ಮಹಾರಾಷ್ಟ್ರ, ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ 1.87% ರಷ್ಟು ದಾಖಲಾದ NOTA ಗೆ ಸಂವಿಧಾನಾತ್ಮಕ ಅಭಿವ್ಯಕ್ತಿ ಸೌಲಭ್ಯ ದೊರೆಯುವುದು ಯಾವಾಗ ?

Uncategorized

ಮತದಾನೋತ್ತರ ಸಮೀಕ್ಷೆಗಳ ನಂತರದಲ್ಲಿ ಈಗಾಗಲೇ ಹರಿಯಾಣ & ಮಹಾರಾಷ್ಟ್ರ ರಾಜ್ಯದ ಚುನಾವಣೆಯಲ್ಲಿ ಸಾಕಷ್ಟು ರೀತಿಯ ಅಚ್ಚರಿಯ ಫಲಿತಾಂಶಗಳು ಬಂದಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಮಹಾರಾಷ್ಟ್ರದ ಲಾತೂರು ಗ್ರಾಮಾಂತರ ಕ್ಷೇತ್ರದಲ್ಲಿ ನೋಟಾ ಮತದಾನಗಳು ವಿಜೇತ ಅಭ್ಯರ್ಥಿಯ ನಂತರದ ಸ್ಥಾನವನ್ನು ಪಡೆದುಕೊಂಡಿದ್ದು ತೀರಾ ಅಚ್ಚರಿಯನ್ನು ಉಂಟು ಮಾಡಿದೆ. ಇಲ್ಲಿ ಸ್ಪರ್ಧಿಸಿದ ಶಿವಸೇನೆಯ ಅಭ್ಯರ್ಥಿಗಿಂತ ಎರಡುಪಟ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡಿರುವ ನೋಟಾ ಇದೀಗ ರಾಷ್ಟ್ರಾದ್ಯಂತ ಸುದ್ದಿಯಲ್ಲಿರುವ ಸಂಗತಿಯಾಗಿದೆ.

ಮಹಾರಾಷ್ಟ್ರದಲ್ಲಿ ಸ್ಪರ್ಧಿಸಿದ AAAP{0.10%}, AIFB{0.00%}, AIMIM{1.34%}, BSP{0.92%}, CPI{0.06%}, CPIM{0.37%}, IUML{0.01%}, JD(S){0.01%}, SP{0.22%}  ಪಕ್ಷಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದಿರುವ ನೋಟಾ {1.35%} ಮತದಾರರ ಮನಸ್ಸಿನಲ್ಲಿ ಅಭ್ಯರ್ಥಿಗಳು & ಪಕ್ಷಗಳ ಬಗ್ಗೆ ಇರುವ ಅಸಮಾಧಾನವನ್ನು ಎತ್ತಿ ತೋರಿಸಿದೆ.

ಇನ್ನು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿಯೂ ಸಹ AAAP {0.48%}, AIFB {0.01%}, CPI {0.03%}, CPIM {0.07%}, JD(U) {0.01%}, NCP {0.02%}, SAD {0.38%}, SHS {0.01%}, SP {0.01%}, ಪಕ್ಷಗಳಿಗಿಂತ ಹೆಚ್ಚಿನ ಮತಗಳಿಕೆಯನ್ನು ಮಾಡಿದ್ದ ಅದರ ಪ್ರಮಾಣವು {0.52%} ಆಗಿದ್ದು ಜನಾಭಿಪ್ರಾಯದ ಮತ್ತೊಂದು ಮಗ್ಗುಲನ್ನು ನಮಗೆ ಎತ್ತಿ ತೋರಿಸಿದೆ.

ನೋಟಾ ಗೆ ಏಕಿಲ್ಲ ಸಂವಿಧಾನಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯ ?

ಮೇಲಿನ ಅಂಕಿ ಅಂಶಗಳನ್ನು ನೋಡಿದರೆ ನೋಟಾದ ಮಹತ್ವವವನ್ನು ನಾವೀಗ ಅರಿಯಬೇಕಾದ ಜರೂರತ್ತು ಇದೆ ಎಂದು ತೋರುತ್ತದೆ. ಆದರೆ ನೋಟಾದ ಹೆಸರಲ್ಲಿ ನೀಡಲಾಗಿರುವ ಜನಾಭಿಪ್ರಾಯಕ್ಕೆ ಶಾಸನಬದ್ಧವಾಗಿ  ಈ ಸದ್ಯ ಯಾವುದೇ ಕಿಮ್ಮತ್ತಿಲ್ಲ.

ಹೀಗಾಗಿ ಚುನಾವಣಾ ಆಯೋಗವು ಇನ್ನು ಮುಂದೆ ನೋಟಾದ ಸ್ಥಾನಕ್ಕೆ ಪ್ರತಿಯೊಂದು ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ 5 ಮಂದಿ ಅಭ್ಯರ್ಥಿಗಳನ್ನು ನೋಟಾದ ಪ್ರತಿನಿಧಿಗಳಾಗಿ ನಿಲ್ಲಿಸಬೇಕು. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಶಿಕ್ಷಣ ವ್ಯವಸ್ಥೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಾಧ್ಯಾಪಕರು ಅಥವಾ ರೈತ ಬಾಂಧವರೂ ಸಹ ಆಗಬಹುದು.

ಈ 5 ಮಂದಿಯನ್ನು ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದ ನೋಟಾ ಪ್ರತಿನಿಧಿಗಳೆಂದು ಘೋಷಿಸಬೇಕು. ಉದಾಹರಣೆಗೆ ಕರ್ನಾಟಕದಲ್ಲಿ 224 ಕ್ಷೇತ್ರಗಳಿದ್ದರೆ ಅವುಗಳನ್ನು ಪ್ರಾದೇಶಿಕತೆ ಆಧಾರದ 5 ಮತ ಕ್ಷೇತ್ರಗಳನ್ನಾಗಿ ಗುರುತಿಸಿ. ಆ 5 ಪ್ರಾಂತ್ಯಗಳಿಗೆ ಆಯೋಗದ ಐವರು ಪ್ರತಿನಿಧಿಗಳನ್ನು ನೇಮಿಸಬೇಕು.

Image result for maharashtra voters

ಆಯಾ ಕ್ಷೇತ್ರದಲ್ಲಿ ಬರುವ ನೋಟಾ ಮತಗಳನ್ನು ಆಧರಿಸಿ, ಈ 5 ಮಂದಿಗೆ ನೋಟಾ ಪ್ರತಿನಿಧಿಗಳಾಗಿ ವಿಧಾನಸಭೆ/ ಸಂಸತ್ ನೊಳಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಹೀಗಾದಾಗ ನೋಟಾ ಅಭಿಪ್ರಾಯಕ್ಕೆ ಹೆಚ್ಚಿನ ಸಂವಿಧಾನಾತ್ಮಕ ಮನ್ನಣೆ ದೊರೆಯಬಹುದು ಎಂದು ಕಾಣುತ್ತದೆ.

Please follow and like us:

2 thoughts on “ಮಹಾರಾಷ್ಟ್ರ, ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ 1.87% ರಷ್ಟು ದಾಖಲಾದ NOTA ಗೆ ಸಂವಿಧಾನಾತ್ಮಕ ಅಭಿವ್ಯಕ್ತಿ ಸೌಲಭ್ಯ ದೊರೆಯುವುದು ಯಾವಾಗ ?

Leave a Reply

Your email address will not be published. Required fields are marked *