ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ ಚೇತೇಶ್ವರ ಪೂಜಾರ!

ಕ್ರಿಕೆಟ್ ಕ್ರೀಡೆ

ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ನೇ ಶತಕವನ್ನು  ಬಾರಿಸಿದ ಒಂಬತ್ತನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಕರ್ನಾಟಕದ  ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿರುವ ಚೇತೇಶ್ವರ, ಅಮೋಘ ಶತಕ ಸಿಡಿಸುವ ಮೂಲಕ  ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ. 

Image result for pujara ton vs karnataka

ರಾಜ್ ಕೋಟ್ ನಲ್ಲಿ ನೆಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡದ  ನಾಯಕ ಶ್ರೇಯಸ್ ಸೇರಿದಂತೆ ಮೂವರು   ಸ್ಪಿನ್ನರ್‌ಗಳಿಗೆ ಶೆಲ್ಡರ್ ಮತ್ತು ಪೂಜಾರ  ಜೊತೆಯಾಟವನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಅಲ್ಲದೇ  ದಿನದಾಟದಲ್ಲಿ ತಾವೆ ಎದುರಿಸಿದ 7ನೇ  ಎಸೆತದಲ್ಲಿ ಶತಕದ ಗಡಿ ದಾಟಿದ ಶೆಲ್ಡರ್, ಬಿರುಸಿನ ಆಟ ಪ್ರಾರಂಭಿಸಿದರು.ಇದರಿಂದಾಗಿ  ಪಂದ್ಯದಲ್ಲಿ ರನ್‌ ಗಳಿಕೆ ಹೆಚ್ಚಾಯಿತು. 

ಇನ್ನೊಂದೆಡೆ ಚೇತೇಶ್ವರ ಪೂಜಾರ ಅವರು  ತಮ್ಮ ವೈಯಕ್ತಿಕ ದ್ವಿ ಶತಕವನ್ನು ಸಿಡಿಸುವುದರ ಮೂಲಕ  ತಂಡದ ಮೊತ್ತವನ್ನು ಹೆಚ್ಚಿಸಿವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. 

Image result for sachin 1st class career

 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ  ಹೆಚ್ಚಿನ ಶತಕಗಳನ್ನು ಸಿಡಿಸಿದ  ಭಾರತೀಯ ಬ್ಯಾಟ್ಸ್‌ಮನ್‌ಗಳು:

1. ಸಚಿನ್ ತೆಂಡೂಲ್ಕರ್ 81 (310 ಪಂದ್ಯ)

2. ಸುನಿಲ್ ಗವಾಸ್ಕರ್ 81 (348 ಪಂದ್ಯ)

3. ರಾಹುಲ್ ದ್ರಾವಿಡ್ 68 (298 ಪಂದ್ಯ)

4. ವಿಜಯ್ ಹಜಾರೆ 60 (238 ಪಂದ್ಯ)

5. ವಾಸೀಂ ಜಾಫರ್ 57 (257 ಪಂದ್ಯ)

6. ದಿಲೀಪ್ ವೆಂಗಾಸರ್ಕಾರ್ 55 (260 ಪಂದ್ಯ)

7. ವಿವಿಎಸ್ ಲಕ್ಷ್ಮಣ್ 55 (267 ಪಂದ್ಯ)

8. ಮೊಹಮ್ಮದ್ ಅಜರುದ್ದೀನ್ 54 (229 ಪಂದ್ಯ)

9. ಚೇತೇಶ್ವರ ಪೂಜಾರ 50 (198 ಪಂದ್ಯ)

10. ಪಾಲಿ ಉಮ್ರಿಗಾರ್ 49 (243 ಪಂದ್ಯ)

Please follow and like us:

Leave a Reply

Your email address will not be published. Required fields are marked *