ಸಿದ್ಧಾರ್ಥ್ ಅಂತ್ಯ ಸಂಸ್ಕಾರ ಜವಾಬ್ದಾರಿ ನಿರ್ವಹಿಸದ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಸ್ಪೋಟಗೊಂಡ ಸ್ಥಳೀಯ ಜನಾಕ್ರೋಶ !

ಬೆಂಗಳೂರು ರಾಜಕೀಯ ರಾಜ್ಯ

ಚಿಕ್ಕಮಗಳೂರಿನ ಕಾಫಿಯ ಘಮಲನ್ನು ಅಂತರಾಷ್ಟ್ರೀಯ ಮಟ್ಟದವರೆಗೆ ಪಸರಿಸಿದ ಕನ್ನಡದ ಹೆಸರಾಂತ ಉದ್ಯಮಿ ಸಿದ್ದಾರ್ಥ್ ಅವರ ಅನಿರೀಕ್ಷಿತ ಸಾವು ನಾಡಿಗೇ ಅಘಾತವನ್ನು ತಂದಿದೆ. ಬರೀ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗದ ಜನರು ಅವರ ಸಾವಿಗೆ ಕಂಬನಿ ಮಿಡಿದಿದ್ದು ಕಾಫಿ ಡೇ ಹಾಗೂ ಮೈಂಡ್ ಟ್ರೀನ ಸಾವಿರಾರು ಉದ್ಯೋಗಿಗಳು ಅಕ್ಷರಶಃ ಕಣ್ಣೀರು ಹಾಕಿದ್ದಾರೆ.

Image result for siddarth coffee day

ಕರ್ನಾಟಕದ ಮಟ್ಟಿದ ಉದ್ಯಮ ವಲಯದಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ಮತ್ತು ಬಹಳಷ್ಟು ಮಂದಿ ಯುವಕರಿಗೆ ಮಾದರಿಯಾಗಿ ಸಾವಿರಾರು ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದ್ದ ಇವರನ್ನು ಇಡೀ ದೇಶವೇ ಸ್ಮರಿಸುತ್ತಿದ್ದರೆ, ತಮ್ಮದೇ ಊರಿನ ಖ್ಯಾತ ಉದ್ಯಮಿಯೊಬ್ಬ ಅಸುನೀಗಿದಾಗ ಜವಾಬ್ದಾರಿಯಿಂದ ಅತನ ಅಂತಿಮ ಸಂಸ್ಕಾರಗಳನ್ನು ಪೂರೈಸಬೇಕಿದ್ದ ಮೂಡಿಗೆರೆಯ ಶಾಸಕ ಕುಮಾರಸ್ವಾಮಿಯವರು ತಮ್ಮ ಜವಾಬ್ದಾರಿಯನ್ನು ಮರೆತು ಅಗೌರವದಿಂದ ವರ್ತಿಸಿದ್ದಾರೆ.

ಇನ್ನು ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸದೆ ಶೋಭಾ ಕರಂದ್ಲಾಜೆಯವರೂ ಸಹ ಸ್ಥಳದಲ್ಲಿ ಸರಿಯಾಗಿ ಕಾಣ ಸಿಗದೇ ತಮ್ಮದೇ ಪಕ್ಷದ ಹಿರಿಯ ನಾಯಕರ ಕುಟುಂಬದ ಸದಸ್ಯರು ಮೃತರಾದರೂ ಸಹ ಬಾರದೇ ಇರುವುದೂ ಸಹ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಜನಾಕ್ರೋಶಕ್ಕೆ ಕಾರಣವೇನು ?

ಕಾಫಿ ಡೇ ಸಂಸ್ಥೆಯ ಸ್ಥಾಪಕ ಸಿದ್ಧಾರ್ಥ್ ಅವರಿಗೆ ಸಲ್ಲಬೇಕಾಗಿರುವ ಗೌರವಕ್ಕೆ ಹಲವು ಕಾರಣಗಳಿವೆ. ಆದರೆ ಇಲ್ಲಿನ ಜನಾಕ್ರೋಶದ ಕಾರಣವು ಸ್ವಲ್ಪ ಭಿನ್ನವಾಗಿದೆ. ಮೂಲತಃ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿದ್ಧಾರ್ಥ್ ಅವರು ಮಲೆನಾಡಿನ ಭಾಗದ ಬಹಳಷ್ಟು ಮಂದಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡಿಗರಿಗೆ ಮಾತ್ರವೇ ಹೆಚ್ಚಿನ ಉದ್ಯೋಗವನ್ನು ನೀಡಬೇಕೆಂಬುದು ಅವರ ಕನಸಾಗಿದ್ದರಿಂದ ಅವರ ಸಾವಿರಾರು ಎಕರೆ ಕಾಫಿ ಎಸ್ಟೇಟ್ ನಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವನ್ನು ಕಲ್ಪಿಸಿದ್ದರು. ಅಲ್ಲದೇ ನಗರಗಳಲ್ಲಿನ ಕಾಫಿ ಡೇನಲ್ಲಿಯೂ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಸಿದ್ದಾರ್ಥ್ ಅವರು ವಿಯೆನ್ನಾದಲ್ಲಿರುವ ತಮ್ಮ ಕಾಫಿ ಡೇ ಶಾಖೆಗಳಿಗೂ ಸಹ ಚಿಕ್ಕಮಗಳೂರಿನ ಜನರನ್ನೇ ನೇಮಿಸಿದ್ದರು.

Image result for shobha karandlaje

ಹೀಗಾಗಿ ಸ್ಥಳೀಯ ಉದ್ಯೋಗ ಸೃಷ್ಟಿಯ ಜೊತೆ, ಜನರಿಗೆ ಉತ್ತಮವಾಗಿ ಸ್ಪಂದಿಸುವ ಗುಣ ಇಟ್ಟುಕೊಂಡಿದ್ದ ಇಂತಹ ಜನಪ್ರಿಯ ಉದ್ಯಮಿಗೆ ಕನಿಷ್ಠ ಗೌರವ ಸೂಚಿಸಲು ಅವರ ಅಂತಿಮ ಸಂಸ್ಕಾರದ ಜವಾಬ್ದಾರಿಯನ್ನು ಹೊರಲಿಲ್ಲಎಂಬುದು ಅಲ್ಲಿನ ಜನಾಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ತಮ್ಮೂರಿನ ಉದ್ಯಮಿಯ ಅಂತ್ಯ ಸಂಸ್ಕಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದ್ದ ಮೂಡಿಗೆರೆ ಶಾಸಕ ಕುಮಾರಸ್ವಾಮಿಯವರು ಕನಿಷ್ಟ ಪಕ್ಷ ಕ್ಷೇತ್ರದಲ್ಲೇ ಇದ್ದುಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದೇ ಇರುವುದರಿಂದ ಜನರ ಭಾವನೆಗೆ ಧಕ್ಕೆ ಉಂಟಾಗಿದ್ದು ಸಹಜವಾಗಿಯೇ ಸಿಟ್ಟಾಗಿದ್ದಾರೆ.

ಆದರೂ 2018 ರ ವಿಧಾನಸಭೆ ಚುನಾವಣೆಯಲ್ಲಿ ಯಾರಾದರೂ ಸತ್ತರೆ ಹಿಂದೂಗಳ ಸಾವಾಗುತ್ತಿದೆ ಎಂದು ಓಡಿ ಬರುತ್ತಿದ್ದ ಶೋಭಾ ಕರಂದ್ಲಾಜೆಯವರು , ಖ್ಯಾತ ಉದ್ಯಮಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದರೂ ಆ ಬಗ್ಗೆ ತುಟಿಕ್ ಪಿಟಿಕ್ ಅನ್ನದೆ ಇರುವುದು ತೀವ್ರ ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ತನಿಖೆಯ ನಂತರ ಎಲ್ಲವೂ ತಿಳಿಯಲಿದ್ದು ಅಲ್ಲಿಯವರೆಗೂ ಕಾಯಬೇಕಾದ ಅನಿವಾರ್ಯತೆ ಬಂದೊದಗಿದೆ.

Please follow and like us:

Leave a Reply

Your email address will not be published. Required fields are marked *