ಭಾರತದ ಕ್ರೀಡಾ ರಂಗದ ಶಾಶ್ವತ ಮಿನುಗು ತಾರೆ ಮೇರಿ ಕೋಮ್ ಎಂಬ ಗೆಲುವಿನ ಸಿಂಚನ!

ಕ್ರೀಡೆ ರಾಷ್ಟ್ರೀಯ

ತನಗಿರುವ ಮಿತಿಗಳನ್ನು ಮೀರುತ್ತಾ, ತನಗಿರುವ ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಾ  ತನ್ನ ಚಂಚಲ ತನವನ್ನು ಜತನದಿಂದಲೇ ನಿಯಂತ್ರಿಸಿಕೊಂಡು ಸಮಾಜದಲ್ಲಿ ಮಹತ್ತರ ಬದಲಾವಣೆ ತರುವ ಶಕ್ತಿ ಹೆಣ್ಣಿಗಿದೆ. ತಮ್ಮ ಇಚ್ಛಾಶಕ್ತಿಯಿಂದ ಅಸಾಧ್ಯವೆಂಬುದನ್ನು ಸಾಧಿಸಿ ತಮ್ಮ  ಗುರಿಯನ್ನು ಸಾಧಿಸುವ ಮತ್ತು ಕತ್ತಲ ಲೋಕದಲ್ಲೊಂದು ದೀಪ ಹೊತ್ತಿಸುವ ಅಧಮ್ಯ ಭರವಸೆಯನ್ನು  ಹುಟ್ಟಿಸುವ ಶಕ್ತಿ ಹೆಣ್ಣು ಮಕ್ಕಳಿಗಿದೆ.

Image result for mary com

ಇನ್ನು ಮೇಲ್ಕಾಣಿಸಿದ ಈ ರೀತಿಯ ಮಾತಿಗೆ ಉದಾಹರಣೆಯಾಗಿ ಕಾಣಸಿಗುವ  ಭಾರತ ಮಾತೆಯ ಹೆಮ್ಮೆಯ  ಮಗಳು ಮೇರಿ ಕೋಮ್.  ಮೂಲತಃ ಮಣಿಪುರದವರಾದ ಇವರು  ಕೋಮ್  ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ.

ಭಾರತದ  ಮಹಿಳಾ ಬಾಕ್ಸಿಂಗ್ ವಲಯದಲ್ಲಿ ಸಂಚಲನ ಸೃಷ್ಟಿಸಿ 5 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಇವರು ಅಲ್ಲದೆ, ಆಡಿದ ಆರು ಚಾಂಪಿಯನ್‌ಶಿಪ್‌ಗಳಲ್ಲೂ ಪದಕ ಗೆದ್ದ ಏಕೈಕ ಮಹಿಳೆ ಎಂಬುದು ಭಾರತದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಇನ್ನು  2012 ರ ಬೇಸಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾದ ಏಕೈಕ ಭಾರತೀಯ ಮಹಿಳಾ ಬಾಕ್ಸಿಂಗ್ ಪಟು ಎಂದೂ ಸಹ ಗುರುತಿಸಿಕೊಂಡಿರುವ ಇವರು 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕದವನ್ನೂ ಸಹ ಪಡೆದಿದ್ದು ಭಾರತದ ಜನಪ್ರಿಯ ಕ್ರೀಡಾ ತಾರೆ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

Related image

ಡಿಸೇಂಬರ್ 28ರಂದು  ದಿಲ್ಲಿಯಲ್ಲಿ ಆಯೋಜಿಸಿದ್ದ  ಒಲಂಪಿಕ್ ಕ್ವಾಲಿಫೈರ್ ಗೆ ನಡೆದ  ಮಹಿಳಾ  ಬಾಕ್ಸಿಂಗ್  ಟ್ರಯಲ್ಸ್ ನಲ್ಲಿ  21 ರ ಹರೆಯದ ಯುವ ಬಾಕ್ಸರ್ ನಿಖಾತ್ ಝರೀನ್ ವಿರುದ್ಧ ಸೆಣಸಾಡಿ 9-1 ರ ಅಂತರದಲ್ಲಿ  ಜಯ ತಮ್ಮದಾಗಿಸಿಕೊಂಡು 2020 ರಲ್ಲಿ ನಡೆಯುವ ವಿಶ್ವ ಒಲಂಪಿಕ್ ನಲ್ಲಿ 51 ಕೆಜಿಯ ಮಹಿಳಾ ಬಾಕ್ಸರ್ ವಿಭಾಗದಲ್ಲಿ ಭಾರತದಿಂದ ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಇವರು ಭಾರತೀಯ ಯುವ ಪೀಳಿಗೆಗೆ ಹಾಗೂ ಕ್ರೀಡಾ ಮನೋಭಾವದ ಸ್ತ್ರೀ ಸಂಕುಲಕ್ಕೆ  ಸ್ಫೂರ್ತಿಯ ಸೆಲೆಯಾಗಿ ನಿಂತಿದ್ದಾರೆ ಎಂಬುದು 100% ಸತ್ಯದ ಸಂಗತಿಯಾಗಿದೆ.

Please follow and like us:

Leave a Reply

Your email address will not be published. Required fields are marked *