೆ. ಈ ಪೈಕಿ ಶ್ರೀರಾಮನಿಗೆ ಮಾತ್ರ ವಿಶೇಷ ಸ್ಥಾನವನ್ನು ಕಲ್ಪಿಸಿಕೊಳ್ಳಲಾಗಿದ್ದು ಆತನನ್ನು ದೇವರ ಸ್ಥಾನದಿಂದ ಇದೀ ಕೋಮುಗಲಭೆ ಎಬ್ಬಿಸುವ ಸಲಕರಣೆಯವರೆಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಶ್ರೀರಾಮನ ಪಾತ್ರವು ಅಸಹಾಯಕತೆಯಿಂದ ನರಳುತ್ತಿರುವ ಹಾಗೆ ಧರ್ಮಾಂಧರ ಕಾಟಕ್ಕೆ ಸಿಲುಕಿ ಯೇಸುಕ್ರಿಸ್ತ ಹಾಗೂ ಇಸ್ಲಾಮಿನ ಅಲ್ಲಾಹುವಿನ ಪಾತ್ರವೂ ಕೂಡಾ ನರಳುತ್ತಿದೆ.

ಯಾರಿಗೆ ಬೇಕು ದೇವಸ್ಥಾನ & ಮಸೀದಿ ?

ಸಾವಿರಾರು ದೇವಸ್ಥಾನ & ಮಸೀದಿಗಳು ಇರುವ ಈ ದೇಶದಲ್ಲಿ ಈಗಲೂ ದೇವಸ್ಥಾನ ಮತ್ತು ಮಸೀದಿಯ ನಿರ್ಮಾಣ ವಿಷಯವು ದೊಡ್ಡ ಸಮಸ್ಯೆಯಾಗಿರುವುದು ಹಾಸ್ಯಾಸ್ಪದವಾದ ಸಂಗತಿಯಾಗಿದೆ. ಅಷ್ಟಕ್ಕೂ ಈ ದೇವಸ್ಥಾನ ಮತ್ತು ಮಸೀದಿಗಳಿಂದ ಜನ ಸಾಮಾನ್ಯರ ಬದುಕಿಗೆ ಏನಾದರೂ ಉಪಯೋಗವಿದೆಯೇ ಎಂದು ನೋಡಿದರೆ ಯಾವ ಕಾರಣಕ್ಕೂ ಸಹ ಕಿಂಚಿತ್ತು ಉಪಯೋಗವಿಲ್ಲ.

ಆದರೂ ಸಹ ಬಾಬ್ರಿ ಮಸೀದಿ ಮತ್ತು ರಾಮ ಮಂದಿರದ ವಿಷಯವು ಪ್ರತಿ ವರ್ಷವೂ ಸಹ ದೊಡ್ಡ ಚರ್ಚಾ ವಿಷಯವಾಗಿಯೇ ಇದ್ದು ಬಹಳಷ್ಟು ಮಂದಿಯ ಅಮೂಲ್ಯ ಸಮಯ, ಶ್ರಮ ಮತ್ತು ಆಲೋಚನೆಯನ್ನು ಕೊಲ್ಲುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಹೀಗಾಗಿ ದೇವರ ಹೆಸರಲ್ಲಿ ರಾಜಕೀಯ ಪಕ್ಷಗಳು ಆಡುವ ಈ ಆಟಗಳು,

ಪರಿಹಾರ ಕ್ರಮವೇನು?

ಇದಕ್ಕೆ ಪರಿಹಾರವನ್ನು ಹುಡುಕಬಹುದಾದರೆ ಈ ದೇಶದ ಸ್ವಾಸ್ಥ್ಯ ಸಮಾಜದ ಬಗ್ಗೆ ಕನಸನ್ನು ಹೊತ್ತಿರುವ ಜನರು ದೊಡ್ಡ ಮಟ್ಟದ ಸಹಿ ಸಂಗ್ರಹಣೆ, ಮೌಖಿಕ & ಲಿಖಿತ ಅಭಿಪ್ರಾಯ ಸಂಗ್ರಹಣೆಯ ಮೂಲಕ ಸರ್ಕಾರಕ್ಕೆ & ವಿಭಿನ್ನ ಪಕ್ಷದ ನಾಯಕರುಗಳಿಗೆ ಪತ್ರವನ್ನು ಬರೆದು ತಮ್ಮ ದೂರುಗಳನ್ನು ಹಿಂತೆಗೆದುಕೊಂಡು ವಿವಾದಿತ ಸ್ಥಳದಲ್ಲಿ ಒಂದು ಉತ್ತಮವಾದ ಶಾಲೆಯನ್ನೋ, ಗ್ರಂಥಾಲಯವನ್ನೋ ಅಥವಾ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ಉಪಯೋಗವಾಗುವ ಸಂಸ್ಥೆಯೊಂದನ್ನೋ ಕಟ್ಟಬಹುದು ಎಂದು ಸಲಹೆಯನ್ನು ನೀಡಬೇಕು.

Image result for library

ರಾಜಕೀಯ ಪಕ್ಷಗಳು ರಾಮ ಮಂದಿರ ಮತ್ತು ಬಾಬ್ರಿ ಮಸೀದಿಯನ್ನು ಕಟ್ಟುವ ವಿಷಯದಲ್ಲಿ  ಜನರ ಭಾವನೆಯೊಂದಿಗೆ ರಾಜಕೀಯ ಮಾಡುತ್ತಿರುವಂತೆ ಜನರೂ ಕೂಡಾ ಈ ಸಮಸ್ಯೆಯನ್ನು ಮುಂದುವರೆಸಿದರೆ ನಿಮಗೆ ಮತ ನೀಡುವುದಿಲ್ಲ ಎಂದು ಹೇಳುವ ಆಂದೋಲನವನ್ನು ಕೈಗೊಳ್ಳಬೇಕು. ಬಹುಶಃ ಆಗೇನಾದರೂ ಒಂದಿಷ್ಟರ ಮಟ್ಟಿನ ಶಾಂತಿಯುತ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರಬಹುದು.

ಧರ್ಮೀಯರ ಪಾಡೇನು ?

ಮಂದಿರ ಮತ್ತು ಮಸೀದಿಯ ವಿಷಯದಲ್ಲಿ ಕಿತ್ತಾಡುತ್ತಿರುವ ಧರ್ಮೀಯರು ಇರುವ ಮಂದಿರ ಮತ್ತು ಮಸೀದಿಗಳಿಗೆ ತೆರಳಿ ತಮ್ಮ ಆಚರಣೆಗಳನ್ನು ಮುಂದುವರೆಸಬೇಕು. ಇಲ್ಲ ನಮಗೆ ಮಸೀದಿ ಮತ್ತು ಮಂದಿರಗಳು ನಿರ್ಮಾಣವಾಗಲೇಬೇಕು ಅಂತಿದ್ದರೆ ಅವರು ಎರಡು ವಿಭಿನ್ನ ಸ್ಥಳವನ್ನು ಆಯ್ದುಕೊಂಡು ಅಲ್ಲಿ ತಮಗೆ ಬೇಕಾದ ಹಾಗೆ ಮಂದಿರ & ಮಸೀದಿಯನ್ನು ಕಟ್ಟಿಕೊಳ್ಳಲಿ.

Image result for hindu and muslim

ಆದರೆ ಎಂದೂ ಮುಗಿಯದ ಸಮಸ್ಯೆಯಾಗಿರುವ ಆ ವಿವಾದಿತ ಸ್ಥಳವನ್ನೇ ರಾಜಕೀಯವಾಗಿ ಬಳಸಿಕೊಳ್ಳುತ್ತಾ ದೇಶದ ಅಭಿವೃದ್ಧಿಯ ವಿಷಯಗಳನ್ನು ಪಕ್ಕಕ್ಕಿಟ್ಟು, ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿಸುವುದು ಅಷ್ಟೊಂದು ಒಳ್ಳೆಯ ಬೆಳವಣಿಗೆ ಖಂಡಿತಾ ಆಗಲಾರದು !

Please follow and like us:

Leave a Reply

Your email address will not be published. Required fields are marked *