ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದ ಶಾಸಕ ಲಕ್ಷ್ಮಣ್ ಸವದಿಗೂ ಸಚಿವ ಸ್ಥಾನ – ಇದೇನಾ ಬಿಜೆಪಿಯ ಸುವರ್ಣಯುಗ ?

ರಾಜಕೀಯ ರಾಜ್ಯ

ವಿಧಾನಸೌಧದಲ್ಲಿ ಕಲಾಪ ನಡೆಯುವ ವೇಳೆ ಬ್ಲೂ ಫಿಲಂ ನೋಡಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದ ಅಥಣಿಯ ಶಾಸಕ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಬಿಜೆಪಿಯು ತಾನು ಹೇಳುತ್ತಿದ್ದ ಸುವರ್ಣ ಯುಗ ಇದೇನಾ ಎಂಬ ಪ್ರಶ್ನೆ ಮೂಡುವಂತಹ ವಾತಾವರಣ ವನ್ನು ಸೃಷ್ಟಿ ಮಾಡಿದೆ.

Related image

ಹೌದು ಅಂದು ವಿಧಾನಸೌಧದಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಕಲಾಪವು ಜೋರಾಗಿ ನಡೆಯುತ್ತಿತ್ತು. ಈ ವೇಳೆ ಸದನದಲ್ಲಿ ಹಾಜರಿದ್ದ ಬಿಜೆಪಿಯ ಶಾಸಕ ಲಕ್ಷ್ಮಣ್ ಸವದಿ ಹಾಗೂ ಕೃಷ್ಣಾ ಪಾಲೇಮಾರ್ ಅವರು ಸದನದಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುವ ಮೂಲಕ ಸದನಕ್ಕೆ ಅಗೌರವವನ್ನು ಉಂಟುಮಾಡಿದ್ದರು. ಈ ಸಂಗತಿಯು ತದ ನಂತರದಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಲಕ್ಷ್ಮಣ್ ಸವದಿ ವಿರುದ್ಧ ರಾಜ್ಯದ ಜನರು ಅಸಮಾಧಾವನ್ನು ವ್ಯಕ್ತಪಡಿಸಿದ್ದರು.

Image result for laxman savadi

ಆದರೆ ಇದೀಗ ಮತ್ತೊಮ್ಮೆ ಅಂತಹ ವ್ಯಕ್ತಿಗಳಿಗೇ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಯಡಿಯೂರಪ್ಪನವರು ತಾವು ಹೇಳುತ್ತಿರುವ ಸುವರ್ಣ ಯುಗದಲ್ಲಿ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾದರೂ ಸಹ ಈ ಪ್ರಶ್ನೆಗಳಿಗೆ ಉತ್ತರ ನೀಡು ನೈತಿಕತೆಯನ್ನು ಸ್ವತಃ ಬಿ ಎಸ್ ಯಡಿಯೂರಪ್ಪನವರು ಕಳೆದುಕೊಂಡಿದ್ದಾರೆ.

Please follow and like us:

1 thought on “ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದ ಶಾಸಕ ಲಕ್ಷ್ಮಣ್ ಸವದಿಗೂ ಸಚಿವ ಸ್ಥಾನ – ಇದೇನಾ ಬಿಜೆಪಿಯ ಸುವರ್ಣಯುಗ ?

  1. ಮಹಾ ಮಹಿಮಾ ಮೇಟಿ ಮೀಟಿದ ವೀಡೀಯೋವನ್ನು ದೇಶಾದ್ಯಂತ ಮಕ್ಕಳು ಯುವಕರು , ಮುದುಕರೆನ್ನದೆ ಮಾಧ್ಯಮಗಳು ಬ್ಲರ್ ಮಾಡಿ ತೋರಿದವು , ಆದರೂ ಆ ಮುದುಕಪ್ಪನಿಗೆ ಕ್ಲೀನ್ ಚಿಟ್ ನೀಡಲಾಯಿತು ಇದು ಸರಿಯೇ ? ಇದನ್ನೇಕೆ ನೀವು ಪ್ರಶ್ನೆ ಮಾಡೋದಿಲ್ಲಾ , ಯಾರಾದರೂ ಸವದಿಗೆ ಆಗದವರು ವಾಟ್ಸ್ ಅಪ್ ಮೂಲಕ ರವಾನೆ ಮಾಡಿರ ಬಹುದು , ಈಗ ಅದನ್ನು ಓಪನ್ ಮಾಡುತ್ತಾರೆ ಮಾದ್ಯಮದವರು ಜೂಮ್ ಹಾಕಿ ಸೆರೆಹಿಡಿಯಿರಿ ಎಂದು ,, ಹಾಕಿ ಕೊಟ್ಟಿರಬಹುದಲ್ಲವೇ ?

Leave a Reply

Your email address will not be published. Required fields are marked *