ಕನ್ನಡ ನಟರ ಮನೆಗಳ ಮೇಲೆ ಕೇಂದ್ರ ಮೋದಿ ಸರ್ಕಾರದಿಂದ ರಾಜಕೀಯ ಪ್ರೇರಿತ ಐಟಿ ದಾಳಿ – ಕನ್ನಡಿಗರಿಂದ ತೀವ್ರ ಆಕ್ರೋಶ !

ರಾಜ್ಯ ಸಿನಿಮಾ ಸ್ಯಾಂಡಲ್ ವುಡ್

ಇತ್ತೀಚೆಗೆ ರಾಷ್ಟ್ರಿಯ ಸಿನಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸುಗಳಿಸಿ ಸುದ್ದಿ ಮಾಡಲು ಆರಂಭಿಸಿರುವ ಕನ್ನಡ ಚಿತ್ರ ರಂಗದ ಮೇಲೆ ಹಿಂದಿ ಪ್ರೇಮಿ ಮೋದಿ ಸರ್ಕಾರದ ಕೆಟ್ಟ ಕಣ್ಣು ಬಿದ್ದಿದೆ. ಇದರ ಪರಿಣಾಮವೇ ಚಿತ್ರನಟರ ಮೇಲೆ ಎಂದೂ ನಡೆಯದ ಐಟಿ ದಾಳಿಗಳು ನಡೆಯುತ್ತಿವೆ. ಇಂದು ಹಲವೆಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕನ್ನಡ ಚಿತ್ರಗಳ ನಿರ್ಮಾಪಕರಾದ ಸಿ.ಆರ್‌. ಮನೋಹರ್‌, ಜಯಣ್ಣ, ರಾಕ್‌ಲೈನ್‌ ವೆಂಕಟೇಶ್‌, ಹಾಗೂ ವಿಜಯ್‌ ಕಿರಂಗದೂರು ಮನೆಗಳ ಮೇಲೆ ದಾಳಿ ನಡೆಸಿದ್ದು ಜನಪ್ರಿಯ ಚಿತ್ರನಟರಾದ  ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ಯಶ್‌ ಮತ್ತು ಕಿಚ್ಚ ಸುದೀಪ್ ಅವರ ಮನೆಯ ಮೇಲೂ ಸಹ ಬೆಳಗ್ಗೆ 8 ಗಂಟೆಯಿಂದ ತನಿಖೆ ಮಾಡುತ್ತಿದ್ದಾರೆ.

 ಅರೆ ! ಇದೇನಿದು ಈ ರೀತಿಯ ದಿಢೀರ್ ದಾಳಿ ನಡೆಯುತ್ತಿದೆಯಲ್ಲಾ ಎಂಬ ವಿಷಯವನ್ನು ಗಮನಿಸಿದರೆ ಹಲವು ವಿವರಗಳನ್ನು ಗಮನಿಸಬಹುದಾಗಿದೆ

ಮೊದಲನೆಯದಾಗಿ ಮೋದಿ ಸರ್ಕಾರವು ಮೊದಲಿನಿಂದ ಹಿಂದಿ ಪ್ರೇಮಿ ಎಂದು ನಮಗೆಲ್ಲಾ ಗೊತ್ತಿರುವ ಸಂಗತಿಯೇ ಆಗಿದೆ. ಇದರ ಪರಿಣಾಮವೇ  ನಮ್ಮ ಬೆಂಗಳೂರಿನಲ್ಲೂ ಸಹ ಹಿಂದಿ ಹೇರಿಕೆಗೆ ಅವರು ಹಲವು ಬಾರಿ ಪ್ರಯತ್ನಿಸಿದ್ದಾರೆ. ಬೆಂಗಳೂರು ಮೆಟ್ರೋ ಮೇಲೆ ಹಿಂದಿ ಹೇರಿಕೆ ಮಾಡಿದಾಗ ಬೆಂಗಳೂರಿನ ಕನ್ನಡ ಸಂಘಟನೆಗಳೆಲ್ಲವೂ ಸಹ ತೀವ್ರವಾಗಿ ಪ್ರತಿಭಟಿಸಿದ್ದವು. ನಂತರದಲ್ಲಿ ಅದನ್ನು ತೆಗೆಯಲಾಗಿತ್ತು.

ಅದಾದ ನಂತರದಲ್ಲಿ ಬ್ಯಾಂಕಿಂಗ್ ಪರೀಕ್ಷೆಯಲ್ಲೂ ಸಹ ಹಿಂದಿ ಭಾಷೆಯದ್ದೇ ಕಾರು ಬಾರು ನಡೆದಿತ್ತು. ಈ ಕುರಿತಾಗಿಯೂ ಸಹ ನಂತರ ಸಾಕಷ್ಟು ಹೋರಾಟಗಳು ನಡೆದಿದ್ದವು. ಇದಾದ ನಂತರದಲ್ಲಿಯೂ ಸಹ ಮೋದಿ ಸರ್ಕಾರದಿಂದ ಕನ್ನಡಿಗರನ್ನು ಶೋಷಿಸುವ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಬಹುಶಃ ಈಗ ನಡೆಯುತ್ತಿರುವ ಕನ್ನಡದ ನಟರ ಮೇಲಿನ ದಾಳಿಗೂ ಸಹ ಇದೇ ಕಾರಣವಾಗಿದೆ ಎಂದು ಗ್ರಹಿಸಬಹುದಾಗಿದೆ.

ಇತ್ತೀಚೆಗೆ ಕನ್ನಡದ ಚಿತ್ರ ಕೆಜಿಎಫ್ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಹಾಗೂ ಕನ್ನಡದ ನಟರಾದ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರೂ ಸಹ ಚಿತ್ರ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿಯೇ ಮತ್ತೆ ಕನ್ನಡ ತನವನ್ನು ತುಳಿಯುವಂತಹ ಕೆಲಸಕ್ಕೆ ಮೋದಿ ಸರ್ಕಾರ ಕೈ ಹಾಕಿದ್ದು ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಭಾರೀ ಟೀಕೆ ವ್ಯಕ್ತವಾಗಿದೆ.

ಡಿಕೆಶಿಗೆ ಐಟಿ ನೋಟಿಸ್ :

ಈಗಾಗಲೇ ರಾಜಕೀಯವಾಗಿ ಕರ್ನಾಟಕದ ಶಕ್ತಿಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವ ಮೋದಿ ಸರ್ಕಾರವು ಕಳೆದ ವಿಧಾನ ಸಭಾ ಚುನಾವಣೆಯ ಹೊತ್ತಿನಲ್ಲೂ ಇದೇ ರೀತಿ ಹಲವು ಕಾಂಗ್ರೆಸ್ ನಾಯಕರ ಮೇಲೆ ದಾಳಿಯನ್ನು ಮಾಡಿತ್ತು. ಆಶ್ಚರ್ಯವೆಂದರೆ ಒಬ್ಬನೇ ಒಬ್ಬ ಬಿಜೆಪಿಯ ನಾಯಕನ ಮೇಲೆ ಈ ಐಟಿ ದಾಳಿ ನಡೆದಿರಲಿಲ್ಲ. ಕಾಂಗ್ರೆಸ್ ನ ಪ್ರಭಾವೀ ನಾಯಕ ಡಿ.ಕೆ.ಶಿವಕುಮಾರ್ ಮೇಲೆ ಹಲವು ದಾಳಿಗಲು ನಡೆದರೂ ಸಹ ಅವರು ಎದೆಗುಂದದೇ ಎಲ್ಲವನ್ನೂ ಎದುರಿಸಿದ್ದರು, ಈಗ ಮತ್ತೆ ಅಂತಹದ್ದೇ ಒಂದು ದಾಳಿಯನ್ನು ಡಿಕೆಶಿ ಮೇಲೆ ಈ ದಿನ ಮಾಡಲಾಗಿದ್ದು ಈ ಸುದ್ದಿಯನ್ನು ಮುಚ್ಚಿ ಹಾಕಲೂ ಸಹ ಚಿತ್ರರಂಗದ ಮೇಲೆ ದಾಳಿ ಮಾಡಲಾಗಿದೆ ಎಂದು ಕೆಲವು ಅನುಮಾನ ವ್ಯಕ್ತಪಡಿಸಿದ್ದಾರೆ.

Related image

ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟರ ಮೇಲೆ ರಾಜಕೀಯ ದುರುದ್ದೇಶವನ್ನು ಇಟ್ಟುಕೊಂಡು ನಡೆಯುತ್ತಿರುವ ಈ ಐಟಿ ದಾಳಿಯಿಂದ ಅಭಿಮಾನಿಗಳು ತೀವ್ರ ಆಕ್ರೋಶ ಗೊಂಡಿದ್ದು, ಮೋದಿ ಸರ್ಕಾರದ ಕನ್ನಡ ವಿರೋಧೀ ನೀತಿಯ ಕುರಿತು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *