ದೂಕಪ್ಪ – ಸಂಚಿಕೆ 2 ( In Search of him)

ಕಾಂತ ಕಾಲಂ ಸಾಹಿತ್ಯ

ಮನೆಗೆ ಮರಳಿದ ಮನಸ್ವಿನಿ, ಆ ಸ್ಥಳದ ಬಗ್ಗೆ ಗೂಗಲ್ ಮಾಡಿದಾಗ,ಕೆಲ ಅಂಕಿ ಅಂಶಗಳು ಕಂಡವು. 2016 ರಲ್ಲಿ ಒಂದು ರಿಸರ್ಚ್ ಟೀಮ್ ಪ್ರಕಾರ ಭಾರತದ “suicide hub” ಅನ್ನಿಸಿಕೊಳ್ಳುವ ರಾಜ್ಯ “ಕರ್ನಾಟಕ”. ಇಲ್ಲಿ ಪ್ರತಿ ಒಂದು ಲಕ್ಷ ಜನದಲ್ಲಿ 32 ಜನ ಆತ್ಮಹತ್ಯೆಗೆ ಶರಣಾಗುವರು. ಆಶ್ಚರ್ಯವೆಂದರೆ ಅದರಲ್ಲಿ ಅರ್ಧದಷ್ಟು ಆತ್ಮಹತ್ಯೆಗಳು ಆ ಜಾಗದಲ್ಲಿ  ನಡೆಯುತ್ತಿದ್ದವು.

Trip ಮುಗಿಸಿಕೊಂಡು ಮನೆಗೆ ಬಂದ ಸತೀಶ್ ವಿಶ್ರಮಿಸುತ್ತಿದ್ದ. ಅವನ ಫೋನ್ ಮೊಳಗಿತು.

“ಹಲೋ ಸತೀಶ್..ನಾನು ಮನಸ್ವಿನಿ”

ಸತೀಶ್ : “ಹಾ, ಹೇಳು ಮನು..!”

ಎರಡೇ ನಿಮಿಷದಲ್ಲಿ ಸತೀಶನ ಕಣ್ಣು ಅಗಲವಾದವು. ಮನಸ್ವಿನಿಯ ಆ ಮಾತುಗಳು ಆತನನ್ನು ದಿಗ್ಭ್ರಾಂತಗೊಳಿಸಿದವು.ಆಕೆಯ ಮಾತು ಕೇಳಿ ಗಾಬರಿಗೊಂಡನು.

“ಸತೀಶ್, I am going to find him.ಆದ್ರೆ ನಂಗೆ ನಿನ್ ಸಹಾಯ ಬೇಕು.
ನಾಳೆ ಆ ಜಾಗಕ್ಕೆ ಮತ್ತೆ ಹೋಗಣ. ಆದರೆ ಈ ಬಾರಿ ಮೇಲೆ ನಾ ಒಬ್ಬಳೇ ಹೋಗ್ತೀನಿ. ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಪರದಾಡುವ ನಟನೆ ಮಾಡ್ತೀನಿ.  He will come..He will definitely come”.. ಎಂದು ಆಕೆ ಫೋನ್ ಬ್ಯಾಂಕರ್ ರೀತಿ ಪಟಪಟನೆ ಹೇಳಿದಳು.

ಸತೀಶ್: “ಮನು… this is a risk. ಯಾವುದೊ ಒಂದು ಮೂರ್ಖ ಸುಳಿವಿಗೆ ನಿನ್ನ ಪ್ರಾಣ ಒತ್ತೆ ಇಡೋದ್ ಎಷ್ಟು ಸರಿ? ಅವನು ಅಲ್ಲಿ ನಿಜವಾಗಲೂ ಇದ್ದರೆ? ನಿನ್ನ ಗತಿ? ವಿಚಿತ್ರ ಮನಸ್ಥಿತಿ ಹಿಂದೆ ವಿಚಿತ್ರ ಕಥೆಗಳು ಇರುತ್ತವೆ. Please understand”

ಫೋನ್ ನಲ್ಲಿ ಅರ್ಧ ಗಂಟೆಯ ಸಂವಾದದ ನಂತರ pendulum ಮನಸ್ವಿನಿ ಕಡೆ ವಾಲಿತ್ತು. ಆಕೆ ಸತೀಶ್ ನ ಒಪ್ಪಿಸುವಲ್ಲಿ ಯಶಸ್ವಿಯಾದಳು.

ಮರುದಿನ ರಾತ್ರಿ 9ಗಂಟೆಗೆ ಕಾಲೇಜು trip ನ ನೆಪವೊಡ್ಡಿ ಅಲ್ಲಿಗೆ ಪಯಣ ಪ್ರಾರಂಭಿಸಿದರು.ರಾತ್ರಿ 11 ಗಂಟೆಗೆ ಸತೀಶ್ ಕಾರು ಬೆಟ್ಟದ ತಪ್ಪಲಿಗೆ ಬಂದು ನಿಂತಿತು. ಕಾರಿನ headlight ಬಿಟ್ಟರೆ ಸುತ್ತೆಲ್ಲೂ ಬೆಳಕಿನ ಸುಳಿವಿರಲಿಲ್ಲ. ಮಿಂಚಿನ ಹುಳುಗಳು ನಿಜವಾಗಿಯೂ ಇವೆ ಎಂದು ಮನಸ್ವಿನಿಗೆ ತಿಳಿದದ್ದೇ ಅಂದು ರಾತ್ರಿ.

200mts ದೂರದಲ್ಲಿ ಒಂದು ಚಿಕ್ಕ lantern ದೀಪ ಕಂಡ ಇಬ್ಬರೂ, ಕಾರಿನಿಂದ ಇಳಿದು ನಡೆಯಲಾರಂಭಿಸಿದರು.  ದೀಪ ಹತ್ತಿರವಾದಂತೆ ಇಬ್ಬರ ಹೃದಯ ಬಡಿತ ಅವರಿಗೇ ಕೇಳಿಸತೊಡಗಿತು. ಒಂದು 70-80ರ ವಯಸ್ಸಿನ ವೃದ್ಧೆ ದೀಪವನ್ನು ಇಟ್ಟುಕೊಂಡು ಕಿತ್ತಳೆ,ಸೌತೆಕಾಯಿ,ಬಾಳೆಹಣ್ಣು ಹಾಗೂ ಮಂಡಕ್ಕಿ ಇದ್ದ ಚಿಕ್ಕ ತಳ್ಳುವ ಗಾಡಿಯನ್ನು, ತಾನು ತಂದಿದ್ದ ಒಂದು ಟಾರ್ಪೆಲ್ ನಿಂದ ಮುಚ್ಚುತ್ತಿದಳು.

ಮನಸ್ವಿನಿ, ಆ ಲಾಂಟರ್ನ್ ದೀಪವನ್ನು ಎತ್ತಿ ಹಿಡಿದು..

“ಅಜ್ಜಿ.. ನನಗೆ ಇಂದು ರಾತ್ರಿ ಈ ದೀಪ ಬೇಕು. ನಿಮಗೆ ವಾಪಸ್ಸು ತಂದು ಕೊಡುವೆ” ಎಂದು ಚಿಕ್ಕ ಧ್ವನಿಯಲ್ಲಿ ಕೇಳಿದಳು.

ಆ ತಡ ರಾತ್ರಿಯಲ್ಲಿ ಇವರನ್ನು ಕಂಡ ಆ ವೃದ್ಧೆ, ತನ್ನ ಜಜ್ಜಿದ ಕನ್ನಡಕವ ಸರಿ ಮಾಡುತ್ತ ವ್ಯಂಗ್ಯ ನಗುವನ್ನ ಬೀರಿದಳು.

“ಸಾಯಲೆಂದೇ ಬಂದ ನಿಮಗೆ ದೀಪದ ಅವಶ್ಯಕತೆಯೇ?”
ವೃದ್ಧೆಯ ಈ ಪ್ರೆಶ್ನೆ ಸತೀಶ್ ನ ತುಂಬಾ ಪ್ರೆಶ್ನೆಗಳಿಗೆ ಉತ್ತರವಾಯಿತು. ಮನಸ್ವಿನಿಯ ತುಂಬಾ ಉತ್ತರಗಳಿಗೆ ಹೊಸ ಪ್ರೆಶ್ನೆಗಳು ಹುಟ್ಟಿಕೊಂಡವು.

ವೃದ್ಧೆಯ ಬಳಿ ದೀಪ ಪಡೆದು ಕಾರಿನ ಬಳಿ ಬಂದ ಇಬ್ಬರೂ ನಿಟ್ಟುಸಿರಿನಿಂದ ಕಾರಿನ ಒಳಗೆ ಕುಳಿತರು..

“Do you have to do this?” ಸತೀಶನ ಈ ಪ್ರೆಶ್ನೆ ಮನಸ್ವಿನಿಯ ಹುಚ್ಚನ್ನ ಪ್ರೆಶ್ನಿಸುತ್ತಿತ್ತು.

“Come on Satish, ಏನೇ ತೊಂದ್ರೆ ಆದ್ರೂ I will give you a call. ಆತನ ಅಸ್ಥಿತ್ವವೇ ಪ್ರೆಶ್ನೆ ಆಗಿದ್ದಾಗ ಭಯ ಯಾಕೆ?  ಇದ್ದರೆ ಅವನ ಜೊತೆ ಮಾತಾಡುವೆ, ಅವನ ವ್ಯಕ್ತಿತ್ವ ಗಮನಿಸುವೆ, ಅವನ ಬಗೆಗಿನ ನನ್ನ analysis ಒಂದು ಹೊಸ ಮೈಲಿಗಲ್ಲು ಆಗ್ಬೇಕು”. ಎಂದು ಹುಮ್ಮಸ್ಸಿನ ಮಾತುಗಳಾಡಿ ಆಕೆ ಕಾರಿನಿಂದ ಕೆಳಗಿಳಿದಳು.

ಆ ಅಜ್ಜಿಯ ಗಾಡಿಯಿಂದ ತಂದ ಬಾಳೆಹಣ್ಣನ್ನು ತಿನ್ನುತಿದ್ದ ಮನಸ್ವಿನಿಯ ಕಣ್ಣಿನ ತೇಜಸ್ಸು, ಇನ್ನೊಂದು ಕೈಯಲ್ಲಿದ್ದ ದೀಪದ ಬೆಳಕಿನೊಂದಿಗೆ ಸ್ಪರ್ಧಿಸುತ್ತಿತ್ತು.

ದೂರದಿಂದ ಆ ವೃದ್ಧೆ ಇವರ ಬಳಿ ಊರುಗೋಲು ಊರುತ್ತ ಬರುತ್ತಿದ್ದಳು. ಅದನ್ನು ಕಂಡ ಮನಸ್ವಿನಿ..

“ಸತೀಶ್,ಆ ಅಜ್ಜಿ ಈ ಕಡೆ ಬರುತ್ತಿದಾಳೆ. ಬಂದು ನನಗೆ ಕಾಟ ಕೊಡುವ ಮುಂಚೆ ನಾ ಹೊರಡುವೆ. Wish me luck”..!! ಎನ್ನುತ್ತಾ ಬೆನ್ನು ಮಾಡಿ ಹೊರಟುಬಿಟ್ಟಳು.

ಮನಸ್ವಿನಿ ಮೆಟ್ಟಿಲುಗಳನ್ನು ಹತ್ತಲಾರಂಭಿಸಿದಳು.ಆಕೆ ಹಿಡಿದ ಲಾಂಟರ್ನ್ ದೀಪವು ಅವಳು ಬೆಟ್ಟದ ಮೆಟ್ಟಿಲು ಹತ್ತುತ್ತಿದ್ದನ್ನು ಗಮನಿಸಲು ಕಾರಿನಲ್ಲಿದ್ದ  ಸತೀಶ್ ನಿಗೆ ಸಹಕರಿಸುತಿತ್ತು. ದೀಪವು ಚಿಕ್ಕದಾದಂತೆ ಇವನ ಭಯ ಹೆಚ್ಚಾಯಿತು.

ಆ ವೃದ್ಧೆ ನಿಧಾನವಾಗಿ ಕಾರಿನ ಬಳಿ ಬಂದಳು.

“ಓ ಸಾಮಿ.. ಇನ್ನು ಮೇಲಕ್ಕೆ ಹೋಗಿಲ್ವೇ?” ಅದೇ ವ್ಯಂಗ್ಯ ನಗು.

“ಇಲ್ಲ ಅಜ್ಜಿ. ನಾವು ವಿದ್ಯಾರ್ಥಿಗಳು.  ಈ ಸಮಯದಲ್ಲಿ ಬೆಟ್ಟ ಹೇಗಿರುತ್ತದೆ ಎಂದು ನನ್ನ ಫ್ರೆಂಡ್ ನೋಡಲು ಮೇಲೆ ಹೋಗಿದ್ದಾಳೆ” ಎಂದು ಉತ್ತರಿಸಿದನು.

ತಲೆ ಆಡಿಸಿಕೊಂಡು ಮುಂದುವರಿದ ಅಜ್ಜಿ ತನ್ನ ಊರುಗೋಲು ಊರುತ್ತ,

“ಆ ದೂಕಪ್ಪ ಎಲ್ಲಿ ಬಿಡ್ತಾನೆ ಆಕೆಯನ್ನ.. ಈ ಮುಂಡೆವುಕ್ಕೆ ಎಷ್ಟು ಹೇಳಿದ್ರು ಅಷ್ಟೇನೆ” ಎನ್ನುತ್ತಾ ಮುಂದುವರೆದಳು..

ಕೇಳಿಸಿಕೊಂಡ ಸತೀಶ್ ಕಣ್ಣು ಮಿಟುಕಿಸಿದನು.. ಅಜ್ಜಿ ಹೇಳಿದ ಮಾತು ಮತ್ತೆ ಕಿವಿಯಲ್ಲಿ ಗುನುಗಿದವು.  ಕಣ್ಣು ಅಗಲವಾದವು,ಕಾರಿನ AC ಮರುಭೂಮಿ ಅನ್ನಿಸಿತು. ಕಾರಿನ ಮಿರರ್ ನಲ್ಲಿ   ಅಜ್ಜಿಯನ್ನ ನೋಡುತ್ತಾ, ಮನಸ್ವಿನಿಯ ಮೆಟ್ಟಿಲು ಏರುವಿಕೆ ಗಮನಿಸಲು ಬಲಕ್ಕೆ ತಿರುಗಿದ.

ಆದರೆ ಇಲ್ಲಿವರೆಗೂ ಚಿಕ್ಕದಾಗಿ ಕಾಣುತಿದ್ದ ಲಾಂಟರ್ನ್ ದೀಪವು ಕಾಣಲಿಲ್ಲ. ಮನಸ್ವಿನಿಯ ಸುಳಿವಿರಲಿಲ್ಲ…

ದಿಕ್ಕುತೋಚದೆ, “ಅಜ್ಜಿ, ಅಜ್ಜಿ” ಎಂದು ಕಿರುಚುತ್ತಾ ಕಾರಿನಿಂದ ಕೆಳಗಿಳಿದನು. ಕೆಳಗಿಳಿದು ಅಜ್ಜಿಯ ಬಳಿ ಓಡಲು ಯತ್ನಿಸಿದನು.

ಅಜ್ಜಿಯ ಗಾಡಿಯಿಂದ ತಂದ ಬಾಳೆಹಣ್ಣನ್ನು  ತಿಂದು, ಮನಸ್ವಿನಿ ಎಸೆದಿದ್ದ ಸಿಪ್ಪೆಯಮೇಲೆ ಕಾಲಿಟ್ಟ ಸತೀಶ್, ಜಾರಿ ಕೆಳಗೆ ಬಿದ್ದನು.

ಆತ ಕೆಳಗೆ ಬಿದ್ದ ರಭಸಕ್ಕೆ ಧೂಳು ಎದ್ದಿತು. ಆತನ ಕಣ್ಣು ಮುಚ್ಚಿತು..ಜ್ಞಾನ ತಪ್ಪಿತು..!!!

ಮುಂದುವರೆಯುವುದು…..
ಲೇಖಕ – ಶ್ರೀಕಾಂತ್ ಪಾಳೇಗಾರ್

                         
Please follow and like us:

33 thoughts on “ದೂಕಪ್ಪ – ಸಂಚಿಕೆ 2 ( In Search of him)

 1. ನಿರೂಪಣಾ ಶೈಲಿ ಅದ್ಭುತ… ಕತೆಯ ರೋಚಕತೆ ನಮ್ಮನ್ನು ಕಾಡಿಸುವುದರಲ್ಲಿ ಗೆದ್ದಿದೆ… ಕುತೂಹಲ ಹೆಚ್ಚುತ್ತಿದೆ…

 2. ಕಥೆ ತುಂಬಾ ಅದ್ಭುವಾಗಿದೆ… ನಿಮ್ಮ ಪದಬಳಕೆ ಮತ್ತು ಸನ್ನಿವೇಶ ವರ್ಣನೆ ಚೆನ್ನಾಗಿದೆ… ಕಥೆ ಒಳ್ಳೆ ವೇಗದಲ್ಲಿ ಸಾಗುತ್ತಿದೆ, ಮುಂದಿನ ಸಂಚಿಕೆಗಳಲ್ಲಿ ವೇಗ ತಗ್ಗಿಸದೆ ಹೀಗೆ ಮುಂದುವರೆಸಿ..

  ದೂಕಪ್ಪನನ್ನು ನೋಡಲು ಮನಸ್ವಿನಿಗಿಂತ ಹೆಚ್ಚಿನ ಕುತೂಹಲದಿಂದ ಕಾಯುತ್ತಿರುವ…

  ಪುನೀತ್ ವಸಿಷ್ಠ

 3. Very interesting , Chapter 2 ತುಂಬಾ ಕುತೂಹಲವನ್ನ ಮೂಡಿಸಿದೆ.. ಕಥೆಯ ವಿಶ್ಲೇಷಣೆ ಬಹಳ ಚೆನ್ನಾಗಿದೆ ..

Leave a Reply

Your email address will not be published. Required fields are marked *