ದೇಶದ ವಿಶ್ವವಿದ್ಯಾಲಯಗಳಲ್ಲಿ ಜೆಎನ್ ಯು ವಿಶ್ವವಿದ್ಯಾಲಯವೇ ಬೆಸ್ಟ್ ಎಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಕ್ರಿಯಾಲ್ ಅಭಿಮತ !

ರಾಜಕೀಯ ರಾಷ್ಟ್ರೀಯ ಸಂಸತ್

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಜೆಎನ್ ಯು ಮೆಲೆ ಹಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಜೆಎನ್ ಯು ವಿಶ್ವವಿದ್ಯಾಲಯವು ದೇಶದಲ್ಲೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾತನ್ನು ಹೇಳಿರುವುದು ಬೇರೆ ಯಾರೂ ಅಲ್ಲ ಸ್ವತಃ ಈ ಕೇಂದ್ರ ಸರ್ಕಾರದ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯನ್ನು ನಿರ್ವಹಿಸುತ್ತಿರುವ ಸಚಿವ ರಮೇಶ್ ಪೋಕ್ರಿಯಾಲ್ ಅವರು.

Image result for ramesh pokhriyal and jnu

ಕೇಂದ್ರ ಲೋಕಸೇವಾ ಆಯೋಗದ ಐಇಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡ 32 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 18 ಮಂದಿ ಅಭ್ಯರ್ಥಿಗಳು ಜೆಎನ್ ಯು ವಿಶ್ವವಿದ್ಯಾಲಯದವರೇ ಆಗಿರುವುದು ಇಂತಹ ಮಹತ್ವದ ಪ್ರಶಂಸೆ ಮೂಡಿಬರಲು ಕಾರಣವಾಗಿದೆ. ಅಲ್ಲದೇ ಈ ಸಾಧನೆಯಿಂದಾಗಿ ಹಲವು ವಿವಾದಗಳ ಮೂಲಕ ಜೆ ಎನ್ ಯು ಅನ್ನು ಹಾಳುಗೆಡವಲು ಹೊರಟವರಿಗೆ ದೊಡ್ಡ ಸಂದೇಶವನ್ನು ರವಾನಿಸಿದಂತೆ ಆಗಿದೆ.

ಈಗಲಾದರೂ ಶೋಷಿತ ವರ್ಗಗಳ ಜ್ಞಾನ ಕೇಂದ್ರವಾದ ಜೆಎನ್ ಯು ಅನ್ನು ಅಭಿವೃದ್ಧಿ ಮಾಡುವೆಡೆ ಸರ್ಕಾರ ಗಮನ ಹರಿಸಲಿ ಮತ್ತು ಅಲ್ಲಿನ ಗಲಭೆಗಳನ್ನು ನಿಯಂತ್ರಿಸಿ ಶಾಂತಿಯುತ ವಾತಾವರಣವನ್ನು ನಿರ್ಮಿಸಲಿ.

Please follow and like us:

2 thoughts on “ದೇಶದ ವಿಶ್ವವಿದ್ಯಾಲಯಗಳಲ್ಲಿ ಜೆಎನ್ ಯು ವಿಶ್ವವಿದ್ಯಾಲಯವೇ ಬೆಸ್ಟ್ ಎಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಕ್ರಿಯಾಲ್ ಅಭಿಮತ !

Leave a Reply

Your email address will not be published. Required fields are marked *