ತಪ್ಪಿಕೊಂಡು ಹೊಗಳಿದ್ದೆಲ್ಲಾ ನಾಟಕ – ಇಸ್ರೋ ಸಿಬ್ಬಂದಿಗಳ ವೇತನ ಹೆಚ್ಚಳ ಆದೇಶ ಹಿಂಪಡೆದ ಕೇಂದ್ರ ಸರ್ಕಾರ !

ರಾಜಕೀಯ ರಾಷ್ಟ್ರೀಯ ವಿಜ್ಞಾನ

ಇತ್ತೀಚೆಗಷ್ಟೆ ಚಂದ್ರಯಾನ-2 ರ ಸಂದರ್ಭದಲ್ಲಿ ತನ್ನದೇ ಆದ ಪ್ರಯತ್ನಗಳಿಗಾಗಿ ದೇಶಾದ್ಯಂತ ಸುದ್ದಿಯಾಗಿ ಪ್ರಧಾನಿಯಾದಿಯಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದ ಇಸ್ರೋ ಬಳಗಕ್ಕೆ ಇದೀಗ ಕೇಂದ್ರ ಸರ್ಕಾರದ ಆದೇಶವೊಂದು ತೀವ್ರ ಮುಜುಗರ ತರಿಸಿದೆ. ಹೌದು ಇಸ್ರೋನ ಹಿರಿಯ ಅಧಿಕಾರಿಗಳ ವೇತನ ಹೆಚ್ಚಳಕ್ಕೆ ಕಡಿವಾಣ ಹಾಕಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದ್ದು ಇದೀಗ  ಪ್ರಧಾನಿ ಮೋದಿಯವರ ಅಪ್ಪುಗೆ ಸಾಂತ್ವನ ಎಲ್ಲವೂ ನಾಟಕದಂತೆ ಭಾಸವಾಗುತ್ತಿದೆ.

Image result for isro and modi

ಮೊನ್ನೆಯಷ್ಟೇ ಚಂದ್ರಯಾನ-2 ವೇಳೆ ನಮ್ಮ ಉಪಗ್ರಹವು ಕಕ್ಷೆ ತಲುಪುವ ಸ್ವಲ್ಪವೇ ದೂರದಲ್ಲಿ ಸಂಪರ್ಕ ಕಡಿದುಕೊಂಡಿದ್ದರಿಂದ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಈ ವೇಳೆ ಇಸ್ರೋದ ಅಧ್ಯಕ್ಷರಾದ ಶಿವನ್ ಅವರನ್ನು ಪ್ರಧಾನಿಗಳು ಅಪ್ಪಿಕೊಂಡು ನಿಮ್ಮ ಸಾಧನೆಯು ದೇಶಕ್ಕೇ ಮಾದರಿಯೆಂಬ ಸಂದೇಶವನ್ನು ನೀಡಿದ್ದರು!

Image result for isro and modi

ಆದರೆ ಇದೀಗ ಅಧಿಕಾರಿಗಳ ವೇತನಕ್ಕೆ ಕತ್ತರಿ ಹಾಕಲು ನಿರ್ಧರಿಸುವ ಮೂಲಕ ಕೇಂದ್ರ ಸರ್ಕಾರವು ತನ್ನ ಅಪ್ಪುಗೆ ಸಾಂತ್ವನ ಎಲ್ಲವೂ ಸುಳ್ಳುತನದಿಂದ ಕೂಡಿದ್ದೆಂದು ಸಾಬೀತುಪಡಿಸಿದ್ದು ಇಸ್ರೋನ ಅಧಿಕಾರಿಗಳನ್ನು ಮುಜುಗರಕ್ಕೆ ಒಳಪಡಿಸಿದೆ.

Please follow and like us:

Leave a Reply

Your email address will not be published. Required fields are marked *