ರವಿ ಅವರ “ಪರಿಸರ” ಎಂಬ ಕವಿತೆ !

ಮಳೆಬಂದರೆ ಹರಿಯುತ್ತದೆ ಊರೊಳಗೆ ನೀರು ಬರದೇ ಇದ್ದರೆ ದಾಹಕ್ಕಾಗಿ ಎಲ್ಲೆಡೆ ಕೂಗು ಉರಿಯುತಿದೆ ಧಗಧಗ ಕಾಡು ಬೇಯುತ್ತಿವೆ ಮರಗಿಡ ಪ್ರಾಣಿಪಕ್ಷಿಗಳು ಭೂಮಿಯು ಬಸಿದಿದೆ ನೆತ್ತರು ಕುಸಿದು ಬೀಳುತ್ತಿದೆ ನಿತ್ರಾಣಗೊಂಡು ಪ್ರಕೃತಿಯ ಅಂಗಾಂಗಗಳಿಗೆ ಹಬ್ಬುತ್ತಿವೆ ಹಣ ಅಧಿಕಾರ ಅಂತಸ್ತುಗಳ ಸೋಂಕುರೋಗಗಳು; ನಿಂತ ನೆಲ; ಬಾನಸೂರುಗಳು ಸುಡುತ್ತಿರುವುದನ್ನು ಮರೆಸುತಿವೆ ದೇವರು ಧರ್ಮ ಜಾತಿ ರಕ್ತಗಳು ! ✍🏼 ರವಿ ಸಿದ್ಲಿಪುರ Share on: WhatsAppPlease follow and like us:

Continue Reading

ಸಿಮೊನ್ ದಿ ಬೋವಾ ಅವರ “ಸೆಕೆಂಡ್ ಸೆಕ್ಸ್” ಹೇಳುವ ಗಂಡು ಭಾಷೆ ಮತ್ತು ಮಹಿಳೆ !

“ಸಿಮೊನ್ ದಿ ಬೋವಾ ‘ಅವರ “ಸೆಕೆಂಡ್ ಸೆಕ್ಸ್ “ಎಂಬ ಕೃತಿಯಲ್ಲಿ ,ಭಾಷೆಯು ಪುರುಷ ನಿರ್ಮಿತವಾಗಿದೆ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸುತ್ತಾರೆ. ಭಾಷೆಯ ಸ್ವರೂಪವನ್ನು ಗಮನಿಸಿದಲ್ಲಿ ಅವರ ಅಭಿಪ್ರಾಯ, ಸತ್ಯಕ್ಕೆ ಹತ್ತಿರವಾದುದು ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಭಾಷೆಯಲ್ಲಿ ಹೆಣ್ಣನ್ನು ಮಾತ್ರ ಅತ್ಯಂತ ಕೀಳಾಗಿ ಕಾಣುವ, ತಿರಸ್ಕಾರ ಧ್ವನಿ  ಕಾಣುತ್ತೇವೆ.  ವಿಧವೆಯರಾದ ಹೆಣ್ಣುಮಕ್ಕಳಿಗೆ ಸಮಾನಾರ್ಥಕವಾಗಿ ಬಳಸಲಾಗುವ ರಂಡೆ ,ಮುಂಡೆಯಂತಹ ಪದಗಳು ತಿರಸ್ಕೃತ ನಿಂದನೆಯನ್ನು ಹಾಗೂ ಹೆಣ್ಣನ್ನು ಅತ್ಯಂತ ಕೀಳಾಗಿ ಕಾಣುವ ಪುರುಷ ಪ್ರಧಾನ ಸಮಾಜದ ದೃಷ್ಟಿಕೋನವನ್ನು ಧ್ವನಿಸುತ್ತದೆ. ಹೆಂಡತಿಯನ್ನು ಕಳೆದುಕೊಂಡ […]

Continue Reading

ಒಂದು ಹುಲಿಯ ಕಥೆ

ಕಾಳಿಂಗನೆಂಬ ಗೊಲ್ಲನ ದೊಡ್ಡಿಯಲ್ಲಿ ಇದ್ದ ಹತ್ತಾರು ರಾಸುಗಳಲ್ಲಿ ನಾನು ಒಬ್ಬಳು.ನನ್ನ ಹೆಸರನ್ನು ಪುಣ್ಯಕೋಟಿ ಎಂದು ಕರೆಯಲಾಗುತಿತ್ತು.ಉದರರ ನಿಮಿತ್ತಂ ಎಂಬಂತೆ ಎಂದಿನಂತೆ ಕಾಡಿನಲ್ಲಿ ಹುಲ್ಲಿಗಾಗಿ ಓಡಾಟ. ಮಳೆ ಹೊಯ್ದು ಹುಲುಸಾಗಿ ಬೆಳೆದ ಹಸಿರು ಹುಲ್ಲಿನ ಸಂಭ್ರಮದಲ್ಲಿ ಮೈಮರೆತು ಕೊಟ್ಟಿಗೆಯಲ್ಲಿರುವ ತನ್ನ ಕಂದನನ್ನು ಕಾಣುವ ತವಕವನ್ನು ಮೆಟ್ಟಿ,ಮೈಗೆ ಕಸುವನ್ನು ತುಂಬುವುದರಲ್ಲಿ ,ಪಡುವಣದ ಸೂರ್ಯನು ಆಗಸದಲ್ಲಿ ಕಣ್ಮರೆಯಾಗಿದ್ದನ್ನು ನಾನು ಗಮನಿಸಲಿಲ್ಲ. ಅತ್ತಕಡೆ ಸಹಚರಿಗಳು ನಿರ್ಗಮಿಸಿದರೂ ನನಗೆ ಅರಿವಾಗಲಿಲ್ಲ. ಒಂದೇ ಸಮನೆ ಇಳೆಗೆ ಬಿದ್ದ ಅಮೃತಪನಿಯನ್ನು ಹೀರಿ ಬೆಳೆದ ಗರಿಕೆಹುಲ್ಲನ್ನು ಗಳಹುತ್ತಿದ್ದೆ . […]

Continue Reading

ನಾಗಮಂಡಲದ ಗಿರೀಶ್ ಕಾರ್ನಾಡ್ ಅಸ್ತಂಗತ – ಮುಂದುವರೆದ ವಿದ್ಯಾವಂತರ ಸಂಭ್ರಮಿಸುವ ವಿಕೃತಿ !

ತಮ್ಮ ನಾಟಕ. ಗದ್ಯ ಪದ್ಯಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು  ನೀಡಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹಿರಿಯ ವಿಚಾರವಾದಿ ಡಾ.ಗಿರೀಶ್ ಕಾರ್ನಾಡ್ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ […]

Continue Reading

ಬೈಬಲ್ ಬರೆಯ ಹೊರಟ John Wyclif ಗೆ ಬಂದ ಗತಿ :

ಬೈಬಲ್ ಅನ್ನು ಮೊದಲಬಾರಿಗೆ ಇಂಗ್ಲಿಷ್ ಗೆ ಅನುವಾದ ಮಾಡಿದ ಜಾನ್ ವಿಕ್ಲಿಫ್ ನು ಪಾದ್ರಿಯಾಗುವ ಉದ್ದೇಶವನ್ನಿಟ್ಟುಕೊಂಡು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಹಳಷ್ಟು ಶ್ರದ್ಧೆಯಿಂದ ತತ್ವಶಾಸ್ತ್ರವನ್ನು ಕಲಿಯುತ್ತಾನೆ. ಪದವಿಯ ಜೊತೆ 1360 ರಲ್ಲಿ ಸ್ನಾತಕೋತ್ತರ ಪದವಿಯನ್ನೂ ಮುಗಿಸಿದ ಈತ ಮುಂದೆ ಆಧ್ಯಾತ್ಮ ಶಾಸ್ತ್ರದಲ್ಲಿ 1369 ರಲ್ಲಿ ಪದವಿ ಹಾಗೂ 1372 ರಲ್ಲಿ ಡಾಕ್ಟರೇಟ್ ಅನ್ನು ಪಡೆದುಕೊಳ್ಳುತ್ತಾನೆ. ಹೀಗೆ ಸುದೀರ್ಘ ಅಧ್ಯಯನದಿಂದ ಪಾದ್ರಿಯಾಗಲು ಹೊರಡುವ ಆತನಿಗೆ ಪವಿತ್ರ ಸ್ಥಳವೆಂದು ಕರೆಯಲಾಗಿದ್ದ ಚರ್ಚಿನ ಒಳಗೇ ಅನ್ಯಾಯ, ಅನೀತಿ, ಭ್ರಷ್ಟಾಚಾರ, ತಲೆಹಿಡುಕತನ ಕಂಡ ವಿಕ್ಲಿಫ್ […]

Continue Reading

ಯುದ್ಧ ವಿರೋಧಿ ಐನ್ ಸ್ಟೀನ್ ರ ಸಮಕಾಲೀನತೆ

ಜಗತ್ತು ಕಂಡ ಅಪ್ರತಿಮ ವಿಜ್ಞಾನ ಪ್ರತಿಭೆಗಳಲ್ಲಿ ಐನ್‍ಸ್ಟೈನ್ ಅಗ್ರಗಣ್ಯರು. ಸಾಪೇಕ್ಷತಾ ಸಿದ್ದಾಂತದ ಪ್ರವರ್ತಕ ,ಭೌತ ಶಾಸ್ತ್ರದ ಅಧ್ಯಯನ ಕ್ಷೇತ್ರಕ್ಕೆ ವೈಶಾಲ್ಯತೆಯನ್ನು ಹಾಗೂ ಮೂಲಭೂತ ಸೂತ್ರಗಳನ್ನು ರೂಪಿಸಿದ ಕೀರ್ತಿಗೆ ಐನ್ ಸ್ಟೀನ್ ಭಾಜನರಾಗಿದ್ದಾರೆ. ಐನ್ ಸ್ಟೀನ್ ಒಬ್ಬ ವಿಜ್ಞಾನಿಯಾಗಿ ತನ್ನ ಸಂಶೋಧನೆಗಳಿಂದ ಜಗತ್ತೇ ತನ್ನಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡಿದ್ದ ಕಾಲದಲ್ಲಿಯೇ , ತಣ್ಣಗೆ ಜನಾಂಗೀಯ ದ್ವೇಷ ಹಾಗೂ ಸಂಘರ್ಷದ ಜ್ವಾಲೆ ಪಸರಿಸುತಿತ್ತು. ಆಗತಾನೆ ಹಿಟ್ಲರ್ ಜರ್ಮನಿಯ ಆಡಳಿತ ರಂಗಸ್ಥಳಕ್ಕೆ ಪಾದಾರ್ಪಣೆ ಮಾಡಿ ಜನಾಂಗೀಯ ಶ್ರೇಷ್ಠತೆಯ ಅಮಲನ್ನು ಬಿಕರಿ ಮಾಡುತ್ತಾ […]

Continue Reading

“ಮತದಾರ” – ಓಟು ಹಾಕುವ ಮುನ್ನ ಒಮ್ಮೆ ಎಲ್ಲರೂ ಓದಲೇಬೇಕಾದ ಶಿವಕುಮಾರ್ ಮಾವಲಿಯವರ ಕಥೆ !

ಮೂರು ವರ್ಷಗಳ ಹಿಂದೆ ಹಳ್ಳಿ ಬಿಟ್ಟು ಪ್ಯಾಟೆಗೆ ಹೋಗಿ ಗಾರೆ ಕೆಲಸಗಾರರ ತಂಡವೊಂದನ್ನು ಕಟ್ಟಿಕೊಂಡಿದ್ದ ಪುಂಡಲೀಕ ಮತ್ತೆ ಹಳ್ಳಿಗೆ ವಾಪಸ್ಸಾಗಿದ್ದರ ಹಿಂದಿನ ಕಾರಣ ಚುನಾವಣೆ ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತಿತ್ತು.ಅವನು ಬರಲಿಚ್ಛಿಸಿದ್ದನೋ ಇಲ್ಲವೋ ಆದರೆ ಚುನಾವಣೆಯಂಥ ಕಷ್ಟದ ದಿನಗಳಲ್ಲಿ ಸ್ಥಳೀಯ ಹಾಲಿ ಮಂತ್ರಿಯೊಬ್ಬನ ಆಣತಿಯಂತೆಯೇ ಅವನನ್ನು ಊರಿಗೆ ಕರೆತರಲಾಗಿತ್ತು . ಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗಿನ ಯಾವುದೇ ಚುನಾವಣೆಯ ಪ್ರಚಾರ ತಂತ್ರಗಳಲ್ಲಿ ಪುಂಡಲೀಕ ಪರಿಣಿತಿ ಹೊಂದಿದ್ದರಿಂದಲೇ ಅವನನ್ನು ಕರೆಸಿಕೊಳ್ಳಲಾಗಿತ್ತು‌. ಪ್ರಸ್ತುತ ಸರ್ಕಾರದಲ್ಲಿ ಸಂಸ್ಕೃತಿ ಮಂತ್ರಿಯಾಗಿದ್ದ ‘ಬೋರೇಗೌಡ’ನಿಗೆ ಮುಂಬರುವ ಚುನಾವಣೆಯಲ್ಲಿ […]

Continue Reading

ಬಾಟಲ್ ಸೀನ – Chapter 4-“ಪೂರ್ಣ ವಿರಾಮ”

ಸೂಚನೆ: ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು,ಸನ್ನಿವೇಶಗಳು ಕೇವಲ ಕಾಲ್ಪನಿಕ ಹಾಗೂ ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿರುವುದಿಲ್ಲ.                 ***** “ಭರತ್…. ಇಂದು ಅಕ್ಕ- ಭಾವನ ಸಮಾಧಿಯ ಬಳಿ ಹೋಗಬೇಕು. ಇಂದಿಗೆ ಅವರು ನಮ್ಮನ್ನು ಅಗಲಿ 3ವರ್ಷಗಳು. ಭಾರ್ಗವಿ ಅಳುತ್ತಾ ಭರತ್ ಹೆಗಲ ಮೇಲೆ ಕೈ ಇಟ್ಟು ಹೇಳಿದಳು. ಭರತ್: ಸರಿ ಚಿಕ್ಕೂ.. ನೀವು ಅಳಬೇಡಿ. ಅವರ ಕೊರತೆ ನನಗೆ ನನಗೆ ಯಾವತ್ತೂ ಅನಿಸಿಲ್ಲ. ನನಗೆ ನೀವೇ ಎಲ್ಲ. ಭರತ್ ಹಾಗೆಯೇ ಚಿಕ್ಕಮ್ಮನನ್ನು ಅಪ್ಪಿಕೊಂಡನು. ಭಾರ್ಗವಿ: ನಾನು ಹೊರಡುವೆ.  ಮನೆಯ […]

Continue Reading

Title:ಬಾಟಲ್ ಸೀನ Chapter 3- “ಹಣ.. ಸೀನ.. ಕದನ.. “

ಸೂಚನೆ: ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು,ಸನ್ನಿವೇಶಗಳು ಕೇವಲ ಕಾಲ್ಪನಿಕ ಹಾಗೂ ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿರುವುದಿಲ್ಲ.                      *** ಪಾರ್ಕ್ ನಲ್ಲಿ ಕುಳಿತಿದ್ದ ಭರತ್, ಬೆನ್ನಿನ ಮೇಲೆ ಯಾರೋ ಕೈ ಇಟ್ಟ ತಕ್ಷಣ ಫೈಲ್ ಮುಚ್ಚಿದ್ದ. ಹಿಂದಿರುಗಿ ನೋಡಿದಾಗ ಅವನಿಗೆ ಕಂಡದ್ದು ಒಬ್ಬ ವಯಸ್ಸಾದ ಮನುಷ್ಯ. ಬೆಳ್ಳನೆ ಗಡ್ಡ, ದಪ್ಪನೆ ಮೀಸೆ, ಕಪ್ಪು ಬನಿಯನ್ ಧರಿಸಿದ ಆತ, ನೋಡಲು ಭಯಂಕರವಾಗಿದ್ದ. ಭರತ್: “ಏನಾಗಬೇಕಿತ್ತು?” ವೃದ್ಧ: ಭಿಕ್ಷೆ ನೀಡಿ ಸ್ವಾಮಿ… ಹೊಟ್ಟೆಗೆ ತಿನ್ನದೇ ಎರಡು ದಿನಗಳಾಗಿವೆ. ಭರತ್ ನಿಟ್ಟುಸಿರು […]

Continue Reading

“ಬಾಟಲ್ ಸೀನ” Chapter 2-“ಆ ದಿನಾಂಕ”

ಸೂಚನೆ: ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು,ಸನ್ನಿವೇಶಗಳು ಕೇವಲ ಕಾಲ್ಪನಿಕ ಹಾಗೂ ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿರುವುದಿಲ್ಲ.                      ** “ಚಿಕ್ಕೂ.. ನಾನು ಅವಿನಾಶ್ ಮನೆಗೆ ಹೋಗಿ ಬರುತ್ತೇನೆ. I should collect some notes”. ಭರತ್ ಮನೆಯ ಬಾಗಿಲಿನ ಬಳಿ ನಿಂತು ಕಿರುಚಿದ. ಭಾರ್ಗವಿ: ಬೇಗ ವಾಪಾಸ್ ಬಾ.. ಅಕ್ಕ ಭಾವ ಫೋಟೋಗೆ ನಮಸ್ಕಾರ ಮಾಡಿ ಹೋಗು. ಅಡುಗೆ ಮನೆಯಿಂದಲೇ ಭಾರ್ಗವಿ ಕಿರುಚಿದಳು. ಭರತ್ ಮತ್ತೆ ಮನೆಯ ಒಳಗೆ ಬಂದು ಫೋಟೋಗೆ ನಮಸ್ಕರಿಸಿ ಹೊರಟ. ಆದರೆ, ತನ್ನ […]

Continue Reading