ಮುಂಬೈನ 2646 ಮರ ಕಡಿಯುವ ಸುದ್ದಿಯ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಸದ್ಗುರು !

ಬೆಂಗಳೂರು ರಾಷ್ಟ್ರೀಯ

ಮುಂಬೈನ ಆರೇ ಕಾಡಿನಲ್ಲಿ ಮೆಟ್ರೋ ಹಾದಿಯ ನಿರ್ಮಾಣಕ್ಕಾಗಿ 2646 ಮರಗಳನ್ನು ಕಡಿಯುವ ಬಾಂಬೆ ಮೆಟ್ರೋ ಕಾರ್ಪೋರೇಷನ್ ಅವರ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದು ಪರಿಸರವಾದಿಗಳ ಹೋರಾಟಕ್ಕೆ ಜಯ ಲಭಿಸಿದ್ದು ಬಾಂಬೆ ಹೈಕೋರ್ಟ್ ಈಗಿಂದೀಗಲೇ ಪರಿಸರ ಹೋರಾಟಗಾರರನ್ನು ಬಿಡುಗಡೆಗೊಳಿಸಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕೆಂದು ಆದೇಶಿಸಿದೆ.

Image result for mumbai trees

ಮರ ಕಡಿಯುವ ಸುದ್ದಿ ಪ್ರಕಟವಾದ ದಿನದಿಂದಲೇ ಅಲ್ಲಿನ ಪರಿಸರವಾದಿಗಳು ಮುಂಬೈನ ಶಾಸ್ವಕೋಶದಂತಿರುವ ಆರೇ ಭಾಗದ  ಮರಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತು ಮರಗಳನ್ನು ರಕ್ಷಿಸುವ ಕೆಲಸವನ್ನು ಮಾಡಿದ್ದಾರೆ. ಇಲ್ಲಿ ಇಷ್ಟೊಂದು ದೊಡ್ಡ ಹೋರಾಟ ನಡೆಯುತ್ತಿದ್ದರೂ ಸಹ ವೃಕ್ಷ ಅಭಿಯಾನವನ್ನು ಆರಂಭಿಸಿ ಪ್ರತಿ ಮರ ಬೆಳೆಸಲು 42 ರೂಪಾಯಿಯನ್ನು ಸಂಗ್ರಹಿಸುತ್ತಿದ್ದ ಸದ್ಗುರು ಅವರು ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದೇ ಇರುವುದು ತೀವ್ರ ಅಚ್ಚರಿ ಮೂಡಿಸಿದ್ದು ಇವರ ಮರ ಬೆಳೆಸುವ ಅಭಿಯಾನದ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ.

42 ರೂಪಾಯಿಗೊಂದು ಮರ ಎಂಬ ಕಾವೇರಿ ಅಭಿಯಾನ!

ಕಾವೇರಿ ರಕ್ಷಣೆ ಅಭಿಯಾನದ ಅಡಿಯಲ್ಲಿ ನಾಗರೀಕರಿಂದ ತಲಾ 42 ರೂಪಾಯಿಯನ್ನುಸಂಗ್ರಹಿಸುವ ಮೂಲಕ ಮರ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದ ಸದ್ಗುರು ಅವರು ಇದೀಗ ಮುಂಬೈನಲ್ಲಿ ಜನರೇ ಬೀದಿಗಿಳಿದು ಸರಪಳಿ ರೂಪದಲ್ಲಿ ಪ್ರತಿಭಟಿಸುತ್ತಿದ್ದರೂ ಸಹ ಒಂದು ಮಾತನ್ನೂ ಸಹ ಆಡದೇ ಇರುವುದು ಇವರ ಪರಿಸರದ ಆಶಯದ ಮೇಲೆ ಅನುಮಾನ ಹುಟ್ಟುವಂತೆ ಮಾಡಿದೆ.

Related image

ಇನ್ನು ಸದ್ಗುರು ಅವರಿಗಿಂತ ಸಾಮಾನ್ಯರೆನಿಸಿಕೊಂಡ ಜನರು ಮರಗಳ ಕಡಿತದ ಬಗ್ಗೆ ಪ್ರಬಲ ದನಿಯನ್ನು ಎತ್ತಿದ್ದು ಸದ್ಗುರು ಅವರಿಗಿಂತ ತಮ್ಮ ಪಾತ್ರ ದೊಡ್ಡದು ಎಂಬ ಸಂದೇಶವನ್ನು ಸಾರಿದ್ದಾರೆ.

Please follow and like us:

Leave a Reply

Your email address will not be published. Required fields are marked *