ಕರ್ನಾಟಕ ಉಪಚುನಾವಣೆ : ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ ಶಾಸಕ ಭೈರತಿ ಸುರೇಶ್ ಹತ್ಯೆ ಪ್ರಯತ್ನ !

ಬೆಂಗಳೂರು ರಾಜಕೀಯ ರಾಜ್ಯ

ಕರ್ನಾಟಕ ಉಪ ಚುನಾವಣೆಯು ಇನ್ನೇನು ಹತ್ತಿರದಲ್ಲಿದೆ ಎನ್ನುವ ವೇಳೆಗೆ ಹೆಬ್ಬಾಳದ ಜನಪ್ರಿಯ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರ ಮೇಲೆ ವ್ಯಕ್ತಿಯೋರ್ವ ಚಾಕುವಿನಿಂದ ಹತ್ಯೆಗೆ ಯತ್ನಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಲು ಕಾರಣವಾಗಿದೆ. ಈಗಾಗಲೇ ಹೊಸಕೋಟೆಯಿಂದ ತಮ್ಮ ಪತ್ನಿ ಪದ್ಮಾವತಿ ಅವರಿಗೆ ಟಿಕೆಟ್ ಸಿಕ್ಕಿದ್ದು, ಅದೇ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ & ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿತರಾದ ಶರತ್ ಬಚ್ಚೇಗೌಡ ಅವರು ತೀವ್ರ ಸ್ಪರ್ಧೆಯಲ್ಲಿದ್ದರು.

Image result for padmavathi suresh hoskote

ಇನ್ನು ಈಗಾಗಲೇ ಚಾಕು ಇರಿತಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು ಹತ್ಯೆಯ ಪ್ರಯತ್ನಕ್ಕೆ ಖಚಿತ ಕಾರಣವು ತಿಳಿದು ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭೈರತಿ ಸುರೇಶ್ ಅವರು ಆತನಿಗೆ ನಾನು ಹಿಂದೆ ಹಣದ ಸಹಾಯವನ್ನು ಮಾಡಿದ್ದೆ, ಆದರೆ ಆತನೇಕೆ ಹೀಗೆ ಮಾಡಿದ ಎಂದು ಗೊತ್ತಿಲ್ಲ ಎಂದಿದ್ದಾರೆ.

ರಕ್ಷಿಸಿದ ಗನ್ ಮ್ಯಾನ್ !

ಹತ್ಯಾ ಪ್ರಯತ್ನವು ನಡೆದಾಗ ಸುರೇಶ್ ಅವರ ಗನ್ ಮ್ಯಾನ್ ಅವರು ವ್ಯಕ್ತಿಯ ದಾಳಿಯಿಂದ ಸುರೇಶ್ ಅವರನ್ನು ರಕ್ಷಿಸಿದ್ದಾರೆ. ಇಲ್ಲವಾಗಿದ್ದರೆ, ದೊಡ್ಡ ಪ್ರಮಾದವೇ ಘಟಿಸುತ್ತಿತ್ತು. ಆದರೂ ಉಪ ಚುನಾವಣೆಯ ವೇಳೆ ನಡೆದಿರುವ ಇಂತಹ ದಾಳಿಗಳು ತೀರಾ ಅನುಮಾನ ಮೂಡಿಸಿದ್ದು ರಾಜ್ಯದ ಆಂತರಿಕ ರಕ್ಷಣಾ ವ್ಯವಸ್ಥೆಯನ್ನು ಅಣಕಿಸುತ್ತಿವೆ.

Image result for mtb nagaraj and Sharath Bachegowda

ಇನ್ನು ಭೈರತಿ ಸುರೇಶ್ ಅವರು ಸಿದ್ದರಾಮಯ್ಯನವರ ಆಪ್ತರೂ ಆಗಿರುವ ಕಾರಣ ಸಿದ್ದರಾಮಯ್ಯನವರ ವಿರುದ್ಧ ತೊಡೆ ತಟ್ಟಿರುವ ಅನರ್ಹ ಶಾಸಕರಾದ ಎಂ.ಟಿ.ಬಿ. ನಾಗರಾಜ್ & ಭೈರತಿ ಬಸವರಾಜ್ ಅವರತ್ತಲೂ ಸಹ ಜನರ ಕಣ್ಣು ಸಹಜವಾಗಿ ಹೊರಳಿದ್ದು ಈ ಪ್ರಕರಣವು  ರಾಜಕಿಯ ಕಾರಣಕ್ಕಾಗಿ ಕುತೂಹಲ ಕೆರಳಿಸಿದೆ.

Please follow and like us:

Leave a Reply

Your email address will not be published. Required fields are marked *