ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮಾಧ್ಯಮದವರೇ ಕಾರಣವೆಂದ ಬಿ.ಟಿವಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಕುಮಾರ್ !

ಈಗಿನ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರಲು ಅನರ್ಹ ಶಾಸಕರಾಗಲೀ, ಸಮ್ಮಿಶ್ರ ಸರ್ಕಾರವಾಗಲೀ ಕಾರಣ ಅಲ್ಲವಂತೆ. ಇದಕ್ಕೆ ಮಾಧ್ಯಮದವರೇ ಕಾರಣ ಎಂಬ ಎಂಬ ಸಂಗತಿಯನ್ನು ಬಿ.ಟಿವಿಯ ವ್ಯವಸ್ಥಾಪಕ ನಿರ್ದೇಶಕ   ಜಿ.ಎಂ.ಕುಮಾರ್ ಅವರು ಬಹಿರಂಗವಾಗಿಯೇ ಹೇಳಿದ್ದು ಮಾಧ್ಯಮ ವಲಯವು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಈ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು ಸುದ್ದಿ ವಾಹಿನಿಗಳ ಕೆಲಸ ಸರ್ಕಾರಗಳನ್ನು ರಚಿಸುವುದೋ ಅಥವಾ ಸರ್ಕಾರವನ್ನು ಸರಿಯಾದ ದಿಕ್ಕಿನಲ್ಲಿ ವಿಮರ್ಶಿಸುವುದೋ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ನಡೆದಿದ್ದೇನು ? ವಿಧಾನಸಭಾ ಸದನಗಳಿಗೆ ಮಾಧ್ಯಮದವರಿಗೆ […]

Continue Reading

ಸರ್ವಧರ್ಮ ಸಮನ್ವಯದ ಸಂಗೀತಕ್ಕೆ ಇನ್ನೊಂದು ಹೆಸರೇ ಈ ಹರ್ಲಾಪುರ ಕುಟುಂಬ !

ಧರ್ಮ ಕಲಹ ಮತ್ತು ಜಾತಿ ಶೋಷಣೆಯ ಕರಾಳ ಘಟನೆಗಳು ಮತ್ತೆ ಮತ್ತೆ ಮುನ್ನಲೆಗೆ ಬರುತ್ತಿರುವ  ಈ ವೇಳೆ ಇಂದಿಗೂ ಎಲ್ಲಾ ಧರ್ಮದ ಆಚರಣೆಗಳನ್ನು ಗೌರವಿಸುತ್ತಾ ಸುತ್ತಲ ಸಮಾಜದ ಜೊತೆಗೆ ಬಾಂಧವ್ಯದ ಬದುಕನ್ನು ಸಾಧಿಸಿರುವ ಶಿವಮೊಗ್ಗದ ಹೆಮ್ಮೆಯ ಹಿಂದೂಸ್ತಾನಿ ಕಲಾವಿದರಾದ ಉಸ್ತಾದ್ ಶ್ರೀ.ಹುಮಾಯೂನ್ ಹರ್ಲಾಪುರ್ ಅವರ ಕುಟುಂಬದ ಬದುಕಿನ ರೀತಿಯ ಕುರಿತಂತೆ ಪುಟ್ಟ ಬರಹ ಇದು. ಶಿವಮೊಗ್ಗದಲ್ಲಿ ಈಗಾಗಲೇ ದಶಕಗಳಿಂದ ನೆಲೆಸಿರುವ ಹರ್ಲಾಪುರ್ ಅವರ ಕುಟಂಬದ ಮೂಲವು ಹುಬ್ಬಳ್ಳಿ ಸೀಮೆಯ ಹರ್ಲಾಪುರ. ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿಯವರ ಶಿಷ್ಯರಾದ […]

Continue Reading

ಮುಂಬೈನ 2646 ಮರ ಕಡಿಯುವ ಸುದ್ದಿಯ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಸದ್ಗುರು !

ಮುಂಬೈನ ಆರೇ ಕಾಡಿನಲ್ಲಿ ಮೆಟ್ರೋ ಹಾದಿಯ ನಿರ್ಮಾಣಕ್ಕಾಗಿ 2646 ಮರಗಳನ್ನು ಕಡಿಯುವ ಬಾಂಬೆ ಮೆಟ್ರೋ ಕಾರ್ಪೋರೇಷನ್ ಅವರ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದು ಪರಿಸರವಾದಿಗಳ ಹೋರಾಟಕ್ಕೆ ಜಯ ಲಭಿಸಿದ್ದು ಬಾಂಬೆ ಹೈಕೋರ್ಟ್ ಈಗಿಂದೀಗಲೇ ಪರಿಸರ ಹೋರಾಟಗಾರರನ್ನು ಬಿಡುಗಡೆಗೊಳಿಸಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕೆಂದು ಆದೇಶಿಸಿದೆ. ಮರ ಕಡಿಯುವ ಸುದ್ದಿ ಪ್ರಕಟವಾದ ದಿನದಿಂದಲೇ ಅಲ್ಲಿನ ಪರಿಸರವಾದಿಗಳು ಮುಂಬೈನ ಶಾಸ್ವಕೋಶದಂತಿರುವ ಆರೇ ಭಾಗದ  ಮರಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತು ಮರಗಳನ್ನು ರಕ್ಷಿಸುವ ಕೆಲಸವನ್ನು ಮಾಡಿದ್ದಾರೆ. ಇಲ್ಲಿ ಇಷ್ಟೊಂದು ದೊಡ್ಡ […]

Continue Reading

ದಿ.ಅನಂತ್ ಕುಮಾರ್ ಸೂತಕದ ಕಾರಣ – ಮಕ್ಕಳ ಗ್ರಂಥಾಲಯ ಕಟ್ಟಡವನ್ನೇ ಸಂಸದರ ಕಚೇರಿಯನ್ನಾಗಿ ಬದಲಿಸಲು ಮುಂದಾದ ತೇಜಸ್ವಿ ಸೂರ್ಯ !

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ತೇಜಸ್ವಿ ಸೂರ್ಯ ಅವರು ಇದೀಗ ತಮ್ಮ ಸಂಸದರ ಕಚೇರಿಯನ್ನು ಪ್ರತ್ಯೇಕವಾಗಿ ನಿರ್ಮಿಸಿಕೊಳ್ಳಲು ನಿರ್ಧರಿಸಿದ್ದು ಇದಕ್ಕಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಕೆಯಾಗುತ್ತಿದ್ದ ಕಟ್ಟಡವನ್ನು ಬಳಸಿಕೊಳ್ಳಲು ಹೊರಟಿದ್ದು ಸಾರ್ವಜನಿಕರಿಂದ ಈ ನಡೆಗೆ ಪ್ರತಿರೋಧ ವ್ಯಕ್ತವಾಗಿದೆ. ಈಗಾಗಲೇ ಸೌತ್ ಎಂಡ್ ಸರ್ಕಲ್ ಬಳಿಯಲ್ಲಿರುವ ಅನಂತ್ ಕುಮಾರ್ ಅವರ ಕಚೇರಿಯು ಸಾಕಷ್ಟು ಪ್ರಶಸ್ತವಾಗಿದ್ದು ಬಸ್ ಸ್ಟ್ಯಾಂಡ್ ಮತ್ತು ಮೆಂಟ್ರೋ ಸಂಪರ್ಕ ಇದ್ದರೂ ಸಹ ಕಚೇರಿಯನ್ನು ಅಲ್ಲಿಯೇ ತಮ್ಮ ಕಚೇರಿಯನ್ನು ಮಾಡಿಕೊಳ್ಳದ ಇವರು ಈ ಹಿಂದೆ ಜಯನಗರದ ಶಾಸಕ […]

Continue Reading

ಹಲವು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಜಯಿಸಿದ ಕನ್ನಡದ “ನಾತಿಚರಾಮಿ” ಚಿತ್ರ !

ನಿರ್ದೇಶಕ ಮನ್ಸೋರೆ ನಿರ್ದೇಶನದ  ಸಂಚಾರಿ ವಿಜಯ್ ಹಾಗೂ ಶೃತಿ ಹರಿಹರನ್ , ಶರಣ್ಯ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಾತಿ ಚರಾಮಿ ಚಿತ್ರ ತಂಡಕ್ಕೆ ಬರೋಬ್ಬರಿ 5 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದ್ದು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ. ಈ ಚಿತ್ರಕ್ಕೆ ಎನ್.ಸಂಧ್ಯಾರಾಣಿ ಅವರ ಕಥೆ ಇದ್ದು ಬಿಂದು ಮಾಲಿನಿ ಅವರು ಸಂಗೀತ ನೀಡಿದ್ದಾರೆ. ಗುರು ಪ್ರಸಾದ್ ನರ್ನಾಡ್ ಅವರು ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ಜಗನ್ ಮೋಹನ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಅವರು ಹಣ […]

Continue Reading

ಉತ್ತರ ಕರ್ನಾಟಕದ ಸಮಸ್ಯೆಗೆ ಸ್ಪಂದಿಸದ ಕನ್ನಡ ಚಿತ್ರರಂಗ – ಅಭಿಮಾನಿಗಳು ಗರಂ !

ಸಿನಿಮಾಗಳ ಶೂಟಿಂಗ್ ಗಾಗಿ ಉತ್ತರ ಕರ್ನಾಟಕಕ್ಕೆ ತೆರಳುವಂತಹ ಕನ್ನಡ ಚಿತ್ರರಂಗದ ಕಲಾವಿದರು ಅಲ್ಲಿನ ಪ್ರವಾಹ ಪರಿಸ್ಥಿತಿಯಲ್ಲಿ ಉಪಸ್ಥಿತರಿರದ ಕಾರಣದಿಂದಾಗಿ ಆ ಭಾಗದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಾಮಾನ್ಯವಾಗಿ ವಿವಿಧ ಜನಪರ ಚಳುವಳಿಗಳ ಸಂದರ್ಭದಲ್ಲಿ ಮತ್ತು ಗಂಭೀರವಾದ ನಕಾರಾತ್ಮಕ ಸಾಮಾಜಿಕ ಪಲ್ಲಟಗಳಾದಾಗ ಸಾಮಾನ್ಯವಾಗಿ ಕನ್ನಡ ಚಿತ್ರ ರಂಗವು ಈ ಹಿಂದೆ ಕೆಲವು ಬಾರಿ ಸ್ಪಂದಿಸಿದೆ. ಅದರಲ್ಲೂ ನೆಲ ಜಲ ಹಾಗೂ ಭಾಷೆಯ ವಿಷಯದಲ್ಲಿ ರಾಜ್ಯಕ್ಕೆ ತೊಂದರೆಯಾದಾಗ ಅವುಗಳಿಗೆ ಸ್ಪಂದಿಸುವುದು ನಟ – ನಟಿಯರ ಕರ್ತವ್ಯವಾಗಿದೆ. ಈ ಮಾತಿಗೆ ಪೂರಕವಾಗಿ ಡಾ.ರಾಜ್ […]

Continue Reading

ಸಿದ್ಧಾರ್ಥ್ ಅಂತ್ಯ ಸಂಸ್ಕಾರ ಜವಾಬ್ದಾರಿ ನಿರ್ವಹಿಸದ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಸ್ಪೋಟಗೊಂಡ ಸ್ಥಳೀಯ ಜನಾಕ್ರೋಶ !

ಚಿಕ್ಕಮಗಳೂರಿನ ಕಾಫಿಯ ಘಮಲನ್ನು ಅಂತರಾಷ್ಟ್ರೀಯ ಮಟ್ಟದವರೆಗೆ ಪಸರಿಸಿದ ಕನ್ನಡದ ಹೆಸರಾಂತ ಉದ್ಯಮಿ ಸಿದ್ದಾರ್ಥ್ ಅವರ ಅನಿರೀಕ್ಷಿತ ಸಾವು ನಾಡಿಗೇ ಅಘಾತವನ್ನು ತಂದಿದೆ. ಬರೀ ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗದ ಜನರು ಅವರ ಸಾವಿಗೆ ಕಂಬನಿ ಮಿಡಿದಿದ್ದು ಕಾಫಿ ಡೇ ಹಾಗೂ ಮೈಂಡ್ ಟ್ರೀನ ಸಾವಿರಾರು ಉದ್ಯೋಗಿಗಳು ಅಕ್ಷರಶಃ ಕಣ್ಣೀರು ಹಾಕಿದ್ದಾರೆ. ಕರ್ನಾಟಕದ ಮಟ್ಟಿದ ಉದ್ಯಮ ವಲಯದಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ಮತ್ತು ಬಹಳಷ್ಟು ಮಂದಿ ಯುವಕರಿಗೆ ಮಾದರಿಯಾಗಿ ಸಾವಿರಾರು ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದ್ದ ಇವರನ್ನು ಇಡೀ […]

Continue Reading

ಕುಪ್ಪಳ್ಳಿ ಸ್ಮಾರಕ ನಿರ್ಮಾತೃ, ಕಾಫಿ ಡೇ ಮಾಲೀಕ ಸಿದ್ದಾರ್ಥ್ ಬಗ್ಗೆ ಉಳಿದವರು ಕಂಡಂತೆ!

ಬಹಳಷ್ಟು ದಾರುಣ ರೀತಿಯಲ್ಲಿ ಅಂತ್ಯಕಂಡ ಕಾಫಿ ಡೇ ಉದ್ಯಮದ ಮಾಲೀಕ ಸಿದ್ದಾರ್ಥ ಅವರ ಕುರಿತಂತೆ ಮಲೆ ನಾಡಿನ ಬಹಳಷ್ಟು ಮಂದಿ ಜನರು ಸದಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು ಅವರ ಸಾವಿಗೆ ಕಂಬನಿ ಮಿಡಿದಿದ್ದು ಅವರ ಬಗ್ಗೆ ನೆಂಪೆ ದೇವರಾಜ್ ಅವರು ನೀಡಿರುವ ಚಿತ್ರಣ ಇಲ್ಲಿದೆ.  ಅಂದು ಅರ್ಥ ಸಚಿವರಾಗಿದ್ದ ಮನಮೋಹನ ಸಿಂಗ್ ರವರ ಉದಾರ ಆರ್ಥಿಕ ನೀತಿ ಫಲ ಕೊಡುವ ಕಾಲದಲ್ಲಿ ಸಿದ್ದಾರ್ಥರವರ ಹೆಸರು ಮಲೆನಾಡಿನಾದ್ಯಂತ ಹೆಸರು ಪಡೆದುಕೊಳ್ಳುತ್ತಿತ್ತು.ಇವರ ಶೇರು ಮಾರು ಕಟ್ಟೆಗೆ ಸಂಬಂಧಿಸಿದ ಶಿವನ್ ಅಂಡ್ ಶಿವನ್ ಕಂಪೆನಿ,ಕಾಫಿ […]

Continue Reading

ಪ್ರೇಕ್ಷಕರ ಮೇಲೆ ಮಾರಯ್ಯನ ಕತ್ತಿಯನ್ನು ಬೀಸಿದ “ಕನ್ನಗತ್ತಿ” !?

12ನೇ ಶತಮಾನದ ಶರಣ ಚಳುವಳಿಯ ನೇತಾರ ಮತ್ತು ಕ್ರಾಂತಿಕಾರಿ ಚಳುವಳಿಯ ಹಿಂದಿನ ಶಕ್ತಿ ಬಸವಣ್ಣನವರ ಕಲ್ಯಾಣದ ಕಥೆ ಕನ್ನಗತ್ತಿ ಮಾರಯ್ಯನ  ವೃತ್ತಾಂತವನ್ನು ವಿಸ್ತಾರವಾಗಿ ವಿಶ್ಲೇಷಿಸುತ್ತಾ  ಮಾರಯ್ಯನ ಚೋರ ಧರ್ಮದ ಮೂಲಕ ಕಲ್ಯಾಣದ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಮತ್ತು ಚೋರ ಧರ್ಮವೂ ಸಹ ಜೀವಪರವಾಗಿರಬಹುದು ಎಂಬ ಆಶಯವನ್ನು ತೋರಿಸುವ ಮತ್ತು ಎಂದಿನಂತೆ ಪ್ರಭುತ್ವವು ಯಾರ ಪರವಾಗಿರುತ್ತದೆ, ಒಂದು ವೇಳೆ ಪ್ರಭುತ್ವದ ಆಲೋಚನೆಗಳು ಸರಿಯಿದ್ದರೂ ಅವಕಾಶವಾದಿಗಳು ತಮ್ಮ ವಿಕ್ಷಿಪ್ತ ಹಾಗೂ ಸ್ವಾರ್ಥಮಯ ನಡವಳಿಕೆಗಳ ಮೂಲಕ ಹೇಗೆ ಪ್ರಭುತ್ವವನ್ನೂ ಸಹ ಹೇಗೆ […]

Continue Reading

ಬಿಟಿಎಂ ಲೇಔಟ್ ನ ಬುದ್ಧ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರೇ ಕೂಲಿಯಾಳುಗಳು – ಕಾರ್ಯದರ್ಶಿ ಪತ್ನಿಯೇ ಇಲ್ಲಿ ಶಿಕ್ಷಕರ ಪಾಲಿನ ವಿಲನ್ !

ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ನೌಕರರ ಪರಿಸ್ಥಿತಿಯು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡಿಸಿಕೊಳ್ಳುವ ಪ್ರವೃತ್ತಿ ಒಂದೆಡೆಯಾದರೆ ಶಾಲೆಯ ಕಟ್ಟಡ ನಿರ್ಮಾಣ ಹಾಗೂ ರಿಪೇರಿ ಕೆಲಸಗಳಿಗೆ ಶಿಕ್ಷಕರನ್ನೇ ನೇಮಿಸಿಕೊಳ್ಳುತ್ತಿರುವ ಪ್ರಕ್ರಿಯೆ ಬೆಂಗಳೂರಿನ ಬಿ.ಟಿ.ಎಂ ಲೇಔಟ್ ನ ಬುದ್ಧ ಶಿಕ್ಷಣ ಸಂಸ್ಥೆಯು ಸಾಕ್ಷಿಯಾಗಿದೆ.  ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕೆಂಬ ಗುರಿಯನ್ನು ಇಟ್ಟುಕೊಂಡು ಶಾಲೆಗೆ ಬರುತ್ತಿರುವ ಶಿಕ್ಷಕ ಸಿಬ್ಬಂದಿಗಳನ್ನು ಶೋಷಣೆ ಸರಕನ್ನಾಗಿಸಿ ಶಿಕ್ಷಕರ ಘನತೆಯನ್ನು ಯೋಚಿಸದೇ ಅವರೊಡನೆ ತೀರಾ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ. ಬಹಳಷ್ಟು ದಿನಗಳಿಂದ ಈ […]

Continue Reading