ನೆರೆ ಸಂತ್ರಸ್ತರ ಪರಿಸ್ಥಿತಿ ತಿಳಿದಿದ್ದೂ “ಎಲ್ಲಾ ಚೆನ್ನಾಗಿದೆ” ಎನ್ನುತ್ತಿರುವ ನಯವಂಚಕ ಪ್ರಧಾನಿ ಮೋದಿ !

ರಾಜಕೀಯ ರಾಷ್ಟ್ರೀಯ

ಹೌಡಿ ಮೋದಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಮೋದಿಯವರು ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾಲ್ಕೈದು ಭಾಷೆಗಳಲ್ಲಿ ಪ್ರಕಟಿಸುವ ಮೂಲಕ ವಿಶ್ವದ ವೇದಿಕೆಯಲ್ಲಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಮುಂದುವರೆಸಿದ್ದಾರೆ. ಈಗಾಗಲೇ ಪ್ರಧಾನಿಯವರಿಗೆ ನೆರೆ ಸಂತ್ರಸ್ತರ ಬಗ್ಗೆ ಮಾಹಿತಿಯಿದ್ದೂ ಸಹ ನೆರೆ ಪರಿಹಾರಕ್ಕೆ ಸೂಕ್ತ ಹಣಕಾಸಿನ ನೆರವನ್ನು ಕಲ್ಪಿಸದೇ ಅಮೇರಿಕಾದೊಳಗೆ ಯಾವುದೋ ಜನರ ಮುಂದೆ ಎಲ್ಲವರೂ ಚೆನ್ನಾಗಿದೆ ಎಂದು ಸುಳ್ಳು ಹೇಳುವ ಮೂಲಕ ತಾವೆಂತಹ ನಯವಂಚಕ ಎಂಬುದನ್ನು ಸಾಬೀತು ಮಾಡಿದ್ದಾರೆ.

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು  ಬೇಕೆನ್ನುವ ಕೀಳು ಪ್ರವೃತ್ತಿ !

ನಮ್ಮ ಪ್ರಧಾನಿಗಳು ಸಂಪೂರ್ಣ ಸ್ಥಿಮಿತ ಕಳೆದುಕೊಂಡಂತಿದೆ. ಹೀಗಾಗಿಯೇ ಇಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದು ದೇಶದ ಸಮಸ್ಯೆಯನ್ನು ಮರೆ ಮಾಚುವ ಕೆಲಸವನ್ನು ಮಾಡುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಹಣವಿಲ್ಲದ ಮೋದಿಯವರು ಇದೀಗ ಹೌಡಿ ಮೋದಿ ಕಾರ್ಯಕ್ರಮಕ್ಕೆ ಹಣ ವ್ಯಯಿಸುತ್ತಿರುವದನ್ನು ನೋಡಿದರೆ ಎಲ್ಲಿಂದ ನಗಬೇಕೆಂದು ತಿಳಿಯದಾಗಿದೆ.

Image result for howdy modi

ಬಹುಶಃ ಒಂದಕ್ಕೊಂದು ಸಂಬಂಧವಿಲ್ಲದ ಹಾಗೆ ಆಡಳಿತ ನಡೆಸುವುದನ್ನೇ ಪ್ರವೃತ್ತಿ ಮಾಡಿಕೊಂಡಿರುವ ಇವರಿಗೆ ದೇಶದ ಸಮಸ್ಯೆಗಳು ಕಾಣದೇ ಹೋಗಿರುವುದು ದುರಂತದ ಸಂಗತಿಯಾಗಿದೆ. ಪ್ರಧಾನಿಗಳೇ ನೀವು ಟ್ರಂಪ್ ಅವರನ್ನು ಭೇಟಿ ಮಾಡಿದಾಕ್ಷಣ ದೇಶದ ಆರ್ಥಿಕ ಕುಸಿತ ಸಮಸ್ಯೆ ನಿವಾರಣೆ ಆಗುವುದಿಲ್ಲ. ನೆರೆ ಸಂತ್ರಸ್ತರಿಗೆ ಪರಿಹಾರ ದೊರೆಯುವುದಿಲ್ಲ. ದಯಮಾಡಿ ಮತ್ತೆ ಮತ್ತೆ ದೇಶದ ಜನರನ್ನು ಅಸಹಾಯಕರನ್ನಾಗಿಸುವ ಕೆಲಸ ಮಾಡದೇ, ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಿ.

Please follow and like us:

Leave a Reply

Your email address will not be published. Required fields are marked *