ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಭಾರೀ ಪ್ರಮಾಣದಲ್ಲಿ ಅನುದಾನವನ್ನು ಕಡಿತಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ !

ರಾಜಕೀಯ ರಾಜ್ಯ

ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ರಾಜಕೀಯದಾಟವು ಆರಂಭಗೊಂಡಿದ್ದು ಕಾಂಗ್ರೆಸ್ ಶಾಸಕರು ಇರುವಂತಹ ಕ್ಷೇತ್ರದ ಅನುದಾನವನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಮಾಜಿ ಸಿ.ಎಂ ಹಾಗೂ ಹಾಲಿ ಬಾದಾಮಿಯ ಶಾಸಕರಾದ ಸಿದ್ದರಾಮಯ್ಯನವರ ಕ್ಷೇತ್ರಕ್ಕೂ ಸಹ ಅನುದಾನದ ಪ್ರಮಾಣವನ್ನು ಗಂಭೀರವಾಗಿ ಕಡಿತಗೊಳಿಸುವ ಸೂಚನೆ ಸಿಕ್ಕಿದ್ದು ಇದು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಅಚ್ಚರಿಯೆಂಬಂತೆ ಕಾಂಗ್ರೆಸ್ ಅನರ್ಹ ಶಾಸಕರ ಕ್ಷೇತ್ರಗಳಿಗೆ ನೀಡಲಾಗುವ ಅನುದಾನದಲ್ಲಿ ಯಾವುದೇ ಕಡಿತವಾಗದೇ ಇರುವುದೂ ಸಹ ಅಚ್ಚರಿಗೆ ಕಾರಣವಾಗಿದೆ. ಇನ್ನು ಚಾಮರಾಜಪೇಟೆಯ ಶಾಸಕ ಜಮೀರ್ ಅವರ ಕ್ಷೇತ್ರದ ಅನುದಾನವನ್ನೂ ಇಳಿಕೆ ಮಾಡಲಾಗಿದ್ದು ಜಯನಗರ ಕ್ಷೇತ್ರಕ್ಕೆ ನಿಗದಿತ ಅನುದಾನವನ್ನೇ ನೀಡಲಾಗಿದೆ.

ಶುರುವಾಯ್ತು ದ್ವೇಷದ ರಾಜಕಾರಣ !

ಅಭಿವೃದ್ಧಿಯ ವಿಷಯದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಸಮಾನವಾಗಿ ನೋಡಬೇಕಾಗಿರುವುದು ಆಡಳಿತ ಪಕ್ಷಗಳ ಕರ್ತವ್ಯ. ಆದರೆ ಈ ಸಂಗತಿಯನ್ನು ಮರೆತಂತಿರುವ ಬಿಜೆಪಿ ನಾಯಕರು ಕ್ಷೇತ್ರಗಳಿಗೆ ಅನುದಾನವನ್ನು ಕಡಿತಗೊಳಿಸುವ ಮೂಲಕ ಕಾಂಗ್ರೆಸ್ ನಾಯಕರ ಮೇಲೆ ಪರೋಕ್ಷವಾಗಿ ಒತ್ತಡ ತರುವ ತಂತ್ರವನ್ನು ಅನುಸರಿಸುತ್ತಿದ್ದು ಅವರ ವಿರುದ್ಧ ಕ್ಷೇತ್ರದ ಜನರಲ್ಲಿ ಅಸಮಾಧಾನ ಮೂಡುವಂತೆ ಮಾಡುತ್ತಿದ್ದಾರೆ.

Image result for n a haris

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಂತಿ ನಗರದ ಶಾಸಕ ಹ್ಯಾರಿಸ್ ಅವರು “ ಅನುದಾನದ ಆಧಾರದ ಮೇಲೆ ಜನರಿಗೆ ಭರವಸೆಗಳನ್ನು ನೀಡಿರುತ್ತೇವೆ. ಇದೀಗ ಇವರು ದ್ವೇಷದ ರಾಜಕಾರಣದ ಮೂಲಕ ಅನುದಾನ ಕಡಿತ ಮಾಡಲು ಹೊರಟಿರುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಇನ್ನು ಈಗಾಗಲೇ ನಿಗದಿತವಾದ ಅನುದಾನವನ್ನು ಬಿಡುಗಡೆ ಮಾಡದೇ ಈ ರೀತಿಯಾಗಿ ಜನರ ಬದುಕಿನಲ್ಲಿ ಹುಡುಗಾಟ ಆಡುವುದು ತರವಲ್ಲ ಎಂಬುದೂ ಸಹ ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ.

Please follow and like us:

1 thought on “ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಭಾರೀ ಪ್ರಮಾಣದಲ್ಲಿ ಅನುದಾನವನ್ನು ಕಡಿತಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ !

Leave a Reply

Your email address will not be published. Required fields are marked *