ಶಾಸಕನಲ್ಲದ ಹಾಗೂ ಕಲಾಪದಲ್ಲಿ ಬ್ಲೂ ಫಿಲಂ ನೋಡಿದ ವ್ಯಕ್ತಿಯೇ ಇಂದು ಕರ್ನಾಟಕದ ಉಪ ಮುಖ್ಯಮಂತ್ರಿ !

Uncategorized ರಾಜಕೀಯ ರಾಜ್ಯ

ಸುವರ್ಣಯುಗದ ಸೋಗಿನಲ್ಲಿ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರು ಇದೀಗ ಮೂವರಿಗೆ ತಮ್ಮ ಕ್ಯಾಬಿನೆಟ್ ನಲ್ಲಿ ಡಿಸಿಎಂ ಸ್ಥಾನವನ್ನು ನೀಡಿದ್ದು ಈ ಪೈಕಿ ಸದನದಲ್ಲಿ ಬ್ಲೂ ಫಿಲಂ ನೋಡುತ್ತಿದ್ದ ಅಥಣಿಯ ಮಾಜಿ ಶಾಸಕ ಲಕ್ಷ್ಮಣ್ ಸವದಿಗೂ ಕೂಡಾ ಈ ಸ್ಥಾನ ಲಭಿಸಿದ್ದು ನೈತಿಕವಾಗಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Image result for savadi porn watch

ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ಕೈಗೊಳ್ಳಲಾದ ಈ ಕ್ರಮವು ಒಳ್ಳೆಯದೇ ಆಗಿದ್ದರೂ ಸಹ ಲಕ್ಷ್ಮಣ್ ಸವದಿಯಂತಹ ಬೇಜವಾಬ್ದಾರಿ ಜನ ಪ್ರತಿನಿಧಿಗಳಿಗೆ ಒಂದಿಡೀ ಪ್ರಾಂತ್ಯವನ್ನು ನಿರ್ವಹಿಸಲು ಬಿಡುವುದು ಎಷ್ಟರ ಮಟ್ಟಿಗೆ ಸೂಕ್ತವಾದ ಆಯ್ಕೆ ಎಂಬುದು ಇದೀಗ ಎಲ್ಲರಲ್ಲೂ ಎದ್ದಿರುವ ಪ್ರಶ್ನೆಯಾಗಿದೆ.

ಇದೇನಾ ಸುವರ್ಣ ಯುಗ ಎಂದ ನೆಟ್ಟಿಗರು !

ಬಿಜೆಪಿ ಸರ್ಕಾರ ಬಂದಾಕ್ಷಣ ಸುವರ್ಣ ಯುಗ ಬಂತೆಂದು ಬಹಳಷ್ಟು ಮಂದಿ ಬಿಜೆಪಿ ನಾಯಕರು ಹೇಳಿದ್ದರು. ಆದರೆ ಇದೀಗ ಯಡಿಯೂರಪ್ಪ ಸರ್ಕಾರದ ಇಂತಹ  ಅವ್ಯವಸ್ಥೆಯ ವಿರುದ್ಧ ಬಹಳಷ್ಟು ಮಂದಿ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದು ಸವದಿ ಬಿಟ್ಟು ಬೇರೆ ಆಯ್ಕೆಯಿಲ್ಲವೇ ಎಂಬ ಪ್ರಶ್ನೆಯು ಭುಗಿಲೆದ್ದಿದ್ದು ಈ ಸ್ಥಾನಕ್ಕೆ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ಅವರನ್ನೂ ಸಹ ಆಯ್ಕೆ ಮಾಡಬಹುದಿತ್ತು ಎಂದು ಅಭಿಪ್ರಾಯವು ವ್ಯಕ್ತವಾಗುತ್ತಿದೆ.

Image result for basavaraja bommai

ಅಷ್ಟಕ್ಕೂ ಸೂತ್ರವಿಲ್ಲದ ಪಟದಂತೆ ಆಗಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರವು ಎಷ್ಟೆಲ್ಲಾ ತೊಂದರೆಗಳನ್ನು ಎದುರಿಸುತ್ತಿದ್ದು ಸರ್ಕಾರವನ್ನು ಉಳಿಸಿಕೊಳ್ಳುವುದೇ ಇವರ ಪ್ರಮುಖ ಆದ್ಯತೆಯಾಗಿದ್ದು ಜನ ಸಮುದಾಯವು ಇನ್ನೇನನ್ನು ನಿರೀಕ್ಷಿಸಬಹುದೆಂದು ಅವರಿಗೇ ತಿಳಿದಿಲ್ಲ.

Please follow and like us:

Leave a Reply

Your email address will not be published. Required fields are marked *