ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ ಕಾವಿಧಾರಿ ಋಷಿಕುಮಾರ ಅಲಿಯಾಸ್ ಕಾಳಿಸ್ವಾಮಿ!

ರಾಜ್ಯ

ಅರಸೀಕೆರೆಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದ ಒಬ್ಬ ವ್ಯಕ್ತಿ ಈಗ ಸ್ವಾಮೀಜಿಯಾಗಿದ್ದು  ಅಂದಿನಿಂದ ಇಂದಿನವರೆಗೆ ಅವನ ಜೀವನ ಪಯಣ ಅಬ್ಬಬ್ಬಾ .. ಅಂದಿಗು ಮತ್ತು ಇಂದಿಗೂ ನಡುವೆ ಇದ್ಯಲ್ಲ ಅದು ವಿಪರ್ಯಾಸವೆನ್ನುವಷ್ಟು ಬದಲಾವಣೆಯನ್ನು ಕಂಡಿದೆ. ಜಾತಿಯಲ್ಲಿ ಸುಳ್ಳು ಹೇಳಿದ್ದ ಮಹಾನುಭಾವ ತನ್ನ ತಂದೆ ತಾಯಿಯ ಐಡೆಂಟಿಟಿಯನ್ನೇ ಬದಲಿಸಿದ್ದವ , ನಿಂತ್ಯಾನಂದನ ಕರ್ಮಕಾಂಡ ಬಯಲು ಮಾಡುತ್ತಿನಂತ ಹೇಳಿ ಅವನ ಬಳಿ 10 ಕೋಟಿ ರೂಪಾಯಿ ಒಂದು ಫಾರ್ಚೂನರ್ ಕಾರ್ ನ ಬೇಡಿಕೆ ಇಟ್ಟಿದ್ದ , ಇದರಲ್ಲಿ ಸಿಕ್ಕಿ ಹಾಕಿಕೊಂಡ ಮಹಾನುಭಾವ ಮಾಧ್ಯಮವೊಂದರಲ್ಲಿ ತನ್ನ ಪೇಟವನ್ನ ತೆಗೆದಿಟ್ಟು ಕ್ಷಮಾಪಣೆ ಪತ್ರ ಬೇರೆ ಬರೆದು ಕೊಟ್ಟಿದ್ದನ್ನ ಜನ ಇನ್ನೂ ಮರೆತಿಲ್ಲ.

Image result for kaali swamy

ಈತ ಸಾಮಾಜಿಕವಾಗಿ ಜನರಿಗೆ ಏನು ಉಪಯೋಗ ಮಾಡಿದ್ದಾನೋ ಅದು ಭಗವಂತನಿಗೆ ಗೊತ್ತು ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಂಡ ಕುಡಿದ ಕೋತಿ ತರ ಆಡುತ್ತಿದ್ದಾನೆ , ಅಡಲಿ ಬೇಡ ಅನ್ನಲ್ಲ ಅದು ಅವನ ಅಭಿವ್ಯಕ್ತಿ ಸ್ವಾತಂತ್ರ್ಯ ಅಂದುಕೊಂಡರೂ ಖಾವಿ ತೊಟ್ಟು ತನ್ನನ್ನ ತಾನು ಸ್ವಾಮೀಜಿ ಅಂತ ಕರೆಸಿಕೊಳ್ಳುವವರು ಮಾಡುವಂತ ಕೆಲಸವಂತೂ ಅಲ್ಲವೇ ಅಲ್ಲ , ಒಂದು ಬಾಯಿಗೆ ಬಟ್ಟೆ ಕಟ್ಟಿಕೊಳ್ಳಬೇಕು ಇಲ್ಲವೇ ತೊಟ್ಟಿರುವ ಖಾವಿ ಬಟ್ಟೆ ಬಿಚ್ಚಬೇಕು ಯಾಕಂದ್ರೆ ನಮ್ಮ ದೇಶದಲ್ಲಿ ಇಂದಿಗೂ ಜನ ನಂಬಿಕೆ ಇಟ್ಟಿದ್ದು  ಖಾವಿ ತೊಟ್ಟವರು ಸಮಾಜಕ್ಕೆ ಶಾಂತಿ ಮಂತ್ರ ಹೇಳಿಕೊಡಬೇಕು , ಸಮಾಜದಲ್ಲಿ ಸಾಮರಸ್ಯ ಬೆಳೆಯುವಂತಹ ಕೆಲಸಗಳನ್ನ ಮಾಡಬೇಕು.

ಆದರೆ ಈತ ಬಾಯಿ ತೆರೆದರೆ ಕೋಮು ಸೃಷ್ಟಿಸುವಂತಹ ಅನ್ಯಧರ್ಮದ ಬಗ್ಗೆ ಕೇವಲವಾಗಿ ಮಾತನಾಡೋದು , ಹೆಣ್ಣು ಮಕ್ಕಳ ಬಗ್ಗೆ ಅಸಹ್ಯ ಹುಟ್ಟಿಸುವಂತಹ ಮಾತುಗಳು ಅಲ್ಲದೆ ಅದನ್ನ ಪ್ರಶ್ನೆ ಮಾಡೋರಿಗೆ ತೀರಾ ಅಶ್ಲೀಲವೆನಿಸುವ ಪದಗಳನ್ನು ಬಳಕೆ ಮಾಡುತ್ತಾ ಖಾವಿ ಬಟ್ಟೆಗೆ ಇರುವ ಗೌರವವನ್ನು ಹಾಳು ಮಾಡುತ್ತಿದ್ದಾನೆ ಇಂತವರಿಗೆ ಖಾವಿ ಒಂದು ರಕ್ಷಾ ಕವಚ ಅಷ್ಟೇ , ಧರ್ಮವನ್ನ ರಕ್ಷಿಸುತ್ತಿನಿ ಅಂತ ಹೇಳುವ ಇವರುಗಳು ಇಂತಹ ಕೃತ್ಯಗಳಿಂದ ಧರ್ಮವನ್ನ ಹಾಳು ಮಾಡುತ್ತಿದ್ದಾರೆ ವಿನಃ ಇವರುಗಳಿಂದ ಧರ್ಮಕ್ಕೆ ಒಂದಿಷ್ಟು ಉಪಯೋಗ ಇಲ್ಲ , ಧರ್ಮದ ಹೆಸರಿನಲ್ಲಿ ಇವರನ್ನ ಇವರು ರಕ್ಷಿಸಿಕೊಳ್ಳುತ್ತಿದ್ದಾರೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ .

ಇನ್ನು ಇಂತಹವರು ಸಮಾಜಕ್ಕೆ ಕಂಟಕ ಮತ್ತು ಇದೆ ರೀತಿ ಮುಂದುವರಿದಲ್ಲಿ ಖಾವಿ ತೊಟ್ಟ ನಿಜವಾದ ಸ್ವಾಮೀಜಿಗಳಿಗೆ ಕೂಡ ಮರ್ಯಾದೆ ಗೌರವ ಸಿಗದ ರೀತಿ ಆಗುವುದರಲ್ಲಿ ಸಂಶಯವೇ ಇಲ್ಲ ಈ ಹಿಂದೆ ಒಮ್ಮೆ ಒಂದಷ್ಟು ಜನ ಮಹಿಳೆಯರು ಸೇರಿ ಈತನನ್ನು ಥಳಿಸಿದ್ದು ಕೂಡ ಯಾರು ಮರೆತಿಲ್ಲ ಆದರೆ ಪಾಪ ಆತ ಮರೆತಿರಬೇಕು , ಇಂತಹವರಿಂದ ಧರ್ಮಕ್ಕೆ ಸಮಾಜಕ್ಕೆ ನಾಲ್ಕು ಪೈಸದ ಪ್ರಯೋಜನ ಇಲ್ಲ ಜನ ಇಂತವರನ್ನು ನಂಬಿ ಮೋಸ ಹೋಗುವುದು ಬೇಡ ಮತ್ತು ಖಾವಿಗೆ ಅದರದ್ದೇ ಆದ ಮಹತ್ವ ಇದೆ ಅದು ಇಂತಹವರಿಂದ ಹಾಳಾಗುವುದು ಬೇಡ ಎಂಬ ಸಣ್ಣ ಕಳಕಳಿ ಅಷ್ಟೇ … ಆತನ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಕಾಮೆಂಟ್ಗಳು ನೋಡಿದರೆ ಈತ ಸ್ವಾಮೀಜಿ ನ ಅಂತ ಎಲ್ಲರೂ ಒಂದು ಸಲ ತಮ್ಮನ್ನ ತಾವು ಪ್ರಶ್ನಿಸಿಕೊಳ್ಳದೆ ಇರಲಾರರು !!

ನಿಜವಾದ ಹಿಂದೂಗಳು , ಧರ್ಮ ಮತ್ತು ಖಾವಿ ಮೇಲೆ ನಂಬಿಕೆ ಗೌರವ ಇರುವವರು ಖಂಡಿತವಾಗಿಯೂ ಆತನ ಉದ್ದಟತನವನ್ನ ಖಂಡಿಸಿದೆ ಇರಲಾರರು .ಒಟ್ಟಾರೆ ಖಾವಿಯಿಂದ ಸಮಾಜದಲ್ಲಿ ತನ್ನನ್ನು ತಾನು ಮುಚ್ಚಿಟ್ಟುಕೊಂಡಿದ್ದ ಶ್ರಿ ರಿಷಿಕುಮಾರ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ !!!

ಲೇಖಕಿ – ಬಿಂದುಗೌಡ

Image may contain: 1 person, standing and close-up
Please follow and like us:

Leave a Reply

Your email address will not be published. Required fields are marked *