ಸಿದ್ದರಾಮಯ್ಯ ವಿರುದ್ಧ ಸಮರಕ್ಕಿಳಿದ ಕಾಂಗ್ರೆಸ್ ನಾಯಕರು – ಮತ್ತೊಮ್ಮೆ ಕಾಂಗ್ರೆಸ್ ಗೆ ಸೋಲು ನಿಶ್ಚಿತ !

ರಾಜಕೀಯ ರಾಜ್ಯ

ಈಗಾಗಲೇ ವಿಧಾನಸಭೆ & ಲೋಕಸಭೆ ಚುನಾವಣೆಯಲ್ಲಿ ಕೆಟ್ಟದಾಗಿ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷವು ಇನ್ನೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಎಲ್ಲ ಸರಿಯಿದ್ದೇ ಗೆಲ್ಲುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ಇರುವಾಗ ಕಾಂಗ್ರೆಸ್ ನ ನಾಯಕರು ತಾನು ಮತ್ತು ಪರ ಎಂಬ ವಾದವನ್ನು ಮುಂದಿಟ್ಟುಕೊಂಡು ಮತ್ತೆ ಕಚ್ಚಾಟಕ್ಕೆ ಇಳಿದಿದ್ದಾರೆ. ಈಗಾಗಲೇ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿ.ಕೆ. ಹರಿಪ್ರಸಾದ್, ಕೋಲಾರದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ಡಾ.ಜಿ.ಪರಮೇಶ್ವರ್ ಬಣವು ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದ್ದು ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿಯು ವ್ಯಾಪಕವಾಗಿ ಹಬ್ಬಿದೆ.

Image result for k h muniyappa and b k hariprasad

ಜನ ನಾಯಕರಾಗಿ ನೋಡಿದರೆ ಸಿದ್ದರಾಮಯ್ಯನವರಿಗಿಂತ ಅಷ್ಟೇನೂ ಜನ ಬೆಂಬಲ ಹೊಂದಿಲ್ಲದ ಪರಮೇಶ್ವರ್ ಮತ್ತು ಬಿ.ಕೆ.ಹರಿಪ್ರಸಾದ್ ಮತ್ತು ಮುನಿಯಪ್ಪನವರು ಇದೀಗ ಮೂಲ ಕಾಂಗ್ರೆಸ್ಸಿಗರು ನಾವೆಂದು ಹೇಳಿಕೊಳ್ಳಲು ಆರಂಭಿಸಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಹಳ್ಳ ಹಿಡಿಸಲು ಎಲ್ಲರೂ ಒಂದಾಗಿ ಶ್ರಮಿಸುತ್ತಿರುವಂತಿದೆ.

ಬಿ.ಕೆ.ಹರಿಪ್ರಸಾದ್ ಹಾಸ್ಯಾಸ್ಪದ ನಡೆ !

ಚುನಾವಣೆಯ ದೃಷ್ಟಿಯಲ್ಲಿ ಕೇವಲ ಹೈಕಮಾಂಡ್ ಓಲೈಕೆಯನ್ನು ಬಿಟ್ಟು ಜನ ನಾಯಕರಾಗಲು ಅಂತಹ ಸಾಮರ್ಥ್ಯ ಹೊಂದಿಲ್ಲದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯನವರ ವಿರುದ್ಧ ನಿಂತಿರುವುದು ಅಚ್ಚರಿಯ ಬೆಳವಣಿಗೆ ಆಗಿದೆ.

Image result for b k hariprasad

ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಹೊಂದಿರುವ ಈತ ಚುನಾವಣೆ ಸಂದರ್ಭದಲ್ಲಿ ಕನಿಷ್ಠ ತನ್ನ ಸ್ಥಾನವನ್ನು ಗೆಲ್ಲುವ ಸಾಮರ್ಥ್ಯ ಇಲ್ಲದ ವ್ಯಕ್ತಿ. ಕಳೆದ ಲೋಕಸಭಾ ಚುನಾವಣೆಯ ವೇಳೆ ಟಿಕೆಟ್ ಪಡೆದು ಹೀನಾಯವಾಗಿ ಸೋಲುಕಂಡ ಇವರು ತದ ನಂತರ ಆ ಕ್ಷೇತ್ರದ ಕಡೆ ಸುಳಿದಿದ್ದಾಗಲೀ, ಪಕ್ಷವನ್ನು ಸಂಘಟಿಸುತ್ತಿರುವ ಪ್ರಯತ್ನ ಮಾಡುತ್ತಿರುವುದಾಗಲೀ ಕಾಣಿಸುತ್ತಿಲ್ಲ. ಹೀಗಿರುವಾಗಿ ಕಾಂಗ್ರೆಸ್ ಉಳಿವಿಗಾಗಿ ಸಿದ್ದರಾಮಯ್ಯನವರನ್ನು ಬದಲಿಸಬೇಕು ಎಂದು ಹೇಳುತ್ತಿರುವುದು ತೀರಾ ಹಾಸ್ಯಾಸ್ಪದ ಸಂಗತಿಯಾಗಿ ಕಾಣುತ್ತಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಗಿಲ್ಲ ಕಾಂಗ್ರೆಸ್ ಕಟ್ಟುವ ಸಾಮರ್ಥ್ಯ !

ಇನ್ನು ಕಾಂಗ್ರೆಸ್ ನ ಪ್ರಭಾವೀ ನಾಯಕರೆಂದು ಹೇಳಿಕೊಳ್ಳುತ್ತಿರುವ ಪರಮೇಶ್ವರ್ ಅವರಿಗೂ ಸಹ ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಕಟ್ಟುವ ಸಾಮರ್ಥ್ಯವಿಲ್ಲ. ದಲಿತ ಸಮುದಾಯದ ನಾಯಕರಾದ ಇವರು ಸುಮಾರು 8 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೂ ಸಹ ವಿಧಾನ ಸಭೆ & ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಗಣನೀಯವಾಗಿ ವಿಫಲರಾಗಿದ್ದರು.

Related image

ಆದರೂ ಸಹ ಇದೀಗ ಪರಮೇಶ್ವರ್ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದರೆ ಪಕ್ಷ ಉಳಿಯುತ್ತದೆ ಎಂಬ ಸಂಗತಿಯನ್ನು ಹಬ್ಬಿಸುತ್ತಿರುವುದು ಯಾವುದರ ಆಧಾರದ ಮೇಲೆ ಎಂಬುದೇ ತಿಳಿಯದ ಸಂಗತಿಯಾಗಿದೆ.

ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಊಹಿಸಲೂ ಕಷ್ಟ.

ಇದೀಗ ಕಾಂಗ್ರೆಸ್ ನ ಪ್ರಭಾವೀ ನಾಯಕ ಡಿ.ಕೆ.ಶಿವಕುಮಾರ್ ಅಂತವರು ಇ.ಡಿ.ವಿಚಾರಣೆಗೆ ಒಳಗಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೇ ಇರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಬದಿಗೆ ಸರಿಸುವ ಯತ್ನ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಪ್ರಯತ್ನವು ನಿಜಕ್ಕೂ ದೊಡ್ಡ ಮೂರ್ಖತನವಾಗಿದೆ. ಅದೂ ಅಲ್ಲದೇ ಸಿದ್ದರಾಮಯ್ಯನಂತಹ ಜನಪ್ರಿಯ ನಾಯಕನನ್ನು ವಿಚಲಿತಗೊಳಿಸುವ ಈ ಪ್ರಯತ್ನವು ಕಾಂಗ್ರೆಸ್ ಪಕ್ಷಕ್ಕೆ ನಷ್ಟವೇ ಹೊರತು ಯಾವ ದೃಷ್ಟಿಯಿಂದಲೂ ಸಹ ಲಾಭದಾಯಕವಾದ ಸಂಗತಿಯಲ್ಲ.

Image result for siddaramaiah

ಇನ್ನು ಒಗ್ಗಟ್ಟಿನಿಂದ ಇರಬೇಕಾದ ಕಾಂಗ್ರೆಸ್ ನಾಯಕರ ವರ್ತನೆಗಳು ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲೂ ಸಹ ಸೋಲು ಕಟ್ಟಿಟ್ಟ ಬುತ್ತಿ ಎಂಬ ಸಂದೇಶವನ್ನು ಸಾರಿದ್ದು ಈ ಬಗ್ಗೆ ಕಾಂಗ್ರೆಸ್ ನ ಹೈಕಮಾಂಡ್ ಮೃದು ಧೋರಣೆ ತೋರದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಸಮಯೋಚಿತ ನಡೆಯಾಗಬಹುದು.

Please follow and like us:

Leave a Reply

Your email address will not be published. Required fields are marked *