ಉತ್ತರ ಕರ್ನಾಟಕದ ಸಮಸ್ಯೆಗೆ ಸ್ಪಂದಿಸದ ಕನ್ನಡ ಚಿತ್ರರಂಗ – ಅಭಿಮಾನಿಗಳು ಗರಂ !

ಬೆಂಗಳೂರು ರಾಜ್ಯ ಸಿನಿಮಾ ಸ್ಯಾಂಡಲ್ ವುಡ್

ಸಿನಿಮಾಗಳ ಶೂಟಿಂಗ್ ಗಾಗಿ ಉತ್ತರ ಕರ್ನಾಟಕಕ್ಕೆ ತೆರಳುವಂತಹ ಕನ್ನಡ ಚಿತ್ರರಂಗದ ಕಲಾವಿದರು ಅಲ್ಲಿನ ಪ್ರವಾಹ ಪರಿಸ್ಥಿತಿಯಲ್ಲಿ ಉಪಸ್ಥಿತರಿರದ ಕಾರಣದಿಂದಾಗಿ ಆ ಭಾಗದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಸಾಮಾನ್ಯವಾಗಿ ವಿವಿಧ ಜನಪರ ಚಳುವಳಿಗಳ ಸಂದರ್ಭದಲ್ಲಿ ಮತ್ತು ಗಂಭೀರವಾದ ನಕಾರಾತ್ಮಕ ಸಾಮಾಜಿಕ ಪಲ್ಲಟಗಳಾದಾಗ ಸಾಮಾನ್ಯವಾಗಿ ಕನ್ನಡ ಚಿತ್ರ ರಂಗವು ಈ ಹಿಂದೆ ಕೆಲವು ಬಾರಿ ಸ್ಪಂದಿಸಿದೆ. ಅದರಲ್ಲೂ ನೆಲ ಜಲ ಹಾಗೂ ಭಾಷೆಯ ವಿಷಯದಲ್ಲಿ ರಾಜ್ಯಕ್ಕೆ ತೊಂದರೆಯಾದಾಗ ಅವುಗಳಿಗೆ ಸ್ಪಂದಿಸುವುದು ನಟ – ನಟಿಯರ ಕರ್ತವ್ಯವಾಗಿದೆ.

Image result for gokak chaluvali

ಈ ಮಾತಿಗೆ ಪೂರಕವಾಗಿ ಡಾ.ರಾಜ್ ಕುಮಾರ್ ನೇತೃತ್ವದ ಗೋಕಾಕ್ ಚಳುವಳಿ, ಹಾಗೂ ತದ ನಂತರದ ಕಾವೇರಿ ನದಿ ಹೋರಾಟ ಹಾಗೂ ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಚಿತ್ರರಂಗವು ಪ್ರತಿರೋಧವನ್ನು ವ್ಯಕ್ತಪಡಿಸಿರುವುದನ್ನು ನಾವು ಕಾಣಬಹುದು.

ಈ ನಿಟ್ಟಿನಲ್ಲಿ ಪ್ರಸ್ತುತ ಉತ್ತರ ಕರ್ನಾಟಕ ಹಾಗೂ ರಾಜ್ಯದ ಇನ್ನಿತರೆ ಸ್ಥಳಗಳು ತೀವ್ರವಾದ ಮಳೆ ಪ್ರವಾಹದಿಂದ ಕಂಗೆಟ್ಟಿದ್ದು ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರ ರಂಗದ ನಟರುಗಳು ಸ್ಪಂದಿಸದೇ ಇರುವುದು ಅಲ್ಲಿನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಅವರು ಹೊರ ಹಾಕುತ್ತಿದ್ದಾರೆ.

Image result for sandalwood kannada film industry

ಟೀಕೆಗಳು ಏನೇ ಇರಲಿ ಇನ್ನಾದರೂ ಚಿತ್ರ ರಂಗದ ಪ್ರಭಾವೀ ನಟ ನಟಿಯರು ಪ್ರವಾಹ ಸಂತ್ರಸ್ತರಿಗೆ ನೆರವಾಗಲಿ ಎಂದು ವಿನಂತಿಸುತ್ತೇವೆ.

Please follow and like us:

Leave a Reply

Your email address will not be published. Required fields are marked *