ನಿಜಕ್ಕೂ ಮೋದಿಯವರಿಗೆ ಪಂಡಿತ್ ನೆಹರೂ ಅವರ ಬಗ್ಗೆ ಏನಾದರೂ ಗೊತ್ತೇ ?

ರಾಜಕೀಯ ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ವೈಫಲ್ಯಗಳಾದರೆ ಅದಕ್ಕೆ ನೆಹರೂ ಕಾಲದವರ ಆಡಳಿತವೇ ಕಾರಣ, ಅದಕ್ಕೆ ಈಗಲೂ ಹೀಗೆಲ್ಲಾ ಆಗುತ್ತಿದೆ ಎಂಬ ಮಾತುಗಳನ್ನು ನಾವು ಆಗಾಗ್ಗೆ ಕೇಳಿದ್ದೇವೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಮಾತಿನ ಸುತ್ತಲೇ ಗಿರ್ಕಿ ಹೊಡೆಯುವ ಹಲವು ಹಾಸ್ಯಗಳು ಮತ್ತು ವಿಡಂಬನೆಯನ್ನು ನಾವು ಗಮನಿಸಬಹುದಾಗಿದೆ. ಅಲ್ಲದೇ ಒಮ್ಮೊಮ್ಮೆ ಮೋದಿ ಯವರೂ ಸಹ ನೆಹರೂ ಅವರ ಹೆಸರನ್ನು ಪ್ರಸ್ತಾಪಿಸುವ ಕಾರಣ ನಿಜಕ್ಕೂ ನಮ್ಮ ಪ್ರಧಾನಿಗಳಾದ ಮೋದಿಯವರಿಗೆ ನೆಹರೂ ಅವರ ಕಾಲದಲ್ಲಾದ ಆಡಳಿತಾತ್ಮಕ ಕೆಲಸಗಳ ಪರಿಚಯ ಇದೆಯೇ ಎಂಬಷ್ಟರ ಮಟ್ಟಿಗೆ ಅನುಮಾನ ಶುರುವಾಗುತ್ತದೆ.

Related image

ಆದರೂ ಕುತೂಹಲಕ್ಕಾಗಿ ಭಾರತದ ಇತಿಹಾಸದ ಪುಟಗಳನ್ನು ತಿರುವಿನೋಡಿದಾಗ ನೆಹರೂ ಯಾರು ಮತ್ತು ಸ್ವತಂತ್ರ ಭಾರತಕ್ಕೆ ಅವರ ಕೊಡುಗೆಗಳು ಏನು ಎಂಬುದರ ಕುರಿತಂತೆ ಒಂದಷ್ಟು ವಿಷಯಗಳನ್ನು ಗ್ರಹಿಸಬಹುದಾಗಿದೆ.

ಭಾರತದ ನಿರ್ಮಾಣಕ್ಕೆ ನೆಹರೂ ಅವರ ಕೊಡುಗೆಗಳು :  

. ನೆಹರೂ ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಭಾರತದ ಇತಿಹಾಸವು ಗುರುತಿಸುತ್ತದೆ. ಭಾರತಕ್ಕೆ ಸ್ವತಂತ್ರ ಬಂದಾಗ ಪಾಶ್ಚಿಮಾತ್ಯ ವಿಮರ್ಶಕರು ಭಾರತವು ಕನಿಷ್ಠ 10 ವರ್ಷಗಳ ಕಾಲ ನಡೆಯುವುದಿಲ್ಲ ಎಂದು ಭಾವಿಸಿದ್ದರು. ಅಲ್ಲದೇ ಭಾರತವು ಮತ್ತೆ ವಿಭಜನೆ ಆಗುತ್ತದೆ ಅಲ್ಲಿ ಸಾಕಷ್ಟು ನಾಗರೀಕ ಯುದ್ಧಗಳು ನಡೆಯುತ್ತವೆ ಎಂದು ಹೇಳಿದ್ದರು. ಆದರೆ ಈ ಅಭಿಪ್ರಾಯಕ್ಕೆ ವಿರುದ್ಧವಾಗಿ ಆಡಳಿತಾತ್ಮಕವಾಗಿ ಮತ್ತು ಜನಾಭಿವೃದ್ಧಿಯ ದೃಷ್ಟಿಯಿಂದ ಬಹುತೇಕ ಶೂನ್ಯ ಮಟ್ಟದಲ್ಲಿದ್ದ ಭಾರತವನ್ನು ತಮ್ಮ 19 ವರ್ಷಗಳ ಆಡಳಿತದಲ್ಲಿ ನೆಹರೂ ಅವರು ಬಹು ಎತ್ತರಕ್ಕೆ ಕೊಂಡೊಯ್ದರು.

Related image

ಹೋಂ ರೂಲ್ ಲೀಗ್ ಚಳುವಳಿಯ ಮೂಲಕ ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಇವರು ಸ್ವತಂತ್ರ ಭಾರತ ಕನಸು ಸಾಕಾರಗೊಳ್ಳಲು ಸುದೀರ್ಘ ಹೋರಾಟ ನಡೆಸಿದರು. ಬಹುಶಃ ಮನೆಯಲ್ಲಿ ಎಲ್ಲ ರೀತಿಯ ಶ್ರೀಮಂತ ಸೌಕರ್ಯಗಳಿದ್ದರೂ ಸಹ ಅವುಗಳನ್ನು ಪಕ್ಕಕ್ಕಿಟ್ಟು ದೇಶದ ಜನರ ಹಿತಕ್ಕಾಗಿ ಹೋರಾಟ ನಡೆಸಿದ ನೆಹರೂ ನೈಜವಾದ ಹೋರಾಟಗಾರ ಎನಿಸಿದ್ದಾರೆ.

ಭಾರತ ಸ್ವತಂತ್ರ ಚಳುವಳಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮತ್ತು ಆ ಮೂಲಕ ಇತರೆ ಶೋಷಿತ ದೇಶಗಳಿಗೂ ಹೋರಾಟಕ್ಕೆ ಮಾದರಿಯಾದ ನೆಹರೂ ಅವರು ಭಾರತವನ್ನು ವಿಶ್ವಮಟ್ಟದಲ್ಲಿ ತಲೆ ಎತ್ತುವಂತೆ ಮಾಡಿದವರಲ್ಲಿ ಒಬ್ಬರು. ಈ ದಿನ ಬಿಜೆಪಿಯವರು ಹೇಳುತ್ತಿರುವ “ವಿಶ್ವಗುರು” ಎಂಬುದನ್ನು ನೆಹರೂ ಆಗಲೇ ಸಾಧಿಸಿದ್ದರು.  

Image result for nehru and ambedkar

ದಲಿತರು ಮತ್ತು ಶೋಷಿತರನ್ನು  ಕೇವಲ ಶೋಷಣೆಯ ಸರಕನ್ನಾಗಿ ಪರಿಗಣಿಸಿದ್ದ ಪುರೋಹಿತ ಶಾಹಿ ವ್ಯವಸ್ಥೆಯೊಳಗೆ ಮೊದಲ ಬಾರಿಗೆ ಅಂಬೇಡ್ಕರ್ ಅಂತಹ ವ್ಯಕ್ತಿಗಳನ್ನು ಕಾನೂನು ಸಚಿವರನ್ನಾಗಿಸಿ ಅವರಿಗೇ ದೇಶದ ರೂಪು ರೇಷೆಗಳನ್ನು ರೂಪಿಸಲು ಅವಕಾಶ ಕೊಟ್ಟ ಮತ್ತು ಆ ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಗೆ ಬುನಾದಿ ಹಾಕಿದ ಕೀರ್ತಿ ನೆಹರೂ ಅವರದ್ದಾಗಿದೆ.

ಭಾರತಕ್ಕೆ ಹೊಸ ಆರ್ಥಿಕ ನೀತಿಗಳನ್ನು ಪರಿಚಯಿಸಿ, ಕೈಗಾರಿಕೆ ಹಾಗೂ ಇನ್ನಿತರೆ ಔದ್ಯಮಿಕ ಸಂಗತಿಗಳ ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಿ ಸಾಮಾನ್ಯ ಜನರೂ ಸಹ ಅದರಲ್ಲಿ ಭಾಗವಹಿಸುವಂತೆ ಮಾಡಿದ್ದು ನೆಹರೂ.

ಕೃಷಿ ಹಾಗೂ ನೀರಾವರಿ ಅನುಕೂಲಕ್ಕಾಗಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲು ನೆಹರೂ ಅವರು ಆದ್ಯತೆ ನೀಡಿದರು. ಇದು ಮುಂದೆ ವ್ಯಾಪಕವಾಗಿ ಬೆಳೆಯಿತು. (ಉದಾಹರಣೆಗೆ ಬಾಕ್ರಾ-ನಂಗಲ್ ಅಣೆಕಟ್ಟು ಯೋಜನೆ)

Image result for bhakra nangal dam nehru

ನೆಹರೂ ಅವಧಿಯಲ್ಲೇ ಭಾರತವು ಉನ್ನತ ಶಿಕ್ಷಣ ಕೇಂದ್ರಗಳಾದ ಏಮ್ಸ್, ಐಐಟಿ, ಐಐಎಂ, ಹಾಗೂ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯಗಳನ್ನು ಸ್ಥಾಪಿಸಿದರು. ಇದರಿಂದಾಗಿಯೇ ಇಂದು ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. (ಇವೆಲ್ಲವೂ ಭಾರತದ ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದ ಮೊಟ್ಟ ಮೊದಲ ಹೆಜ್ಜೆಗಳಾಗಿವೆ)

  ಅಣು ಶಕ್ತಿ ಉತ್ಪಾದನೆಯಲ್ಲಿ ಭಾರತವೂ ಸಹ ಶಕ್ತಿಶಾಲಿ ಎಂದು ಸಾಬೀತುಪಡಿಸಿ ಆ ಮೂಲಕ ಶಾಂತಿ ಒಪ್ಪಂದಗಳನ್ನು ಸಾಧ್ಯವಾಗಿಸಲು ಶ್ರಮಿಸಿದ್ದು ನೆಹರೂ ಅವರ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ. ( ಡಾ.ಹೋಮಿ ಜಹಾಂಗೀರ್ ಬಾಬಾ ಅವರ ನೇತೃತ್ವದಲ್ಲಿ ಜಾರಿಗೊಳಿಸಿದ ಪರಮಾಣು ಶಕ್ತಿ ಕೇಂದ್ರಗಳು.)

ಭಾರತದ ಬಹು ಸಂಸ್ಕೃತಿಯನ್ನು ಒಪ್ಪಿಕೊಂಡು ಕಲೆ, ಸಾಹಿತ್ಯ, ಭಾಷೆ ಹಾಗೂ ಆಚರಣೆಗಳ ಆಧಾರದ ಮೇಲೆ ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸಿಕೊಂಡು ಹೋದ ಕೀರ್ತಿ ನೆಹರೂ ಅವರದ್ದಾಗಿದೆ.

Image result for hindu code bill

ಮಹಿಳೆಯರ ಪಾಲಿಗೆ ವರವಾಗಿ ಬಂದ “ಹಿಂದೂ ಕೋಡ್ ಬಿಲ್ “ ಅನ್ನು ಹಲವು ಹೀನ ಮನಸ್ಥಿತಿಗಳ ವಿರೋಧದ ನಡುವೆಯೂ ಜಾರಿಗೊಳಿಸಲು ಯತ್ನಿಸಿದ್ದು ನೆಹರೂ ಅವರಾಗಿದ್ದಾರೆ. ಇದು ಮುಂದೆ ಮಹಿಳಾ ಹಕ್ಕುಗಳ ರಕ್ಷಣೆಗೆ ಕಾರಣವಾಯಿತು.

. ಮಹತ್ವದ ಪಂಚ ವಾರ್ಷಿಕ ಯೋಜನೆಗಳ ಮೂಲಕ ದೇಶದ ಕೃಷಿಕರಿಗೆ ಮತ್ತವರ ಬೆಳವಣಿಗೆಗೆ  ಹಾಗೂ ಗ್ರಾಮೀಣ ಮೂಲ ಸೌಕರ್ಯಗಳ  ಅಭಿವೃದ್ಧಿಗೆ ಶ್ರಮಿಸಿದ ನೆಹರೂ ಅವರ ಯೋಜನೆಗಳು ನಂತರದಲ್ಲಿ ಕೈಗಾರಿಕಾ ವಲಯದ ಅಭಿವೃದ್ಧಿಗೂ ಬುನಾದಿಯನ್ನು ಹಾಕಿತು.

. ಮೇಲ್ಜಾತಿಯಿಂದ ಶೋಷಣೆಯ ತಾಣವಾಗಿ ಆಗಿಹೋಗಿದ್ದ ಹಳೆಯ ಗ್ರಾಮೀಣ ಪ್ರಭುತ್ವಗಳನ್ನು ಒದ್ದೋಡಿಸಿ ಸಂವಿಧಾನಾತ್ಮಕವಾಗಿ ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸವನ್ನು ನೆಹರು ಅವರು ಮಾಡಿದ್ದರು.

. ಭೂ ರಹಿತರಿಗೆ ಭೂ ಹಕ್ಕು ಕಾಯ್ದೆ ಜಾರಿಗೊಳಿಸಿ ಭೂಮಿ ಹಂಚಿದ ಮತ್ತು ಮತ್ತು ಶ್ರಮಿಕರನ್ನು ಶೋಷಣೆ ಮಾಡುತ್ತಿದ್ದ ಸೊಕ್ಕಿದ ಜಮೀನ್ದಾರರ ಸೊಕ್ಕು ಮುರಿದು “ಭೂಮಿ ಎಲ್ಲರಿಗೂ ಸೇರಿದೆ  ಎಂಬ ಸಂದೇಶವನ್ನು ನೀಡಿದ್ದು ನೆಹರೂ ಅವರೇ ಆಗಿದ್ದಾರೆ.

Image result for nehru and modi

 ಶ್ರೀಮಂತರಾಗಿದ್ದ ನೆಹರೂ ಅವರಿಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಅವರಿಗೆ ಸ್ವಾತಂತ್ರ್ಯ, ಚಳುವಳಿ ಇದರ ಯಾವ ಅಗತ್ಯವೂ ಇರಲಿಲ್ಲ. ಆದರೂ ಸಾಮಾಜಿಕ ಹಿತದ ದೃಷ್ಟಿಯನ್ನು ಇಟ್ಟುಕೊಂಡು ಜನಕ್ಕಾಗಿ ಹೋರಾಟ ನಡೆಸಿದ ಭಾರತದ ಹೆಮ್ಮೆಯ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಕೊಡುಗೆಯನ್ನು ನೆನೆಯಬೇಕಿದೆ. ಕನಿಷ್ಟ ಪಕ್ಷ ನೆನೆಯದಿದ್ದರೂ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಬಾರದು ಎಂಬುದನ್ನು ಎಲ್ಲರೂ ನೆನಪಿಡಬೇಕಿದೆ.

Please follow and like us:

5 thoughts on “ನಿಜಕ್ಕೂ ಮೋದಿಯವರಿಗೆ ಪಂಡಿತ್ ನೆಹರೂ ಅವರ ಬಗ್ಗೆ ಏನಾದರೂ ಗೊತ್ತೇ ?

  1. Sir nijakku nava Bharath ke Neharuvara koduge apara Bari negetive think madode jasti sullanne hechagi vijrmisuvadu jasti 19 varusha pm agabeku Andre summane alla agina bharatiyarenu daddariddilla

  2. Modi s under misconception that indian history begins n ends with him, modi has coined the tag ‘sabke saath sabka vikas’ frm nehrus achievements bt unfortunate tht he cudnt execute it

  3. ಇಂಥದೊಂದು ಮನುವಾದಿ ಬಲಪಂಥೀಯ ಬಿಜೆಪಿಯ ಶ್ಯಾ…..ಗಳನ್ನು ಭಾರತ ಕೋಟ್ಯಾಂತರ ಜನರನ್ನು ನೋಡಿದೇ

  4. ” I am Indian but not Hindu ” ಎಂದು ಹೇಳುತ್ತಿದ್ದ ನೆಹರೂ ‘ಹಿಂದೂ ಕೋಡ್ ಬಿಲ್ಲನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದರಿಂದಲೇ ಇಂದಿಗೂ ಕೂಡ ಮನುವಾದಿಗಳು ಅವರನ್ನು ತಮಗೆ ಮನಬಂದಂತೆ ತೇಜೋವದೆ ಮಾಡುತ್ತಾರೆ. ಇತಿಹಾಸದ ಅರವಿಲ್ಲದ ಬಹಳಷ್ಟು ಹಿಂದುಳಿದವರು , ಮಬ್ಬಕ್ತರು ಮನುವಾದಿಗಳನ್ನು ಅನುಸರಿಸುತ್ತಾರೆ.

Leave a Reply

Your email address will not be published. Required fields are marked *