ಇತ್ತ ಮುಗಿದಿಲ್ಲ ಸಾವರ್ಕರ್ ಪ್ರವರ – ಅತ್ತ ಮತ್ತೆ ಶುರುವಾಯ್ತು ನೆರೆ ಪ್ರವಾಹದ ಅಬ್ಬರ, ಜನ ಜೀವನ ತತ್ತರ !

ಬೆಂಗಳೂರು ರಾಜ್ಯ

ಮಹಾರಾಷ್ಟ್ರ ಚುನಾವಣೆ ಹೊತ್ತಿಗೆ ಆರಂಭವಾಗಿದ್ದ ಸಾವರ್ಕರ್  ಗೆ ಭಾರತರತ್ನ ನೀಡಬೇಕೆಂಬ ಚರ್ಚೆಯು ಇನ್ನೂ ನಿಂತಿಲ್ಲ. ಆದರೆ ಅತ್ತ ಮತ್ತೊಮ್ಮೆ ನೆರೆ ಪ್ರವಾಹವು ಜೋರಾಗಿದ್ದು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕದ ಹಲವೆಡೆ ಮತ್ತೊಮ್ಮೆ ಬಂದು ನೆರೆ ಪ್ರವಾಹವು ಬಂದು ಅಪ್ಪಳಿಸಿದ್ದು ಜನ ಜೀವನವು ಅಸ್ತವ್ಯಸ್ತವಾಗುತ್ತಿದೆ.

ಇನ್ನು ರಾಜಕೀಯ ಪಕ್ಷಗಳು ಇತ್ತ ಇನ್ನೂ ಸಹ ಸಾವರ್ಕರ್ ಗೆ ಭಾರತ ರತ್ನ ನೀಡಬೇಕೋ ಬೇಡವೋ ಎಂಬ ಚರ್ಚೆಯಲ್ಲಿ ತೊಡಗಿದ್ದು ಅತ್ತ ಜನಜೀವನವು ಕೊಚ್ಚಿ ಹೋಗುತ್ತಿದೆ. ಇನ್ನು ರಾಜ್ಯ ಸರ್ಕಾರವೂ ಸಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದು ಮಲಪ್ರಭಾ ನದಿ ಪ್ರವಾಹಕ್ಕೆ ರೈತ ರಾಮಪ್ಪ ಮಲ್ಲಪ್ಪ ಎನ್ನುವ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಈಗಾಗಲೇ ಒಮ್ಮೆ ನೆರೆ ಪ್ರವಾಹದ ಅನಾಹುತವನ್ನು ಅನುಭವಿಸಿದ ಬಳಿಕವೂ ಎಚ್ಚೆತ್ತುಕೊಳ್ಳದ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಲು ಪೂರಕವಾದ ವ್ಯವಸ್ಥೆ ರೂಪಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಜನರ ಪರದಾಟವು ಮುಂದುವರೆದಿದ್ದು ಅಲ್ಲಲ್ಲಿ ಸಾವು ನೋವುಗಳಾಗಿ ಜನರ ಆಸ್ತಿಯು ನಷ್ಟವಾಗುತ್ತಿದೆ.

ಈಗಾಗಲೇ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯು ಆರಂಭವಾಗಿದ್ದು ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಬೆಂಗಳೂರು, ದಾವಣಗೆರೆ ಬಾಗಲಕೋಟೆ ಭಾಗದಲ್ಲಿ ಮಳೆಯ ಆರ್ಭಟವು ಆರಂಭಗೊಂಡಿದ್ದು ಸುಸಜ್ಜಿತ ಸೂರಿಲ್ಲದ ಸಾವಿರಾರು ಜನರ ಬದುಕು ಬೀದಿಗೆ ಬೀಳುವ ಎಲ್ಲಾ ಲಕ್ಷಣಗಳು ಇವೆ.

Please follow and like us:

Leave a Reply

Your email address will not be published. Required fields are marked *