ಹಲವು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಜಯಿಸಿದ ಕನ್ನಡದ “ನಾತಿಚರಾಮಿ” ಚಿತ್ರ !

ಬೆಂಗಳೂರು ರಾಜ್ಯ ರಾಷ್ಟ್ರೀಯ ಸಿನಿಮಾ ಸ್ಯಾಂಡಲ್ ವುಡ್

ನಿರ್ದೇಶಕ ಮನ್ಸೋರೆ ನಿರ್ದೇಶನದ  ಸಂಚಾರಿ ವಿಜಯ್ ಹಾಗೂ ಶೃತಿ ಹರಿಹರನ್ , ಶರಣ್ಯ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಾತಿ ಚರಾಮಿ ಚಿತ್ರ ತಂಡಕ್ಕೆ ಬರೋಬ್ಬರಿ 5 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದ್ದು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.

Image result for naati charami

ಈ ಚಿತ್ರಕ್ಕೆ ಎನ್.ಸಂಧ್ಯಾರಾಣಿ ಅವರ ಕಥೆ ಇದ್ದು ಬಿಂದು ಮಾಲಿನಿ ಅವರು ಸಂಗೀತ ನೀಡಿದ್ದಾರೆ. ಗುರು ಪ್ರಸಾದ್ ನರ್ನಾಡ್ ಅವರು ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ಜಗನ್ ಮೋಹನ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಅವರು ಹಣ ಹೂಡಿಕೆ ಮಾಡಿದ್ದಾರೆ.

ಸ್ತ್ರೀವಾದಿ ನೆಲೆಯ ಸಂವೇದನಾಶೀಲ ಚಿತ್ರವಾದ ನಾತಿಚರಾಮಿ ಚಿತ್ರವು ಹಲವು ಸಂಗತಿಗಳಿಗಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಚಿತ್ರರಂಗದಲ್ಲಿ ಉತ್ತಮ ಕಲಾಕೃತಿಗೆ ರಾಷ್ಟ್ರ ಮಟ್ಟದ ಗೌರವ ಸಂದಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದ್ದು ಇಡೀ ಚಿತ್ರ ತಂಡಕ್ಕೆ ಹಾಗೂ  ನಿರ್ದೇಶಕ ಮನ್ಸೋರೆ ಅವರಿಗೆ ಅಭಿನಂದನೆಗಳು

Please follow and like us:

Leave a Reply

Your email address will not be published. Required fields are marked *