ಮಹಾತ್ಮಾ ಗಾಂಧೀಜಿಯವರು ಭಗತ್ ಸಿಂಗ್ ನೇಣುಗಂಬವನ್ನು ತಪ್ಪಿಸಲಿಲ್ಲವೇ ? ಇಲ್ಲಿದೆ ನೋಡಿ ಉತ್ತರ!

ರಾಜಕೀಯ ರಾಷ್ಟ್ರೀಯ

ಇವತ್ತು ಗಾಂಧಿಯ ವಿರುದ್ದ ಅವರ ಕಾಲದ ಎಲ್ಲರನ್ನೂ ಎತ್ತಿಕಟ್ಟುವುದು ಅಭ್ಯಾಸವಾಗಿ ಹೋಗಿದೆ. ಆ ಕಾಲಕ್ಕೆ ಗಾಂಧಿ ಮಾಡಿದ್ದು ಸರಿಯೋ ತಪ್ಪೋ, ಅದನ್ನು ಸಂಯಮದಿಂದ ಪರೀಕ್ಷಿಸಿ ಪರಾಮರ್ಶಿಸುವ ಸಂಯಮವೂ ಇಂದು ಇಲ್ಲವಾಗಿದೆ. ಗಾಂಧಿ ಯಾಕೆ ಭಗತ್ ಸಿಂಗ್ ನೇಣನ್ನು ತಪ್ಪಿಸಲಿಲ್ಲ ಎಂಬ ಪ್ರಶ್ನೆಯನ್ನು ಯಾರು, ಯಾಕೆ ಉತ್ಪಾದಿಸಿದ ಪ್ರಶ್ನೆ ಎನ್ನುವುದನ್ನು ಹೇಳುವ ಅಗತ್ಯವಿಲ್ಲ. ಆದರೆ, ಸಾರ್ವಜನಿಕ ಸಂಪರ್ಕದಲ್ಲಿರುವಾಗ, ಈ ಪ್ರಶ್ನೆ ಎದುರಾದಾಗ ಏನು ಹೊಳೆಯದೇ ಇರುವುದೇ ಗಾಂಧಿಯನ್ನು ಅಪಮಾನಕ್ಕೆ ಈಡು ಮಾಡುವುದಕ್ಕಿಂತ ಆ ಸಂಗತಿಯ ಬಗ್ಗೆ ಒಂದಷ್ಟು ವಿಷಯವನ್ನು ಅರಿಯುವುದು ಸೂಕ್ತ.

Image result for gandhiji and bhagat singh

 ಮಾರ್ಚ್ 23 ರಂದು ಭಾರತದ ವೈಸ್ ರಾಯ್ ಅವರಿಗೆ ಗಾಂಧೀಜಿಯವರು ಪತ್ರವೊಂದನ್ನು ಬರೆದು ಭಗತ್ ಅಂತಹ ಯುವಕರ ಆತುರವನ್ನು ಕ್ಷಮಿಸಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಕೋರುತ್ತಾರೆ. ಆದರೆ ಸಂಸತ್ ಗೆ ಬಾಂಬ್ ಹಾಕಿ ನಮ್ಮನ್ನೇ ಕೊಲ್ಲುವಂತಹ ಭಯೋತ್ಪಾದಕ ಚಟುವಟಿಕೆಯನ್ನು ಮಾಡಿರುವ ಆತನಿಗೆ ಕ್ಷಮೆಯಿಲ್ಲ, ಬಾಂಬ್ ಹಾಕುವುದನ್ನು ಬಿಟ್ಟು ಬೇರೆ ತೆರೆನಾದ ಅಪರಾಧಗಳನ್ನು ಮಾಡಿದ್ದರೆ ಕ್ಷಮಿಸುತ್ತಿದ್ದೆವು ಎಂದು ಬ್ರಿಟಿಷರು ತಿಳಿಸಿದ್ದರು.

ಇನ್ನು  ಜೈಲಿನಿಂದ ತಪ್ಪಿಸಿಕೊಳ್ಳುವ ಕೆಲ ಅವಕಾಶಗಳಿದ್ದರೂ ತನ್ನ ಸಾವು ಹೋರಾಟದ ಪ್ರಜ್ಞೆಯನ್ನು ವ್ಯಾಪಕವಾಗಿ ಹರಡಲಿ ಎಂಬ ಉದ್ದೇಶದಿಂದ ಭಗತ್ ಸಿಂಗ್ ಸ್ವತಃ ಪ್ರಾಣ ತ್ಯಾಗಕ್ಕೆ ಸಿದ್ಧವಾಗೇ ನಿಂತಿದ್ದರು. ಇನ್ನು ಮಹಾತ್ಮಾ ಗಾಂಧೀಜಿಯವರೂ ಸಹ ಭಗತ್ ಸಿಂಗ್ ಅವರ ಸೈದ್ಧಾಂತಿಕ ನಿಲುವುಗಳ ವಿರೋಧಿಯಾಗಿದ್ದರೂ ಸಹ, ಪ್ರಾಣ ರಕ್ಷಣೆಗಾಗಿ ಬ್ರಿಟಿಷರಲ್ಲಿ ಮನವಿ ಮಾಡಿಕೊಂಡಿಕೊದ್ದರು.

Image result for bhagat singh vice roy

ಗಾಂಧಿಯವರು ಅಂದಿನ ವೈಸ್ ರಾಯ್ ಗೆ ಬರೆದ ಪತ್ರ ಇಲ್ಲಿದ್ದು ಗಾಂಧಿಯನ್ನು ವಿನಾಕಾರಣ ದೂಷಿಸುವ ಮುನ್ನ ಇದನ್ನು ಒಮ್ಮೆ ಓದಿರಿ.

ಮಹಾತ್ಮಾ ಗಾಂಧೀಜಿ

1 ದರಿಯಾ ಗಂಜ್, ನವ  ದೆಹಲಿ,

ಮಾರ್ಚ್ 23, 1931

ಮಾನ್ಯ ವೈಸ್ ರಾಯ್ ರವರು,

ಭಾರತ ಸರಕಾರ

ಪ್ರಿಯ ಸ್ನೇಹಿತರೇ,

ಈ ಪತ್ರವನ್ನು ನಿಮ್ಮ ಮೇಲೆ ಹೇರಲು ಮುಜುಗುರವಾದರೂ, ಶಾಂತಿಗೋಸ್ಕರ ಈ ಕೊನೆಯ ಅಹವಾಲನ್ನು ನಾನು ಮಾಡಿಕೊಳ್ಳುತ್ತಿದ್ದೇನೆ. ನೀವು ಮುಚ್ಚುಮರೆ ಮಾಡದೆ ಭಗತ್ ಸಿಂಗ್ ಹಾಗು ಮತ್ತಿಬ್ಬರ ಶಿಕ್ಷೆಯನ್ನು ನಿವಾರಿಸುವ ಸಾಧ್ಯತೆ ಇಲ್ಲ ಎಂದು ಹೇಳಿದಾಗಲೂ, ನನ್ನ ಕೊನೆಯ ಕೋರಿಕೆಯನ್ನು ಮನ್ನಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಿರಿ. ನಿನ್ನೆ ಡಾ.ಸಪ್ರೂ ಅವರು ನನ್ನನ್ನು ಭೇಟಿ ಮಾಡಿ, ನೀವು ಈ ವಿಷಯ ಕುರಿತು ವಿಪರೀತ ತಲೆಕೆಡಿಸಿಕೊಂಡಿದ್ದೀರಿ ಹಾಗು ಉಚಿತ ಕ್ರಮಕ್ಕಾಗಿ ಯತ್ನಿಸುತ್ತಿದ್ದೀರಿ ಎಂದು ತಿಳಿಸಿರುವರು. ಇಂತು ಏನಾದರೂ (ಶಿಕ್ಷೆ ತಡೆಯ) ಅವಕಾಶವಿದ್ದರೆ, ದಯವಿಟ್ಟು ನನ್ನ ಈ ಮಾತುಗಳನ್ನು ಆಲಿಸಬೇಕೆಂದು ವಿನಂತಿ.

ದಂಡನೆ ಸರಿಯೋ/ ತಪ್ಪೋ , ಸಾಮಾನ್ಯ ಜನರ ಅಭಿಪ್ರಾಯದ ಪ್ರಕಾರ ಮರಣ ದಂಡನೆ ಕೈದು ಮಾಡುವುದು ಸರಿಯಾದದು; ಯಾವ ನೈತಿಕ ಮಾನದಂಡವೂ ಇರದ ಹೊತ್ತಲ್ಲಿ, ಈ ಅಭಿಪ್ರಾಯವನ್ನು ಗೌರವಿಸಬೇಕಾದ್ದೇ ಸರಿ.

ಈ ಪ್ರಕರಣದಲ್ಲಿ, ಶಿಕ್ಷೆ ತಡೆದರೆ, ಆಂತರಿಕ ಶಾಂತಿಯು ನೆಲಗೊಳ್ಳುತ್ತದೆ; ಶಿಕ್ಷೆಯಾದಲ್ಲಿ ಅಶಾಂತಿ ಭುಗಿಲೇಳುತ್ತದೆ.

ಈ ಹಿನ್ನೆಲೆಯಲ್ಲಿ ನಾನು ನಿಮಗೆ ಹೇಳಬಯಸುವುದು ಇಷ್ಟೇ: ಶಿಕ್ಷೆ ಕೈದಾದರೆ ಕ್ರಾಂತಿಕಾರಿಗಳು ತಮ್ಮ ಕೃತ್ಯಗಳನ್ನು ನಿಯಂತ್ರಿಸಿಕೊಳ್ಳುವುದಾಗಿ ನನಗೆ ತಿಳಿಸಿದ್ದಾರೆ; ಶಿಕ್ಷೆ ಕೈದಾದದಲ್ಲಿ ಕ್ರಾಂತಿಕಾರಿಗಳ ಹಿಂಸೆಯನ್ನು ಕೈದು ಮಾಡುವುದಕ್ಕೆ ಅವರು ಬದ್ಧರಾಗುವರು ಎಂಬುದು ನನ್ನ ಅಭಿಮತ.

ಈ ಹಿಂದೆಯು ಕ್ರಾಂತಿಕಾರಿ ಹಿಂಸೆಗಳನ್ನು ಕ್ಷಮಿಸಲಾಗಿದೆ. ಇಂತಾಗಿ, ಈ ಜೀವಗಳು ಉಳಿದಲ್ಲಿ, ಮತ್ತೂ ಅನೇಕ ಜೀವಗಳು ಹಿಂಸೆಗೆ ಬಲಿಯಾಗುವುದು ತಪ್ಪುವುದು ಮತ್ತು ಕ್ರಾಂತಿಕಾರಿ ಹಿಂಸೆಯು ಇಲ್ಲವಾಗಬಹದು.

Related image

ನ್ಯಾಯಾಲಯವು ವಿಧಿಸಿದ ಶಿಕ್ಷೆಯನ್ನು ಹಿಂತೆಗೆದುಕೊಳ್ಳಲಾಗುವುದಿಲ್ಲ. ಆದರೂ, ನ್ಯಾಯ ನಿರ್ಣಯದಲ್ಲಿ ತುಸುವಾದರೂ ದೋಷ ಕಂಡಲ್ಲಿ, ಶಿಕ್ಷೆ ತಡೆ ಹಿಡಿದು ಪರಾಮರ್ಶೆಗೆ ಅವಕಾಶ ನೀಡಿ,ತಡೆ ಹಿಡಿಯಲಾಗದ್ದನ್ನು ತಡೆ ಹಿಡಿಯಿರಿ.

ನನ್ನ ಉಪಸ್ಥಿತಿ ಅಗತ್ಯವಿದ್ದಲ್ಲಿ, ನಾನು ಬರುವೆ. ನಾನು ಮಾತಾಡಲು ಸಾಧ್ಯವಿಲ್ಲದೆ ಇರುವುದರಿಂದ, ನಾನು ಹೇಳಬಹುದಾದ್ದನ್ನು ಬರಹದಲ್ಲಿ ಕೊಡುವೆ.

“ಕ್ಷಮೆ ಎಂದಿಗೂ ಹುಸಿಯಾಗುವುದಿಲ್ಲ”

ಇಂತಿ ನಿಮ್ಮ ಸ್ನೇಹಿತ,

ಮಹಾತ್ಮಾ ಗಾಂಧಿ

ಪ್ರತಿಕೃತಿ: C.W. 9343. Courtesy: India Office.

Image result for gandhiji

ಇದು ಗಾಂಧೀಜಿಯವರು ಭಗತ್ ಸಿಂಗ್ ಅವರನ್ನು ರಕ್ಷಿಸುವ ಸಲುವಾಗಿ ಬರೆದ ಪತ್ರಗಳಲ್ಲಿ ಒಂದು. ಇದು ಗಾಂಧಿಯ ಸೈದ್ಧಾಂತಿಕ ಮತ್ತು ಬದುಕಿನ ಹಿರಿಮೆಯನ್ನೂ ಸಹ ನಮ್ಮೆದುರು ಅನಾವರಣಗೊಳಿಸುತ್ತದೆ.

Please follow and like us:

Leave a Reply

Your email address will not be published. Required fields are marked *