ಗಾಂಧಿಯಿಂದ ಗೋಡ್ಸೆಯೇ ಹೊರತು ಗೋಡ್ಸೆಯಿಂದ ಗಾಂಧಿ ಅಲ್ಲ !

ರಾಜ್ಯ ರಾಷ್ಟ್ರೀಯ

ಬಿರ್ಲಾ ಮಂದಿರದಲ್ಲಿ ಗಾಂಧಿಯ ಹತ್ಯೆಯಾಗುತ್ತಿದ್ದಂತೆ ಆ ಸುದ್ದಿ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಅಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ದೇಶದ ಧ್ವಜಗಳನ್ನು ಅರ್ಧಕ್ಕೆ ಹಾರಿಸುತ್ತಾರೆ. ನಂತರ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯು ವ್ಯಕ್ತಿಯ ಹತ್ಯೆಯ ಮೂಲಕ ಮನುಕುಲವೇ ಸತ್ತು ಹೋಯಿತಲ್ಲಾ ಎಂದು ದುಃಖಿಸುತ್ತಾರೆ. ಆದರೂ ಇಂದು ಅಂತಹ ಮಹಾನ್ ಮೇಧಾವಿಯ ಬಗ್ಗೆ ಹಬ್ಬಿಸಲಾಗುತ್ತಿರುವ ಸುಳ್ಳುಗಳಿಗೆ ಮಿತಿಯೇ ಇಲ್ಲವಲ್ಲಾ ಎಂದು ಅನಿಸುತ್ತದೆ.

ತಮ್ಮ ಬದುಕಿನುದ್ದಕ್ಕೂ ಯಾರಿಗೂ ಕೇಡನ್ನು ಬಯಸದೇ ಅಹಿಂಸೆಯ ತತ್ವವನ್ನು ಪಾಲಿಸುತ್ತಿದ್ದ ಮತ್ತು ತನ್ನ ಸರಳ ಹೋರಾಟ ಮಾರ್ಗಗಳ ಮೂಲಕವೇ ದೇಶದ ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದ ಮಹಾತ್ಮಾ ಗಾಂಧೀಯವರನ್ನು ಇಡೀ ಜಗತ್ತೇ ಭಾರತದ ಪಿತಾಮಹನೆಂದು ಗುರುತಿಸುತ್ತದೆ.

Image result for gandhi statue in london

ಗಾಂಧಿಯನ್ನು ಅರೆ ಬೆತ್ತಲೆ ಫಕೀರನೆಂದು ಹಂಗಿಸಿದ ವಿನ್ ಸ್ಟನ್ ಚರ್ಚಿಲ್ ಕೂಡಾ ಗಾಂಧಿಯ ಹತ್ಯೆಯಾದ ದಿನ ತುಂಬಾ ಬೇಸರಗೊಂಡಿದ್ದ. ಆತನು “ ನಮ್ಮ 28 ವರ್ಷದ ಅವಧಿಯಲ್ಲಿ ನಾವು ಒಮ್ಮೆಯೂ ಗಾಂಧೀಜಿಯವರನ್ನು ಬಂಧಿಸಲಿಲ್ಲ. ಆದರೆ ಸ್ವತಂತ್ರ ಭಾರತವು ಬರೀ 27 ತಿಂಗಳುಗಳ ಕಾಲ ಗಾಂಧಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಗಾಂಧಿ ಆಫ್ರಿಕಾ ಮತ್ತು ಭಾರತದಲ್ಲಿ ತಮ್ಮ ಹೋರಾಟವನ್ನು ಯಶಸ್ವಿಗೊಳಿಸಿರುತ್ತಾರೆ. ಇಂದಿಗೂ ಬ್ರಿಟಿಷ್ ಪಾರ್ಲಿಮೆಂಟ್ ಎದುರಿಗೆ ಗಾಂಧಿಯ ಪ್ರತಿಮೆಯಿದ್ದು ಆತನನ್ನು ಹತ್ಯೆಗೈದ ವ್ಯಕ್ತಿಗಳ ಬಗ್ಗೆ ಬ್ರಿಟಿಷರೀಗೂ ಅಸಮಾಧಾನವಿದೆ.

ಇತ್ತ ಗಾಂಧೀಜಿಯೊಬ್ಬ ರಾಷ್ಟ್ರ ಪಿತನಾಗಿ ನಮ್ಮ ದೇಶದ ಕಣ ಕಣುವಿನಲ್ಲೂ ಬೆರೆತು ಹೋಗಿದ್ದರೂ ಸಹ  ಇನ್ನೊಂದೆಡೆ ಮಹಾತ್ಮಾ ಗಾಂಧಿಯವರನ್ನು  ಹತ್ಯೆಗೈದ ಶಕ್ತಿಗಳು ಮಾತ್ರ ಮಾನವಿಲ್ಲದೇ ಆತ್ಮ ಗೌರವ ಕಳೆದುಕೊಂಡಿವೆ. ಹೀಗಿದ್ದರೂ ಗೋಡ್ಸೆಯಂತಹ ದುಷ್ಟ ಶಕ್ತಿಗಳನ್ನು ಇಂದಿಗೂ ದೇಶಭಕ್ತನೆಂದು ಪೂಜಿಸುವ ದೇಶದ್ರೋಹಿ ಶಕ್ತಿಗಳಿಗೇನೂ ನಮ್ಮಲ್ಲಿ ಬರವಿಲ್ಲ.

Image result for gandhi death

 ಗೋಡ್ಸೆಯೆಂಬುವನಿಗೆ ಗಾಂಧಿಯ ಹತ್ಯೆಯೇ ಅವನ ಬದುಕಿನ ಐಡೆಂಟಿಟಿ. ಆದರೆ ತನ್ನನ್ನು ಕೊಂದ ಮೇಲೂ ಅಪರಾಧಿಗೆ ಏನೂ ಆಗ ಬಾರದೆಂಬ ಮನಸ್ಸುಳ್ಳ ಗಾಂಧಿಯ ಐಡೆಂಟಿಟಿ ಸ್ವತಃ ಗಾಂಧಿ ಹಾಗೂ ಅವರ ಸುದೀರ್ಘ ತ್ಯಾಗದ ಬದುಕಾಗಿದೆ. ಇನ್ನು ಗಾಂಧಿಯನ್ನು ಹತ್ಯೆಗೈದ ಕಾರಣಗಳೇನೂ ದೇಶದ ಪರವಾಗಿ ಇರುವಂತಹವಲ್ಲ. ಬದಲಿಗೆ ಅವೆಲ್ಲವೂ ಸಹ ದೇಶದ ಜನರಿಗೆ ಮಾರಕವಾಗಿರುವ ಸಂಗತಿಯಾಗಿದೆ. ಹೀಗಾಗಿ ಗಾಂಧಿಯಿಂದ ಗೋಡ್ಸೆಯ ಅಸ್ತಿತ್ವ ಉಳಿದಿರುವುದೇ ಹೊರತು ಗೋಡ್ಸೆಯಿಂದ ಗಾಂಧಿಯ ಅಸ್ತಿತ್ವ ಎಂದೂ ಮುನ್ನೆಲೆಗೆ ಬಂದಿಲ್ಲ, ಬರುವುದೂ ಇಲ್ಲ.

Please follow and like us:

Leave a Reply

Your email address will not be published. Required fields are marked *