ನಾಳೆಯಿಂದ ಕಾಮಿಡಿ ಕಿಲಾಡಿ ಸೀಸನ್ -3 ನಲ್ಲಿ ಬರ್ತಿದ್ದಾರೆ ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ !

ನಾಟಕ ಪ್ರತಿಭೆ - ಪರಿಚಯ ರಾಜ್ಯ ಸಿನಿಮಾ

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿ ಸೀಸನ್ -3 ನಾಳೆಯಿಂದ ಆರಂಭವಾಗಲಿದ್ದು ತನ್ನದೇ ಆದ ಮನರಂಜನೆಯ ಕಾರಣಕ್ಕೆ ಕುತೂಹಲವನ್ನು ಮೂಡಿಸಿದೆ. ಈ ಕಾರ್ಯಕ್ರಮದಲ್ಲಿ ಇನ್ನು ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ ಇವರು ಮಿಂಚು ಹರಿಸಲಿದ್ದು ಕಲಾಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದ್ದಾರೆ.

Image may contain: 6 people, people smiling, people standing

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆಯ ರಾಮಪ್ಪ -ಹನುಮಂತಮ್ಮ ದಂಪತಿಗಳ ಪುತ್ರರಾದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆಯವರು 1996 ರಿಂದ  ರಂಗಭೂಮಿ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಶಿವಮೊಗ್ಗ ತಾಲ್ಲೂಕು ಗಾಜನೂರಿನ ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯವರೆಗೆ ಹಾಗೂ ಕಾಲೇಜು ವಿದ್ಯಾಭ್ಯಾಸವನ್ನು ಹೊನ್ನಾಳಿ ಹಾಗೂ ಶಿವಮೊಗ್ಗದಲ್ಲಿ ಮಾಡಿ‌ದ್ದಾರೆ.

ಇನ್ನು ನಟನಾಗಿ ನಿರ್ದೇಶಕನಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ಇವರಿಗೆ ರಂಗದ ಬಹುತೇಕ ಎಲ್ಲ ಕಲೆಗಳೂ ಗಾಢವಾಗಿ ಸಿದ್ಧಿಸಿವೆ.  ಹೆಬ್ಬೆಟ್ಟು, ಕಲ್ಪವೃಕ್ಷ, ನಾಗನ ಕಥೆ, ಹೆಚ್. ಪರಸಪ್ಪ, ಮೃತ್ಯು, ಶ್ರೀ ಕೃಷ್ಣ ಸಂಧಾನ, ಇದೇನು ನಡೆಯುತ್ತಿದೆ ಇಲ್ಲಿ, ದನ ಕಾಯೋ ಹುಡುಗರ ದೊಡ್ಡಾಟ, ಏಸೂರ ಕೊಟ್ಟರೂ ಈಸೂರ ಕೊಡೆವು, ಶಿವಪ್ಪ ನಾಯಕ, ಪಂಜರ ಶಾಲೆ, ಒಂದು ಬೊಗಸೆ ನೀರು, ಭಂಗಸ್ವನೆ, ಗುಣಮುಖ, ಸಂಕ್ರಾಂತಿ, ಮದಗದ ಕೆಂಚವ್ವ, ಒಗಟಿನ ರಾಣಿ (ರೂಪಕ), ಕರ್ಣಾಂತರಂಗ, ಕಡಿದಾಳು ಶಾಮಣ್ಣ, ಮೈಲಾರ ಮಹಾದೇವ, ರಾಜಾಶ್ರಯ ನಾಟಕದಲ್ಲಿ ಅಷ್ಟೇ ಅಲ್ಲದೇ

ಬಯಲು ಸೀಮೆ ಕಟ್ಟೆ ಪುರಾಣ, ದೇವರ ಹೆಣ, ಕನಸಿನವರು, ಭಳಾರೆ ವಿಚಿತ್ರಂ, ಸಂಸ್ಕಾರ, ಕೆಂಡದ ಮಳೆ, ಏಕಲವ್ಯ, ಕಿತ್ತೂರ ನಿರಂಜಿನಿ, ವೀರ ಉತ್ತರಕುಮಾರ, ಹಾವು-ಏಣಿ, ದಲಿತ ಭಾರತ ಕಥನ, ಸೋರುತಿಹುದು ಸಂಬಂಧ, ಒಂದು ಬೊಗಸೆ ನೀರು, ಮುಟ್ಟಿಸಿಕೊಂಡವನು, ವೀರ ಉತ್ತರಕುಮಾರ, ದಿ ಇನ್ಸ್‌ಪೆಕ್ಟರ್ ಜನರಲ್, ಸುಪಾರಿ‌ಕೊಲೆ ಸೇರಿದಂತೆ ಇನ್ನೂ ಹತ್ತು ಹಲವು ನಾಟಕಗಳಲ್ಲಿ ನಾಟಕಗಳಲ್ಲಿ ಇವರು ಅಭಿನಯಿಸಿದ್ದು ತಮ್ಮ ನಟನೆಗಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇವರು ಇತ್ತೀಚಿಗೆ ನಟಿಸಿದ ಉತ್ತರ ಕುಮಾರ ನಾಟಕವು ರಾಜ್ಯಾದ್ಯಂತ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದ್ದು ಚಂದ್ರಶೇಖರ್ ಒಳಗಿನ ಹಾಸ್ಯ ಪ್ರತಿಭೆಗೆ ಕನ್ನಡಿ ಹಿಡಿದಂತಿದೆ. ಇದಿಷ್ಟೇ ಅಲ್ಲದೆ ಅವರ ದೇರ ಹೆಣ ನಾಟಕದ ಕೊಟ್ರಗೌಡನ ಪಾತ್ರ ಕೃಷ್ಣ ಸಂಧಾನದ ಶಕುನಿ ಹಾಗೂ ಕೃಷ್ಣನ ಪಾತ್ರ ಹಾಗೂ ನನ್ನ ಪ್ರೀತಿಯ ನರಕದ ಕಿಂಕರ ಪಾತ್ರವನ್ನು ಶಿವಮೊಗ್ಗ ಕಲಾಪ್ರೇಮಿಗಳಾರೂ ಮರೆತಿಲ್ಲ. ಇಂತಹ ನಟನಿಗೆ ಉತ್ತಮ ವೇದಿಕೆಯು ಸಿಕ್ಕಿರುವುದು ಸಹಜವಾಗಿ ಸಂತಸದ ಸಂಗತಿಯಾಗಿದ್ದು ಅವರ ಪ್ರತಿಭೆಗೆ ಜೀ ಕನ್ನಡ ವೇದಿಕೆಯಾಗಲಿದೆ.

ಇನ್ನು ಹಾಸ್ಯ ಪಾತ್ರವನ್ನು ಲೀಲಾಜಾಲವಾಗಿ ಮಾಡಬಲ್ಲ ಇವರಿಗೆ ಕನ್ನಡ ಚಿತ್ರರಂಗದ ನರಸಿಂಹರಾಜು, ಧೀರೇಂದ್ರ ಗೋಪಾಲ್, ಜಗ್ಗೇಶ್ , ಸಾಧುಕೋಕಿಲ, ದೊಡ್ಡಣ್ಣ, ರಂಗಾಯಣ ರಘು ರಂತಹ ನಟರನ್ನು ಕಂಡರೆ ಅಚ್ಚು ಮೆಚ್ಚು. ಮೂಲತಃ ರಂಗಭೂಮಿಯ ಸೇವಕರಾದ ಇವರು ಇದೀಗ ಜನಪ್ರಿಯ ಮಾಧ್ಯಮದ ಲೋಕಕ್ಕೆ ಕಾಲಿಡುತ್ತಿದ್ದು ಅವರಿಗೆ ಒಳ್ಳೆಯದಾಗಲಿ

Please follow and like us:

1 thought on “ನಾಳೆಯಿಂದ ಕಾಮಿಡಿ ಕಿಲಾಡಿ ಸೀಸನ್ -3 ನಲ್ಲಿ ಬರ್ತಿದ್ದಾರೆ ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ !

  1. ಒಳ್ಳೆದಾಗಲಿ ಚಂದ್ರಶೇಖರ್. ಹೆಮ್ಮೆ ಇದೆ ನಿಮ್ಮ ಬಗ್ಗೆ.

Leave a Reply

Your email address will not be published. Required fields are marked *