ದ್ರಾವಿಡರ ವೈಚಾರಿಕ ಕ್ರಾಂತಿಯ ನೇತಾರ, ಹಿಂದಿ ಹೇರಿಕೆ ವಿರೋಧಿ ಹೋರಾಟಗಾರ ಪೆರಿಯಾರ್ ನೆನಪು !

ರಾಜಕೀಯ ರಾಷ್ಟ್ರೀಯ

ತಮಿಳರ ಸ್ವಾಭಿಮಾನದ ಪ್ರತೀಕವಾದ ದ್ರಾವಿಡ ಚಳುವಳಿಯನ್ನು ಕಟ್ಟಿದ ಮೊದಲ ನೇತಾರ ಪೆರಿಯಾರ್ ರಾಮಸ್ವಾಮಿಯವರು ಜನಿಸಿ ಇಂದಿಗೆ 140 ವರ್ಷಗಳು ಸಂದಿವೆ. ಇನ್ನು ಪೆರಿಯಾರ್ ಎಂಬ ಸ್ಪೂರ್ತಿಯ ಚಿಲುಮೆ ನಮ್ಮನ್ನಗಲಿ ನಾಲ್ಕೂವರೆ ದಶಕಗಳಾದರೂ ಸಹ ಆತ ಹಚ್ಚಿಹೋದ ಕ್ರಾಂತಿಯ ದೀಪವಿನ್ನೂ ದ್ರಾವಿಡ ನಾಡಿನಲ್ಲಿ ಬೆಳಗುತ್ತಲೇ ಇದೆ.

ವೈದಿಕಶಾಹಿ ಬ್ರಾಹ್ಮಣರ ಶೋಷಣೆಯ ವಿರುದ್ಧ ಮೊದಲಾದ ಪೆರಿಯಾರ್ ಅವರ ದನಿಯು ನಿಧಾನಕ್ಕೆ ಸಮಾಜದಲ್ಲಿ ವೈಜ್ಞಾನಿಕ, ವೈಚಾರಿಕ ನೆಲೆಯ ವಿಚಾರಗಳ ಮೂಲಕ ಸಮಾಜದ ಮೌಢ್ಯಗಳನ್ನು ತೊಡೆಯುತ್ತ ಸಾಗಿತು. ದ್ರಾವಿಡರ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಸಾಕಷ್ಟು ಶ್ರಮಿಸಿದ ಪೆರಿಯಾರ್ ಅವರು 1939 ರಲ್ಲಿ ನ್ಯಾಯ ಪಕ್ಷದ ಮುಖ್ಯಸ್ಥರಾದರು. 1944 ರಲ್ಲಿ ಈ ಪಕ್ಷವನ್ನು ದ್ರಾವಿಡ ಕಳಗಂ ಎಂಬುದಾಗಿ ಹೆಸರನ್ನು ಬದಲಿಸಲಾಯಿತು. ಈ ಪಕ್ಷವು ಮುಂದೆ ದ್ರಾವಿಡ ಮುನ್ನೇತ್ರ ಕಳಗಂ ಎಂದು ಪ್ರತ್ಯೇಕಗೊಂಡರೂ ಸಹ ದ್ರಾವಿಡರ ಮೂಲ ಆಶಯಗಳು ಅಲ್ಲಿ ಜಾಗೃತವಾಗೇ ಇದ್ದವು.

Image result for periyar vaikom movement

ಘನತೆಯುತ ಜೀವನ, ಸಮಾನತೆ, ಮಹಿಳಾ ಹಕ್ಕುಗಳು ಮತ್ತು ಜಾತ್ಯಾತೀತ ತತ್ವಗಳನ್ನು ಪ್ರತಿಪಾದಿಸುತ್ತಿದ್ದ ಪೆರಿಯಾರ್ ಅವರು ಶಿಕ್ಷಣವೇ ವಿಮೋಚನೆಯ ಮಾರ್ಗವೆಂದು ಬಲವಾಗಿ ನಂಬಿದ್ದರು. ಅಂಬೇಡ್ಕರ್ ಆದಿಯಾಗಿ ಬಹಳಷ್ಟು ಮಂದಿ ಸಾಮಾಜಿಕ ಸುಧಾರಕರು ನಂಬಿದ್ದ ಈ ಶಿಕ್ಷಣದ ತತ್ವವು ಇಂದಿಗೂ ಸಹ ಸಮಾಜವನ್ನು ವಿಮೋಚನೆಯೆಡೆಗೆ ಕೊಂಡೊಯ್ಯುವ ಜ್ವಲಂತ ಉದಾಹರಣೆಯಾಗಿದೆ.

ರಾಜಕೀಯ ಮತ್ತು ಸಾಮಾಜಿಕ ಜೀವನ :

ಕಾಂಗ್ರೆಸ್ ನ ಸದಸ್ಯರಾಗಿ (1919-1925)

ಇ.ವಿ.ರಾಮಸ್ವಾಮಿಯವರು 1919 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಭಾರತದ ವಿಮೋಚನೆಯ ಚಳುವಳಿಗಳಿಗಾಗಿ ಹೋರಾಟ ನಡೆಸಿದರು. ಈ ಪೈಕಿ ಖಾದಿ ನೇಯ್ಗೆ ಚಳುವಳಿ, ಅಸ್ಪೃಶ್ಯತೆ ವಿರುದ್ಧದ ಹೋರಾಟ, ವಿದೇಶಿ ವಸ್ತುಗಳ ಬಾಯ್ಕಾಟ್ ಚಳುವಳಿ, ಅಹಸಕಾರ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು 1922 ರಲ್ಲಿ ಮದ್ರಾಸ್ ಪ್ರಾಂತ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅದರೆ 1925 ರಲ್ಲಿ ಕಾಂಗ್ರೆಸ್ ಒಂದು ಬ್ರಾಹ್ಮಣರ ಪಕ್ಷವೆಂದು ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಸಿದ್ಧಾಂತಗಳ ಆಧಾರದ ಮೇಲೆ ಪಕ್ಷವನ್ನು ಕಟ್ಟಿದರು.

Image result for periyar and gandhi

ವೈಕಂ ಸತ್ಯಾಗ್ರಹ (1924-25)

1923 ರಲ್ಲಿ ಕೇರಳದ ವಿವಿಧ ಸಮುದಾಯಗಳು ದೇವಸ್ಥಾನದೊಳಗೆ ಹೋಗಲು ಅನುವು ಮಾಡಿಕೊಡದ ಬಗ್ಗೆ ಕಾಂಗ್ರೆಸ್ ನಾಯಕರು ದೊಡ್ಡ ಮಟ್ಟದಲ್ಲಿ ದನಿಯೆತ್ತಿದ್ದ ಕಾರಣ ಗಾಂಧಿಯಾದಿಯಾಗಿ ಬಹಳಷ್ಟು ಮಂದಿ ಸ್ಥಳೀಯ ನೇತಾರರು, ಈ ಚಳುವಳಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದರು. ಈ ಪೈಕಿ ನಾರಾಯಣ ಗುರುಗಳು ಮತ್ತು ಪೆರಿಯಾರ್ ಅವರೂ ಸಹ ದೊಡ್ಡ ಮಟ್ಟದಲ್ಲಿ ಈ ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದರು. 

ತಮಿಳು ನಾಡು ಪ್ರದೇಶದಿಂದ ತಮ್ಮ ಬೆಂಬಲ ನೀಡಿದ್ದ ರಾಮಸ್ವಾಮಿಯವರು ಆಗ ಬಂಧನಕ್ಕೆ ಒಳಗಾಗಿದ್ದರು. ಇವರೊಂದಿಗೆ ಟಿ.ಪಿ.ಮಾಧವನ್. ಕೆ.ಪಿ.ಕೇಶವನ್ ಹಾಗೂ ನಾರಾಯಣ ಗುರುಗಳೂ ಸಹ ಬಂಧನಕ್ಕೆ ಒಳಗಾಗಿದ್ದರು. ಇದಾದ ನಂತರ ಅಲ್ಲಿ ದೊಡ್ಡ ಮಟ್ಟದ ಸಹಿ ಸಂಗ್ರಹ ಅಭಿಯಾನ ನಡೆದು 25000 ಕ್ಕೂ ಹೆಚ್ಚು ಮಂದಿ ಮೆರವಣಿಗೆ ಮೂಲಕ ಹೋಗಿ ದೇವಾಲಯ ಪ್ರವೇಶಕ್ಕಾಗಿ ಮನವಿಯನ್ನು ಸಲ್ಲಿಸಿದರು.

ವೈಕಂ ಕ್ಷೇತ್ರದಲ್ಲಿ ದೇವಾಲಯ ಪ್ರವೇಶಕ್ಕಾಗಿ ಪೆರಿಯಾರ್ ರಾಮಸ್ವಾಮಿ ಮತ್ತವರ ಬೆಂಬಲಿಗರು ಹೊರ ರಾಜ್ಯದವರ ಬೆಂಬಲ ಬೇಡವೆಂಬ ಷರತ್ತು ಇದ್ದರೂ ಸಹ ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದರು. ಈ ಕಾರಣಕ್ಕಾಗಿಯೇ ಅವರಿಗೆ ವೈಕಂ ವೀರ ಎಂಬ ಬಿರುದೂ ಬಂದಿತ್ತು.

ವ್ಯಕ್ತಿ ಗೌರವ ಮತ್ತು ಹಿಂದಿ ವಿರೋಧಿ ಚಳುವಳಿ

ಅಂದಿನ ಕೆಟ್ಟ ಪ್ರಭುತ್ವದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪೆರಿಯಾರ್ ಅವರು ದೊಡ್ಡ ಪ್ರಮಾಣದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಸಮಾಜದ ಇನ್ನಿತರೆ ಪಿಡುಗುಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದರು.

Image result for periyar against hindi imposition

1952 ರಲ್ಲಿ ವ್ಯಕ್ತಿ ಗೌರವ ಚಳುವಳಿಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಘನತೆಯೂ ಅವನ ಹಕ್ಕಾಗಿದ್ದು ಅದನ್ನು ನಾವು ಗೌರವಿಸಬೇಕೆಂದು ಅವರು ನಂಬಿದ್ದು ಇದಕ್ಕೆ ತೊಡಕಾಗಿದ್ದ ಮೌಢ್ಯತೆಗಳ ವಿರುದ್ಧ ಹೋರಾಟ ನಡೆಸಿದ್ದರು.

ಹಿಂದಿ ಹೇರಿಕೆಗೆ ವಿರೋಧ

1937 ರಲ್ಲಿ ಚಕ್ರವರ್ತಿ ರಾಜಗೋಪಾಲಚಾರಿ ಅವರು ಮದ್ರಾಸ್ ಪ್ರಾಂತ್ಯದಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಜಾರಿಗೊಳಿಸಿದರು. ಈ ಬೆಳವಣಿಗೆಯ ಅಪಾಯವನ್ನು ಅರಿತ ಪೆರಿಯಾರ್ ಅವರು ಅದೇ ವರ್ಷ ಎ.ಟಿ.ಪನ್ನೀರ್ ಸೆಲ್ವಂ ಅವರೊಂದಿಗೆ ಸೇರಿ “ತಮಿಳು ನಾಡು ತಮಿಳರದ್ದು” ಎಂಬ ಘೋಷ ವಾಕ್ಯದಡಿ ದೊಡ್ಡ ಮಟ್ಟದ ಪ್ರತಿರೋಧವನ್ನು ಒಡ್ಡಿದರು.

ಹಿಂದಿಯು ತಮಿಳನ್ನು ಶೋಷಣೆಯ ಭಾಷೆಯಾಗಿ ನೋಡುತ್ತದೆ ಎಂಬ ವಿಚಾರವನ್ನು ಪ್ರತಿಪಾದಿಸಿದ ಪೆರಿಯಾರ್ ಅವರು ಪ್ರಾದೇಶಿಕ ಶೋಷಣೆಯನ್ನು ಗಂಭೀರವಾಗಿ ಟೀಕಿಸಿದರು. ಇವರ ಹೋರಾಟದ ಫಲವಾಗಿಯೇ 1938 ರಲ್ಲಿ ಪ್ರಭುತ್ವವು ತಮ್ಮ ಹಿಂದಿ ಕಡ್ಡಾಯ ಭಾಷೆ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡಿತು.

Image result for periyar

ಸದಾ ಶೋಷಿತರ ವಿಮೋಚನೆಗಾಗಿ ಶ್ರಮಿಸಿದ್ದ ಪೆರಿಯಾರ್ ಅವರ ಜಯಂತಿಯಾದ ಇಂದು ಅವರ ನೆಲ, ಜಲ ಮತ್ತು ಭಾಷಾ ಪ್ರೇಮದ ಕಾಳಜಿಯನ್ನು ಎಲ್ಲೆಡೆ ಪಸರಿಸುವುದು ನಮ್ಮ ಕರ್ತವ್ಯವಾಗಿದೆ.

Please follow and like us:

Leave a Reply

Your email address will not be published. Required fields are marked *