ಮೆಡಿಕಲ್ ಕಾಲೇಜು ಮಂಜೂರಾತಿ ವಿಷಯದಲ್ಲಿ ಡಿಕೆಶಿಯಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯನವರ ಟೀಕೆಗೆ ಮುಂದಾದ ಅನರ್ಹ ಶಾಸಕ ಸುಧಾಕರ್!

ರಾಜಕೀಯ ರಾಜ್ಯ

ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಸೌಲಭ್ಯವನ್ನು ಚಿಕ್ಕಬಳ್ಳಾಪುರಕ್ಕೆ ಕಲ್ಪಿಸಿದ ನಂತರದಲ್ಲಿ ಅನರ್ಹ ಶಾಸಕ ಸುಧಾಕರ್ ಅವರ ಕುತಂತ್ರದ ಬಗ್ಗೆ ಸಹಜವಾಗಿಯೇ ಡಿ.ಕೆ.ಶಿವಕುಮಾರ್ ಅವರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಮುಂಬರುವ ಉಪ ಚುನಾವಣೆಯಲ್ಲಿ ಶಿವಕುಮಾರ್ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ “ಶಿವಕುಮಾರ್ ಅವರನ್ನು ಹೊಗಳಿ ಸಿದ್ದರಾಮಯ್ಯನವರನ್ನು ತೆಗಳುವ ಕೆಲಸಕ್ಕೆ ಮುಂದಾಗಿದ್ದು” ಹೊಸ ರಾಜಕೀಯ ವರಸೆಯನ್ನು ತೆಗೆದಿದ್ದಾರೆ.

Image result for mla sudhakar and d k shivakumar

ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಪ್ರಾಬಲ್ಯದ ಬಗ್ಗೆ ತುಸು ಹೆಚ್ಚೇ ತಿಳಿದಿರುವ ಸುಧಾಕರ್ ಅವರು ಬಹು ಬುದ್ಧಿವಂತಿಕೆಯಿಂದ ವರ್ತಿಸಿದ್ದು ಡಿಕೆಶಿ ಅವರಿಂದ ಬೀಸೋ ದೊಣ್ಣೆಯನ್ನು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಹೀಗಾಗಿಯೇ “ಶಾಸಕರನ್ನು ಅನರ್ಹಗೊಳಿಸಬೇಡಿ ಎಂದು ಡಿ ಕೆ ಶಿವಕುಮಾರ್ ಹೇಳಿದರೂ ಸಿದ್ದರಾಮಯ್ಯನವರು ಕೇಳದೇ ನಮ್ಮನ್ನು ಅನರ್ಹಗೊಳಿಸಿ, ಅನ್ಯಾಯ ಮಾಡಿದ್ದಾರೆ, ಎಂದು ಹೇಳಿಕೆ ನೀಡಿದ್ದಾರೆ.

Image result for siddaramaiah

ರಾಜಕೀಯದಲ್ಲಿ ವಿಭಿನ್ನ ವರಸೆಗಳು ಆಗಾಗ ಕಾಣಸಿಗುತ್ತವೆ. ಈ ಪೈಕಿ ಅನರ್ಹ ಶಾಸಕ ಸುಧಾಕರ್ ಅವರ ವರಸೆ ಯಾವ ರೀತಿಯದ್ದು ಎಂಬುದರ ಬಗ್ಗೆ ಅವರೇ ಉತ್ತರಿಸಬೇಕು. ಸಿದ್ದರಾಮಯ್ಯನವರನ್ನು ಹಣಿಯಲು ಪೂರ್ವ ನಿಯೋಜಿತ ಸಂಚಿನಲ್ಲಿ ಸುಧಾಕರ್ ಭಾಗಿಯಾಗಿರಬಹುದು ಎಂದು ಊಹಿಸಲಾಗುತ್ತಿದ್ದು, ಈ ಸಂಚಿನ ಸೂತ್ರಧಾರಿಗಳು ಯಾರು ಎಂಬುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.

Please follow and like us:

Leave a Reply

Your email address will not be published. Required fields are marked *