ಭಾರತದ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಬೈಯುವುದೇ ಪರಿಹಾರವೆಂದು ತಿಳಿದ ವಿಶ್ವದ ಏಕೈಕ ಬುದ್ಧಿವಂತ ಪ್ರಧಾನಿ ಮೋದಿ !

ರಾಜಕೀಯ ರಾಜ್ಯ ರಾಷ್ಟ್ರೀಯ

ಒಂದು ದೇಶದಲ್ಲಿ ಆರ್ಥಿಕತೆ, ಆರೋಗ್ಯ, ಹಸಿವು, ಭದ್ರತೆ ಹಾಗೂ ಇನ್ನಿತರೆ ಆಂತರಿಕ ಸಮಸ್ಯೆಗಳು ಬಂದರೆ ಸಹಜವಾಗಿ ಬೇರೆ ದೇಶಗಳಲ್ಲಿ ಇವುಗಳನ್ನು ಸುಧಾರಿಸಲು ಯಾವ ರೀತಿ ಕ್ರಮವನ್ನು ಕೈಗೊಳ್ಳುತ್ತಾರೆ ಮತ್ತು ಸಮಸ್ಯೆಗೆ ನೈಜ ಕಾರಣಗಳು ಏನು ಎಂಬುದನ್ನು ಹುಡುಕುತ್ತಾರೆ. ಆದರೆ ನಮ್ಮ ಭಾರತದ ಪ್ರಧಾನ ಮಂತ್ರಿಗಳಾದ ಮೋದಿಯವರು ಮಾತ್ರ ಭಾರತದ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ ಅದಕ್ಕೆ ಪಾಕಿಸ್ತಾನದ ಚರ್ಚೆಯನ್ನು ಮುಂದಿಡುತ್ತಾರೆ ಮತ್ತು ಪಾಕಿಸ್ತಾನವೇ ಭಾರತದ ಕೆಲವು ಸಮಸ್ಯೆಗಳಿಗೆ ಕಾರಣವೆಂದು ಹೇಳುತ್ತಾರೆ.

Image result for modi

ಮೊನ್ನೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡುವಾಗಲೂ ಸಹ ಪಾಕಿಸ್ತಾನದ ಪ್ರಸ್ತಾಪ ಮಾಡಿದ ಇವರು ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತೀಯರು ಸಿದ್ದರಾಗಬೇಕೆಂದು ಹೇಳಿದರು. ಆದರೆ ತಮ್ಮ ಮಾತಿನ ಮಧ್ಯೆ ಎಲ್ಲಿಯೂ ಸಹ ಭಾರತದ ಆದ್ಯ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಹಸಿವಿನ ಸೂಚ್ಯಂಕ, ಮಾರುಕಟ್ಟೆ ಕುಸಿತ, ಕೋಮುದ್ವೇಷದ ಹಲ್ಲೆಗಳ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ, ಅಷ್ಟೇಕೆ ಬೇರೆ ಸಮಯದಲ್ಲಿ ಪರೀಕ್ಷೆಗೆ ಹೋಗೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ಇವರು ತಮ್ಮ ಎದುರಿಗೆ ನೂರಾರು ಜನ ಮಕ್ಕಳಿದ್ದರೂ ಸಹ ಅವರಿಗೆ ಚೆನ್ನಾಗಿ ಓದಿಕೊಳ್ಳಿ ಎಂದು ಹೇಳದಷ್ಟು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದರು.

ಎಲ್ಲೆಡೆಯಿಂದ ವ್ಯಾಪಕ ಟೀಕೆ.

ಸಿದ್ದಗಂಗಾ ಮಠದಲ್ಲಿ ಪ್ರಧಾನಿಗಳ ಮಾತನ್ನು ಕೇಳಿದ ಬಹಳಷ್ಟು ಮಂದಿಗೆ ಪ್ರಧಾನಿಯೊಬ್ಬ ವಿವೇಕರಹಿತ ವ್ಯಕ್ತಿ ಎಂಬ ಸಂದೇಶವು ಹೋಗಿದೆ. ಇನ್ನು ಈ ಬಗ್ಗೆ  ಬಹಳಷ್ಟು ಟೀಕೆಗಳೂ ಸಹ ಬಂದಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು “ಮೋದಿಯವರು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ?” ಎಂದು ಪ್ರಶ್ನಿಸಿದ್ದು ಕಾಂಗ್ರೆಸ್ ನವರು ಮೋದಿಗೆ ಭಾರತದಕ್ಕಿಂತ ಪಾಕಿಸ್ತಾನದ ಬಗ್ಗೆ ಮಾತನಾಡುವುದು ಅಷ್ಟು ಪ್ರಿಯವಾಗಿದ್ದರೆ ಅವರು ಅಲ್ಲೇ ಹೋಗಿ ಇರಲಿ” ಎಂದು ಹೇಳಿದ್ದಾರೆ.

ಪಾಕಿಸ್ತಾನದ ಅನಗತ್ಯ ಪ್ರಸ್ತಾಪ

ಅಷ್ಟಕ್ಕೂ ಭಾರತದ ಸಾಮರ್ಥ್ಯಕ್ಕೆ ಯಾವುದರಲ್ಲೂ ಸಮವಲ್ಲದ ಪಾಕಿಸ್ತಾನದ ಹೆಸರನ್ನು ಪದೇ ಪದೇ ಪ್ರಸ್ತಾಪ ಮಾಡುವ ಮೋದಿಯವರು ಎಲ್ಲಾ ವೇದಿಕೆಗಳಲ್ಲೂ ಅನಗತ್ಯವಾಗಿ ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನದೊಂದಿಗೆ ತಮ್ಮ ಹಾಗೂ ತಮ್ಮ ಪಕ್ಷದ ಐಡೆಂಟಿಟಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವಂತೆ ಭಾಸವಾಗುತ್ತಿದೆ. ಇನ್ನು ಈಗಾಗಲೇ ಈ ಅಂಶವನ್ನು ಹಲವು ಬಾರಿ ನೆನಪಿಸಿದರೂ ಸಹ ಮತ್ತದೇ ತಪ್ಪು ಮಾಡುತ್ತಿರುವ ಮೋದಿಯವರ ಮನಸ್ಸಿನಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ಬೇರೂರುತ್ತಿದೆ.

Please follow and like us:

Leave a Reply

Your email address will not be published. Required fields are marked *