ಬಾದಾಮಿ ಜಾತ್ರೆಯಲ್ಲಿ ಸಿದ್ದರಾಮಯ್ಯ ಎದುರು “ಮೋದಿ ಮೋದಿ” ಎಂದು ಕೂಗಿದ್ದ ಯುವಕರ ಮನೆಗೆ ಇನ್ನೂ ಸಿಕ್ಕಿಲ್ಲ ಮೋದಿಯಿಂದ ನೆರೆ ಪರಿಹಾರ !

ರಾಜಕೀಯ ರಾಜ್ಯ

ಮೊನ್ನೆ ಬಾದಾಮಿಯ ಜಾತ್ರೆಯಲ್ಲಿ ಸಿದ್ದರಾಮಯ್ಯನವರು ಭಾಗವಹಿಸಿದ್ದ ವೇಳೆ ನೆರೆದಿದ್ದ ಬೃಹತ್ ಜನಸಂಖ್ಯೆಯ ನಡುವೆ 15-20 ಜನರ ಯುವಕರ ಗುಂಪೊಂದು ಸಿದ್ದರಾಮಯ್ಯನವರ ಎದುರಿಗೆ ಮೋದಿ ಮೋದಿ ಎಂದು ಕೂಗಿ ಅವರಿಗೆ ಇರುಸು ಮುರುಸು ಮಾಡಲು ಯತ್ನಿಸಿದೆ. ಇದಾದ ಬಳಿಕ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯನವರು “ನಮ್ಮ ಕಾರ್ಯಕರ್ತರಿಗೇನು ಕೂಗಲು ಬರುವುದಿಲ್ಲವಾ? ಆದರೆ ಅದು ನಮ್ಮ ಸಂಸ್ಕೃತಿಯಲ್ಲ ಬದಲಿಗೆ ಜಾತ್ರೆಯಲ್ಲಿ ಮೋದಿ ಮೋದಿ ಎಂದು ಕೂಗುವುದು ಯಾವ ಸೀಮೆ ಸಂಸ್ಕೃತಿ ಎಂದು ಬಿಜೆಪಿಯವರು ಹೇಳುತ್ತಾರಾ? ಇದೆಲ್ಲಾ ಬೇಜವಾಬ್ದಾರಿ ಸಮಾಜವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

Image may contain: one or more people, people standing, crowd and outdoor

ಇನ್ನೂ ಅಚ್ಚರಿಯೆಂಬಂತೆ ಮೋದಿ ಮೋದಿ ಎಂದು ಕೂಗಿರುವ ಯುವಕರ ಮನೆಗಳಿಗೆ ಇನ್ನೂ ಸಹ ಮೋದಿಯವರಿಂದ ನೆರೆ ಪರಿಹಾರ ದೊರೆತಿಲ್ಲ, ಬದಲಿಗೆ ಇಂದು ನಾಳೆ ನಾಡಿದ್ದು ಎಂದು ಹುಸಿ ಭರವಸೆಗಳೇ ಅವರ ಪಾಲಿಗೆ ಸಿಗುತ್ತಿದ್ದು ಆ ಭರವಸೆಗಳನ್ನೇ ಇನ್ನೂ ಸಹ ಅಲ್ಲಿನ ಮಂದಿ ನಂಬಿಕೊಂಡು ಕೂತಿದೆ. ಆದರೆ ಇತ್ತ ಕಡೆ ಮೋದಿಯವರಿಂದ ಪರಿಹಾರ ಸಿಗದೇ ಇದ್ದರೂ ಸಹ ರಾಜಕೀಯವಾಗಿ ಎದುರುಗೊಳ್ಳಲಾರದೇ ಈ ರೀತಿಯಾಗಿ ವರ್ತಿಸುವ ಮೂಲಕ ಧಾರ್ಮಿಕ ಸ್ಥಳವೊಂದರ ಮಹತ್ವವನ್ನು ಇವರು ಕಳೆದು ಹಾಕಿದ್ದು ನೈಜ ಧರ್ಮದ ಕಲ್ಪನೆಯ ವಿರುದ್ಧ ನಡೆದುಕೊಂಡಿದ್ದಾರೆಂದೇ ಹೇಳಬಹುದು.

Please follow and like us:

Leave a Reply

Your email address will not be published. Required fields are marked *