ಸಿದ್ದರಾಮಯ್ಯನವರನ್ನು ದೇವರಾಜ ಅರಸು ಅವರೊಂದಿಗೆ ಮಾಡುವ ತಪ್ಪಾದ ಹೋಲಿಕೆ & ಸಂದರ್ಭ !

ಬೆಂಗಳೂರು ರಾಜಕೀಯ ರಾಜ್ಯ

ನಾವು ಬಹಳಷ್ಟು ಸಲ ಗಮನಿಸಿದ್ದೇವೆ. ದೇವರಾಜ ಅರಸು ಅವರ ನಂತರದಲ್ಲಿ 5 ವರ್ಷಗಳ ಪೂರ್ಣಾವಧಿ ಆಡಳಿತ ನೀಡಿದಂತಹ ಸಿದ್ದರಾಮಯ್ಯನವರನ್ನು ಕರ್ನಾಟಕದ ಅಹಿಂದ ವರ್ಗಗಳ ಅಭಿವೃದ್ಧಿಯ ಹರಿಕಾರ & ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಹೋಲಿಕೆ ಮಾಡಲಾಗುತ್ತದೆ.

ಆದರೆ ಬಹಳಷ್ಟು ಜನರು ಭಾವನಾತ್ಮಕವಾಗಿ ಮಾತನಾಡುವ ಭರದಲ್ಲಿ ಅರಸು & ಸಿದ್ದರಾಮಯ್ಯನವರನ್ನು ತಪ್ಪಾಗಿ ಸಮೀಕರಿಸುತ್ತಾರೆ. ಇಬ್ಬರ ನಡುವಣ ಕಾಲಾಂತರದ ವ್ಯತ್ಯಾಸಗಳು ಬಹಳಷ್ಟು ಇದ್ದರೂ ಸಹ ಅದ್ಯಾವುದನ್ನೂ ಸಹ ಗಮನಕ್ಕೆ ತೆಗೆದುಕೊಳ್ಳದೇ ಮಾಡುವ ಸಮೀಕರಣವು ಅರ್ಥವಿಲ್ಲದಂತಹ ಸಂಗತಿಯಾಗಿದೆ.

1972 ರಿಂದ 1977 ರ ವರೆಗೆ ಮೊದಲ ಅವಧಿಗೆ & 1977 ರಿಂದ 1980 ರ ವರೆಗೆ ಎರಡನೆಯ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಯಿಂದ ಹಿಡಿದು ಹಿಂದುಳಿದ ವರ್ಗಗಳ ಏಳಿಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅಲ್ಲದೇ ಹಾವನೂರು ವರದಿಯ ಜಾರಿಯ ಮೂಲಕ ಎಷ್ಟೋ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಬಲ ತುಂಬುವಂತಹ ಕೆಲಸವನ್ನು ಮಾಡಿದರು.

ಇನ್ನು ಸಿದ್ದರಾಮಯ್ಯನವರೂ ಸಹ ಎಲ್ಲಾ ವರ್ಗದ ಜನರಿಗಾಗಿ ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ನಗರಾಭಿವೃದ್ಧಿ & ರಾಜ್ಯದ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ದೊಡ್ಡ ಮಟ್ಟದಲ್ಲಿ ಮಾಡಿದರು.

ಮುಖ್ಯ ವ್ಯತ್ಯಾಸ :

ದೇವರಾಜ ಅರಸು & ಸಿದ್ದರಾಮಯ್ಯನವರ ನಡುವಿನ ವ್ಯತ್ಯಾಸದಲ್ಲಿ ಒಂದನ್ನು ಪ್ರಮುಖವಾಗಿ ಗುರುತಿಸಬಹುದು. ಅದೇನೆಂದರೆ ಕೆಳ ವರ್ಗದ ಮತ್ತು ದಲಿತ ಸಮುದಾಯದ ಜನರು ಅಧಿಕಾರ ಸ್ಥರಕ್ಕೆ ಬರಬೇಕೆಂದು ಕನಸು ಕಂಡಿದ್ದ ದೇವರಾಜ ಅರಸು ಅವರು ಅಂತಹ ವರ್ಗದಲ್ಲಿ ರಾಜಕೀಯ ಬೆಂಬಲವಿಲ್ಲದಂತಹ ಮತ್ತು ಆರ್ಥಿಕವಾಗಿ ಸಬಲರಲ್ಲದಂತಹ ವ್ಯಕ್ತಿಗಳನ್ನು ಹುಡುಕಿ ಜನಪ್ರತಿನಿಧಿಗಳನ್ನಾಗಿ ಮಾಡುತ್ತಿದ್ದರು. ಇಂತಹವರೇ ಬಹಳಷ್ಟು ಮಂದಿ ಮುಂದೆ ಕರ್ನಾಟಕದಲ್ಲಿ ಉತ್ತಮ ನಾಯಕರಾಗಿ ಬೆಳೆದು ಜನ ಸೇವೆಯನ್ನು ಮಾಡಿರುವ ಉದಾಹರಣೆ ಇದೆ.

Image result for siddaramaiah anna bhagya

ಆದರೆ ಇದೊಂದು ವಿಷಯದಲ್ಲಿ ಮಾತ್ರ ಸಿದ್ದರಾಮಯ್ಯನವರು ಎಡವುತ್ತಾರೆ. ಅವರಿಗೆ ಕೆಳ ಸಮುದಾಯದ ಪರಿಸ್ಥಿತಿಯಲ್ಲಿನ ತಲ್ಲಣಗಳನ್ನು ಅಲ್ಲಿನ ನಾಯಕರನ್ನು ಹುಡುಕುವ ಮನಸ್ಥಿತಿ ಕಡಿಮೆ. ಅಲ್ಲದೇ ಬರು ಬರುತ್ತಾ ಕುರುಬರ ಮೇಲಿನ ಜಾತಿ ಪ್ರೇಮಕ್ಕೆ ಜೋತು ಬಿದ್ದಿರುವ ಸಿದ್ದರಾಮಯ್ಯನವರು ಅವಕಾಶ ಸಿಕ್ಕರೆ ಕುರುಬರಿಗೇ ಮೊದಲ ಆದ್ಯತೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಹೀಗಾಗಿ ಅಧಿಕಾರ ಹಂಚಿಕೆ ಇಂತಹ ವಿಷಯದಲ್ಲಿ ದೇವರಾಜ ಅರಸು ಅವರಿಗೂ ಸಿದ್ದರಾಮಯ್ಯನವರಿಗೂ ತಾಳೆಯಾಗುವುದಿಲ್ಲ ಮತ್ತು ಅವರು ಈ ವಿಷಯದಲ್ಲಿ ಜಾತಿವಾದಿಯಂತೇಯೇ ಗುರುತಿಸಿಕೊಂಡಿದ್ದು ಅಂತಹ ಒಂದು ಸಾಮಾಜಿಕ ಸವಾಲನ್ನು ಮೀರುವ ಅಗತ್ಯವನ್ನು ಹೆಚ್ಚಾಗಿ ಹೊಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *