ಸಿಂಹಳೀಯರ ವಿರುದ್ಧ ಸೆಣಸಲಿರುವ ಭಾರತೀಯ ಹುಲಿಗಳು ಯಾರು ಗೊತ್ತಾ ? 

ಕ್ರಿಕೆಟ್ ಕ್ರೀಡೆ

ಹೊಸ ದಿಗಂತಕ್ಕೆ ಕಾಲಿಟ್ಟ ಮೊದಲನೆ  ವಾರವೇ  ಎದುರಾಳಿ ತಂಡ ಶ್ರೀಲಂಕಾವನ್ನು ಎದುರಿಸಲಿರುವ ಭಾರತ ಅಸ್ಸಾಂನ  ಗುವಾಹಟಿಯಲ್ಲಿ ನಾಳೆಯಿಂದ  ನಡೆಯಲಿರುವ T 20 ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಲಿವೆ.ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ 20-20 ಸರಣಿಯಲ್ಲಿ ಭಾರತವು ಭಾಗವಹಿಸುತ್ತಿದ್ದು, ಈ ವರ್ಷದ  ಮೊದಲ ಪಂದ್ಯ ಜನವರಿ 4 ಭಾನುವಾರ ಗುವಾಹಟಿಯಲ್ಲಿ ನಡೆಯಲಿದೆ.

Image result for india vs sri lanka t20 2020

ಅನಾರೋಗ್ಯದಿಂದ  ಚೇತರಿಸಿಕೊಂಡಿರುವ  ವೇಗಿ ಜಸ್ಪ್ರೀತ್ ಬುಮ್ರಾ ಅವರು  ತಂಡಕ್ಕೆ ಮರಳಿದ್ದು ತಮ್ಮ  ಅಮೋಘ  ಆಟವನ್ನು  ಮುಂದುವರಿಸುವ ಇರಾದೆಯಲ್ಲಿದ್ದಾರೆ. ಮುಂದೆ ಬರುವ  ನ್ಯೂಜಿಲೆಂಡ್ ಪ್ರವಾಸಕ್ಕೂ ಈ ಸರಣಿ ವೇದಿಕೆಯಾಗಿದ್ದು ಇಲ್ಲಿ ಬುಮ್ರಾ ತಮ್ಮ  ಉತ್ತಮ  ಆಟದ ಲಯ  ಕಂಡುಕೊಳ್ಳಬೇಕಿದೆ.

ಶ್ರೀಲಂಕಾ ತಂಡದ ಎದುರು ಸೆಣಸಲಿರುವ  ಭಾರತ ತಂಡದ ಆಯ್ಕೆ ಹೀಗಿದೆ

ಭಾರತ: ವಿರಾಟ್ ಕೊಹ್ಲಿ (ನಾಯಕ),

ಶಿಖರ್ ಧವನ್, ಕೆಎಲ್ ರಾಹುಲ್,

ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ,

ಸಂಜು ಸ್ಯಾಮ್ಸನ್, ರಿಷಬ್ ಪಂತ್ (ವಿಕೆಟ್ ಕೀಪರ್),

 ಶಿವಂ ದುಬೆ, ಯಜುವೇಂದ್ರ ಚಹಲ್,

ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ,

ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್,

ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ .

Image result for india vs sri lanka t20 2020

ಅಕ್ಟೋಬರ್ ತಿಂಗಳಲ್ಲಿ ನಡೆಯುವ ಕಿರಿಯರ  ವಿಶ್ವಕಪ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು 20-20 ಪಂದ್ಯಗಳತ್ತ ಭಾರತ ಗಮನ ಹರಿಸಿದ್ದು  ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಲಂಕಾ ಸರಣಿಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Please follow and like us:

Leave a Reply

Your email address will not be published. Required fields are marked *