ಕಿರುತರೆ ಲೋಕದ ನೂತನ ಧೃವತಾರೆ ಶಿವಮೊಗ್ಗದ ಈ “ಕಾಕರಾಜ” !

ನಾಟಕ ಸಿನಿಮಾ ಸ್ಯಾಂಡಲ್ ವುಡ್

ಆಧುನಿಕ ಕಿರುತೆರೆ ರಂಗವು ಸೊರಗುತ್ತಿರುವಂತಹ ವೇಳೆ ಮಲೆನಾಡಿನ ಪ್ರತಿಭೆಯೊಂದು ಕಿರುತರೆ ಲೋಕಕ್ಕೆ ಪ್ರವೇಶಿಸಿದ್ದು ಹೊಸ ಭರವಸೆಯನ್ನು ಮೂಡಿಸಿದೆ. ಕಷ್ಟಸಾಧ್ಯವಾದ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಚುಟುಕಾದ ಅಭಿನಯದ ಮೂಲಕ ಗಮನಸೆಳೆಯುತ್ತಿರುವ ಶನಿ ಧಾರಾವಾಹಿಯ ಕಾಕರಾಜ ಪಾತ್ರಧಾರಿ ಹರೀಶ್ ಅವರು ಇದೀಗ ಕಿರುತರೆ ಲೋಕಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಮೂಲತಃ ಶಿವಮೊಗ್ಗದವರಾದ ಇವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರಿಸಿದಂತವರು. ನಂತರ ಚಿತ್ರರಂಗಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಆಗಿ ಅರಂಭಗೊಂಡ ಇವರ ಕಲಾಸೇವೆಯು ನಂತರದಲ್ಲಿ ಎಲ್ಲಿಗೋ ಹೋಯಿತು. ಇದರ ಪರಿಣಾಮವಾಗಿಯೇ ಕಿರುತೆರೆ ಲೋಕವು ಇಂತಹ ಪ್ರತಿಭಾವಂತನ ಕಲಾಸೇವೆಯನ್ನು ಪಡೆಯಲು ಸಾಧ್ಯವಾಯಿತು. ಶಿವಮೊಗ್ಗದಲ್ಲಿ ಕಾಕರಾಜ ಎಂದೇ ಹೆಸರು ಪಡೆದಿರುವ ಈತ ಹಲವು ರಂಗದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದು ಇವರಿಗೆ ಮುಂದೆ ಎಂತಹ ಭವಿಷ್ಯವಿದೆ ಎಂಬುದನ್ನು ಅವರ ಅಭಿನಯವೇ ಸಾರಿ ಹೇಳುತ್ತಿದೆ.

ರಂಗಭೂಮಿಯ ದ್ರೋಣಾಚಾರ್ಯ ಈ ನಮ್ಮ “ಕಾಕರಾಜ

ಹರೀಶ್ ಅವರ ಅಸಾಧಾರಣ ಪ್ರತಿಭೆಯು ಕೇವಲ ಕಿರುತೆರೆಗೆ ಮಾತ್ರವೇ ಸೀಮಿತವಾಗಿದೆ ಎಂದುಕೊಳ್ಳುವಂತಿಲ್ಲ. ಕಾರಣ ಅವರು ಮೂಲತಃ ಹವ್ಯಾಸಿ ರಂಗಭೂಮಿಯ ಹಿನ್ನಲೆಯಿಂದ ಬಂದಂತವರು. ಶಿವಮೊಗ್ಗ ಕೆಲವು ರಂಗ ತಂಡಗಳು ಹರೀಶ್ ಅವರ ಅಭಿನಯಕ್ಕೆ ವೇದಿಕೆಯನ್ನು ಒದಗಿಸಿದ್ದು ಅವರ ಅಭಿನಯದ ಸೊಬಗನ್ನು ಕಂಡಿವೆ. ಹವ್ಯಾಸಿ ರಂಗಭೂಮಿ ನಟರಾಗಿದ್ದಾಗ ಹರೀಶ್ ಅವರು ತಮ್ಮ ವಿಭಿನ್ನ ಕೌಶಲ್ಯವನ್ನು ಬಳಸಿ ಮಾಡಿದ್ದಂತಹ ದ್ರೋಣಾಚಾರ್ಯ, ಶಕುನಿ ಹಾಗೂ ಭೀಮನ ಪಾತ್ರಗಳು ಅವರೊಳಗೆ ಎಂತಹ ನಟನಿದ್ದಾನೆ ಎಂಬುದನ್ನು ಪ್ರೇಕ್ಷಕನಿಗೆ ತಿಳಿಸಿಕೊಟ್ಟಿತ್ತು.   

ಇವರ ಭೀಮನ ಪಾತ್ರವಂತೂ ಇಂದಿಗೂ ನೋಡಿದವರ ಮನಸ್ಸಲ್ಲಿ ಸದಾ ಕಾಡುವ ಪಾತ್ರವಾಗಿ ಉಳಿದಿದೆ. ಅಷ್ಟರ ಮಟ್ಟಿಗೆ ಇವರು ಪೌರಾಣಿಕ ಹಾಗೂ ಸಾಮಾಜಿಕ ಪಾತ್ರಗಳಲ್ಲಿ ತಮ್ಮ ಅತ್ಯಮೋಘವಾದ ಅಭಿನಯವನ್ನು ತೋರಿದ್ದಾರೆ.  ಈ ಬಗ್ಗೆ ಕೇಳಿದಾಗ ಹರೀಶ್ ಅವರು “ತಾನು ಸಾಧಿಸಿದ್ದು ಏನೇನು ಅಲ್ಲ, ಎಂದು ಹೇಳುವ ಮೂಲಕ, ವಿನಮ್ರತೆಯ ಕೂಸಾಗಿ

ಕಿರುತೆರೆ ಇವರನ್ನು ಎಳೆತಂದ ಆ ಮೂರು ಎಪಿಸೋಡ್ ಗಳು.

ಶಿವಮೊಗ್ಗದ ಹವ್ಯಾಸಿ ರಂಗಭೂಮಿಯಲ್ಲಿ ಎಲೆಮರೆಯ ಕಾಯಿಯಂತಿದ್ದ ಇವರ ನಟನೆಯನ್ನು ಗುರುತಿಸಿದ್ದ ಕಿರುತರೆ ನಿರ್ದೇಶಕ ವಿನೋದ್ ವಿ. ದೊಂಡಾಳೆಯವರು ಇವರ ನಟನೆಗೆ ಮುಂದಿನ ಪ್ರವೇಶಿಕೆಯನ್ನು ಒದಗಿಸಿದ್ದರು. ಅವರ ನಿರ್ದೇಶನದ “ಶಾತಂ ಪಾಪಂ” ಧಾರವಾಹಿ ಕೇವಲ ಮೂರೇ ಎಪಿಸೋಡ್ ಗಳಲ್ಲಿ ಹರೀಶ್ ಅಂತರಂಗದಲ್ಲಿ ಎಂತಹ ನಟನಿದ್ದಾನೆ ಎಂಬುದನ್ನು ಅವರು ಬಯಲಿಗೆಳೆದಿದ್ದರು. ಶಾತಂ ಪಾಪಂ ಧಾರವಾಹಿ ನಟನೆಯಲ್ಲಿ ನಟಿಸಿದ್ದ ಹರೀಶ್ ಅವರ ಅಭಿನಯದ  ಬಗ್ಗೆ ಇಂದಿಗೂ ಮಾತನಾಡಿಕೊಳ್ಳುತ್ತಾರೆ.

ಬಲ್ಲಾಳ ಹಾಗೂ ಮಾದೇಶನಾಗಿ ಮಿಂಚುತ್ತಿರುವ ಕಿರುತೆರೆಯ “ಕಾಕರಾಜ” !

ಶಾತಂ ಪಾಪಂನಲ್ಲಿ ಇವರ ಅಭಿನಯಕ್ಕೆ ಮನಸೋತ ಶನಿ ಧಾರವಾಹಿಯ ತಂಡವು ಇವರಿಗೆ ಕಾಕರಾಜನ ಪಾತ್ರವನ್ನು ನೀಡಿತು. ಎಂತಹ ಪಾತ್ರವಾದರೂ ಅದನ್ನು ಸಮರ್ಥವಾಗಿ ನಿರ್ವಹಿಸಬೇಕೆಂಬ ಹರೀಶ್ ಅವರ ಅಭಿನಯ ಶಕ್ತಿ ಏನೆಂಬುದನ್ನು ಕಾಕರಾಜ ಪಾತ್ರವು ಅನಾವರಣಗೊಳಿಸಿತು. ಕಾಕರಾಜನ ವೇಷಭೂಷಣ ಹಾಗೂ ಪಾತ್ರಕ್ಕೆ ತಕ್ಕಂತಹ ಅವರ ಆಂಗಿಕ ಅಭಿನಯವು ಬಹಳಷ್ಟು ಮಂದಿಯ ಮನಸೆಳೆಯಿತು.

ಹೀಗಾಗಿಯೇ ತಾನಾಗಿಯೇ ಅವರಿಗೆ ರಕ್ಷಾ ಬಂಧನ ಹಾಗೂ ಯಜಮಾನಿ ನಟಿಸುವ ಅವಕಾಶವು ಒದಗಿ ಬಂತು. ಇದೀಗ ಶನಿ ಧಾರಾವಾಹಿಯಲ್ಲಿ ತೋರಿಸಿದ ತಮ್ಮ ಸುಪ್ತ ಪ್ರತಿಭೆಯನ್ನು ರಕ್ಷಾಬಂಧನ ಹಾಗೂ ಯಜಮಾನಿ ಧಾರವಾಹಿಯಲ್ಲಿ ತೋರಿಸುತ್ತಿರುವ ಹರೀಶ್ ಅವರಿಗೆ ಅಭಿನಯವೆಂದರೆ ನೀರು ಕುಡಿದಷ್ಟೇ ಸಲೀಸು.

ಇಂತಹ ನಟನನ್ನು ಬಳಸಿಕೊಳ್ಳುವುದೇ ನಮ್ಮ ಸ್ಯಾಂಡಲ್ ವುಡ್?

ಅತೀ ಕಡಿಮೆ ಸಮಯದಲ್ಲಿ ಒಂದಿಲ್ಲೊಂದು ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಹರೀಶ್ ಅವರು ಯಶಸ್ಸಿನ ನಾಗಾಲೋಟದಲ್ಲಿ ಓಡುತ್ತಿದ್ದಾರೆ. ಆದರೆ ಇಂತಹ ನಟನ ಅಭಿನಯದ ಛಾತಿಯನ್ನು ಸ್ಯಾಂಡಲ್ ವುಡ್ ಬಳಸಿಕೊಳ್ಳುವುದೇ ಎಂಬ ಪ್ರಶ್ನೆ ಮೂಡಿದ್ದು, ಒಂದು ವೇಳೆ ಬಳಸಿಕೊಂಡರೂ ಹೇಗೆ ಎನ್ನುವ ಪ್ರಶ್ನೆ ಇದೀಗ ನಮ್ಮೆದುರಿಗೆ ಇದೆ.

ಒಂದು ವೇಳೆ ಸ್ಯಾಂಡಲ್ ವುಡ್ ಏನಾದರೂ ಇಂತಹ ನಟರಿಗೆ ಅವಕಾಶ ಕೊಟ್ಟರೆ ತಮ್ಮಿಂದ ಸ್ಯಾಂಡಲ್ ವುಡ್ ನ ಹೊಳಪು ಹೆಚ್ಚಾಗುವ ದಿಕ್ಕಿನೆಡೆ ಶ್ರಮಿಸುತ್ತೇನೆ ಎಂಬ ಅಭಿಪ್ರಾಯವನ್ನು ಶಿವಮೊಗ್ಗ ಕಾಕರಾಜನೆಂದೇ ಹೆಸರು ಗಳಿಸಿರುವ ಹರೀಶ್ ಅವರು ಹೇಳುತ್ತಾರೆ.

ನಟನೆ ನೃತ್ಯ ನಿರ್ದೇಶನ ಎಲ್ಲದಕ್ಕೂ ಸೈ !

ಬಹುತೇಕ  ಬಹು ಪ್ರತಿಭೆಯ ಪ್ಯಾಕೇಜ್ ನಂತಿರುವ ಮಲೆನಾಡಿನ ಜನರ ಈ ಕಾಕರಾಜ ನಟನೆಗೂ ಸೈ, ನೃತ್ಯ ಹಾಗೂ ನಿರ್ದೇಶನಕ್ಕೂ ಸೈ ಎನ್ನುವಂತವರು. ಕ್ಯಾಮೆರಾ ತಾಂತ್ರಿಕತೆಯನ್ನೂ ಬಲ್ಲ ಇವರ ಅಪರೂಪದ ದಾರ್ಶನಿಕ ಪ್ರತಿಭೆಯು ಎಲ್ಲೆಡೆ ಪಸರಿ ಮುಂದಿನ ಪೀಳಿಗೆಗೆ ಕಲಿಕೆಯ ಪಾಠವಾಗಲಿ ಎಂದು ಹಾರೈಸುತ್ತೇವೆ. !

Please follow and like us:

Leave a Reply

Your email address will not be published. Required fields are marked *