ನಾಳೆ ಬಹು ನಿರೀಕ್ಷಿತ “ನಾತಿ ಚರಾಮಿ” ಚಿತ್ರದ ಬಿಡುಗಡೆ !

ಸಿನಿಮಾ ಸ್ಯಾಂಡಲ್ ವುಡ್

ಈಗಾಗಲೇ “ನಾನು ಅವನಲ್ಲ ಅವಳು” ಚಿತ್ರಕ್ಕೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ನಟ ಶ್ರೀ.ಸಂಚಾರಿ ವಿಜಯ್ ಹಾಗೂ ಶೃತಿ ಹರಿಹರನ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹು ನೀರೀಕ್ಷಿತ “ನಾತಿ ಚರಾಮಿ” ಚಿತ್ರವು ನಾಳೆ ಬಿಡುಗಡೆಗೊಳ್ಳುತ್ತಿದ್ದು ತನ್ನ ವಿಶಿಷ್ಟವಾದ ಟ್ರೇಲರ್ ನಿಂದ ಈಗಾಗಲೇ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

  ಈಗಾಗಲೇ ಅತ್ಯುತ್ತಮ ಚಿತ್ರಗಳನ್ನು ಜನತೆಗೆ ನೀಡಿರುವ ಅನುಭವ ಹೊಂದಿರುವ ಚಿತ್ರ ತಂಡ ಇದಾಗಿದ್ದು ಸಹಜವಾಗಿಯೇ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಚಿತ್ರವು ಮೂಡಿ ಬಂದಿರುವ ರೀತಿಯ ಕುರಿತು ಈಗಾಗಲೇ ಬಹಳಷ್ಟು ಸಂತಸದಿಂದಿರುವ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (ಹರಿವು ಚಿತ್ರಕ್ಕೆ )ಅವರು ಜನರ ಪ್ರೋತ್ಸಾಹದ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಹಾಗೂ ನಿರ್ದೇಶಕರ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಎಲ್ಲರಲ್ಲೂ ವಿಶೇಷ ಕುತೂಹಲ ಹುಟ್ಟು ಹಾಕಿದೆ.

ಬನ್ನಿ ನಾಳೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ “ನಾತಿಚರಾಮಿ” ಚಿತ್ರವನ್ನು ವೀಕ್ಷಿಸಿ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ನಾತಿಚರಾಮಿ ಚಿತ್ರದ ಟ್ರೇಲರ್ ನ ಲಿಂಕ್ ಈ ಕೆಳಗಿದ್ದು ಒಮ್ಮೆ ವೀಕ್ಷಿಸಿ.

https://youtu.be/lbZo6HhmcVw

Please follow and like us:

1 thought on “ನಾಳೆ ಬಹು ನಿರೀಕ್ಷಿತ “ನಾತಿ ಚರಾಮಿ” ಚಿತ್ರದ ಬಿಡುಗಡೆ !

Leave a Reply

Your email address will not be published. Required fields are marked *