ಕಾನೂನನ್ನು ಪ್ರಶ್ನಿಸುವವರು ವಿರೋಧಿಸುವವರು ದೇಶದ್ರೋಹಿಗಳೆ ?

ಸಂವಿಧಾನದ ಯಾವ ಕಾನೂನು ಕೂಡ ಪ್ರಶ್ನಾತೀತವಾದುದಲ್ಲ ಮತ್ತು ಚರ್ಚಾತೀತವಾದುದಲ್ಲ. ಚರ್ಚೆಯಾಗಬಾರದು ಎಂಬುದಕ್ಕೆ ಕಾನೂನಿನಲ್ಲಿ ಯಾವ ನಿಬಂಧನೆಯು ಇಲ್ಲ. ಕಾನೂನುಗಳನ್ನು ಕಾಲಕಾಲಕ್ಕೆ ಬದಲಾಯಿಸಿಕೊಳ್ಳಬಹುದು ಮತ್ತು ಅಪ್ರಸ್ತುತ ಎನಿಸಿದ್ದನ್ನು ತೆಗೆದುಹಾಕಬಹುದು. ಹೊಸದನ್ನು ಸೇರಿಸಬಹುದು.    ಕಾನೂನು ತಿದ್ದುಪಡಿಯ ಅವಕಾಶ ಸಂವಿಧಾನದಲ್ಲಿ ಇರುವುದು ಅದೇ ಕಾರಣಕ್ಕೆ. ಭಾರತೀಯ ಸಂವಿಧಾನ  ನಮ್ಯ ಸಂವಿಧಾನ. ಇಲ್ಲಿ ಯಾವುದೇ ಒಂದು ಕಾನೂನು ಜಾರಿಯಾದ ಮಾತ್ರಕ್ಕೆ ಅದೆ ಅಂತೀಮ ಎಂಬಂತೆ ಇಲ್ಲ. ಸುಪ್ರೀಂ ಕೋರ್ಟ್ ಕಾನೂನನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳುವುದು ಕೂಡ ಇದೆ ಕಾರಣದಿಂದಲೆ. ಅಂದ […]

Continue Reading

ಕೆ.ಎ.ಎಸ್. ನಲ್ಲಿ ಐಚ್ಛಿಕ ಕನ್ನಡ ವಿಷಯವನ್ನು ರದ್ದು ಮಾಡಲು ಹೊರಟಿರುವ ಕರ್ನಾಟಕ ಲೋಕಸೇವಾ ಆಯೋಗ!

ಕರ್ನಾಟಕ ಲೋಕಸೇವಾ ಆಯೋಗ (KPSC)ವು ಇನ್ನು ಮುಂದೆ KAS ಮುಖ್ಯ ಪರೀಕ್ಷೆಯಲ್ಲಿ 500 ಅಂಕಗಳಿಗೆ ನಡೆಯುವ “ಐಚ್ಛಿಕ ವಿಷಯ”ವನ್ನು ಕೈಬಿಡಲು ನಿರ್ಧರಿಸಿದೆ. ಇದರಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕಲಿಕೆಗೆ ಅಪಾರ ನಷ್ಟ ಉಂಟಾಗುತ್ತದೆ. ಸಾಮಾನ್ಯವಾಗಿ KAS ಪರೀಕ್ಷೆಗೆ ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಆನಂತರ ಆರಂಭದಿಂದಲೇ ಅವರು ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ (ಮೇನ್ಸ್) ಪರೀಕ್ಷೆಗಳಿಗೆ ಒಟ್ಟೊಟ್ಟಿಗೆ ಓದಲು ಪ್ರಾರಂಭಿಸುತ್ತಾರೆ. ಮುಂದಿನ ಮುಖ್ಯ ಪರೀಕ್ಷೆಗೆ “ಕನ್ನಡ ಸಾಹಿತ್ಯ”ವನ್ನು ಐಚ್ಛಿಕ ವಿಷಯವನ್ನಾಗಿ ಸಾವಿರಾರು ಜನರು ಆಯ್ಕೆ […]

Continue Reading

ಯಸ್ ಬ್ಯಾಂಕ್ ನಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹೂಡಿಕೆ ಎಷ್ಟು ಸರಿ ?

ಮುಳುಗಿ ಹೋಗುತ್ತಿರುವ ಯೆಸ್ ಬ್ಯಾಂಕ್ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಜನರ ಹಣ ಸುರಕ್ಷಿತ ಎಂದು ಗ್ರಾಹಕರಿಗೆ ಭರವಸೆ ನೀಡುತ್ತಿದೆ. ಯಸ್ ಬ್ಯಾಂಕ್ ಅಧೋಗತಿಗೆ ಹೋಗಲು ಕಾರಣ ಏನೆಂದು ನೋಡಿದರೆ,ಅನುತ್ಪಾದಕ ಆಸ್ತಿ. ಎಂದರೆ ವಾಪಸ್ಸಾಗದ ಸಾಲ. ೨೦೧೪ ರಲ್ಲಿ ೫೫,೦೦೦ ಕೋಟಿ ಇದ್ದ ಸಾಲ ೨೦೧೯  ೨,೪೧.೦೦೦ ಕೋಟಿಗೆ ಏರಿದೆ 2005 ರಲ್ಲಿ ಆರಂಭವಾದ  ಯಸ್ ಬ್ಯಾಂಕ್, ದೇಶದ 5 ನೆ ದೊಡ್ಡ ಬ್ಯಾಂಕ್. ಈಗ ಆಗಿರುವ ಯಸ್ ಬ್ಯಾಂಕ್ ಹಗರಣ ಒಂದು ರಾಜ್ಯದ ಬಜೆಟ್ ನ […]

Continue Reading

ಮಾಯಾ-ಕೊಡ್ನಾನಿ

ಗುಜರಾತ್ ವಿಶೇಷ ನ್ಯಾಯಾಲಯದಿಂದ ನರೋದಾ ಪಾಟಿಯಾ ಹತ್ಯಾಕಾಂಡದ ‘ಕಿಂಗ್ ಪಿನ್’ ಎಂದು ಕರೆಸಿಕೊಂಡ ಮಾಯಾ ಕೊಡ್ನಾನಿ ಎಂಬ ಮಹಿಳೆ, ನರೇಂದ್ರ ಮೋದಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಳು. 28 ವರ್ಷ ಸೆರೆವಾಸಕ್ಕೆ ಒಳಗಾಗಿ ನಂತರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೇಲ್ಮನವಿ ಸಲ್ಲಿಸುವ ಮೂಲಕ ಹೈಕೋರ್ಟ್ ನಿಂದ ಕೇಸ್ ಖುಲಾಸೆಗೊಳಿಸಿಕೊಂಡು ಹೊರಗಿರುವ ಮಾಯಾ ಕೊಡ್ನಾನಿ, ಆರ್ ಎಸ್ ಎಸ್ ಮುಖಂಡನ ಮಗಳು. ಈಕೆ ನಿರಪರಾಧಿ ಎಂದು ಆಕೆಯ ಪರ ಮುಖ್ಯ ಸಾಕ್ಷಿಯಾಗಿ […]

Continue Reading

ಶಾಹಿನಾ ಬಾಗ್ ಮಹಿಳೆಯರ ಹೋರಾಟಕ್ಕೆ ಸಲಾಂ

ಎನ್ ಆರ್ ಸಿ ಮತ್ತು ಸಿಎಎ ವಿರೋಧವನ್ನು ಹತ್ತಿಕ್ಕುವ, ವಿರೋಧಿಗಳನ್ನು ಮುಗಿಸುವ ಸಂಚು ನಡೆಯುತ್ತಿದೆ. ಇದರ ಪರಿಣಾಮವಾಗಿ ಬೇಕಂತಲೆ ಗಲಭೆಯನ್ನು ಎಬ್ಬಿಸಿ ಎನ್ ಆರ್ ಸಿ ಮತ್ತು ಸಿ ಎ ಎ ಯನ್ನು ವಿರೋಧ ಮಾಡುತವವರನ್ನು ಹಿಂಸಾಚಾರದಲ್ಲಿ ಕೊಲ್ಲುವ ಹೀನ ಕೆಲಸ ಆಗುತ್ತಿದೆ. ವಿರೋಧಿಸುವವರ ಮೇಲೆ ವೈಯಕ್ತಿಕ, ದೈಹಿಕ ಧಾಳಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ಮಾಡಲಾಯಿತು. ಈಗಲೂ ಕೂಡ ಮಾಡಲಾಗುತ್ತಿದೆ. ಇತ್ತೀಚಿಗೆ ದೆಹಲಿಯ ಶಾಹಿನ್ ಬಾಗ್ ನಲ್ಲಿ ಹಲವಾರು  ಮುಸ್ಲಿಂ ಮಹಿಳೆಯರು […]

Continue Reading

ಸಿಎಎ ಮತ್ತು ಎನ್ ಆರ್ ಸಿ ಕಾಯ್ದೆಯ ಕುರಿತಂತೆ ಮೂಡಿರುವ ಕೆಲ ಪ್ರಾಥಮಿಕ ಪ್ರಶ್ನೆಗಳು

ನೆರೆಹೊರೆಯ ದೇಶದಲ್ಲಿ ಧಾರ್ಮಿಕವಾಗಿ ತೊಂದರೆ ಅನುಭವಿಸುತ್ತಿರುವಂತಹ ಜನರಿಗೆ ಭಾರತದಲ್ಲಿ ಪೌರತ್ವವನ್ನು ಕಲ್ಪಿಸುವ ಮೂಲಕ ಅವರಿಗೊಂದು ಉತ್ತಮ ಬದುಕನ್ನು ನೀಡುವ ಸಂಕಲ್ಪದೊಂದಿಗೆ ಸಿಎಎ ಕಾಯ್ದೆಯನ್ನು ರೂಪಿಸಿ ಇದೀಗ ಅದಕ್ಕೆ ಪೂರಕವಾದ ಎನ್ ಆರ್ ಸಿ ಕಾಯ್ದೆಯನ್ನು ಜಾರಿಗೂ ಸಹ ಪ್ರಯತ್ನಿಸುತ್ತಿದೆ. ಆದರೆ ಅದಕ್ಕಿಂತ ಮುಂಚೆ ಭಾರತದಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಮತ್ತು ಇನ್ನೂ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದೇ ಪರದಾಡುತ್ತಿರುವ, ಸಣ್ಣದೊಂದು ಮನೆಯೇ ಇಲ್ಲದ ಮತ್ತು ಇಂದಿಗೂ ಸಹ ಪ್ರಮಾಣ ಪತ್ರವೊಂದನ್ನು ಪಡೆಯಲು ನೂರೆಂಟು ತಾಪತ್ರಯಗಳನ್ನು ಪಡುತ್ತಿರುವ ಜನರನ್ನು […]

Continue Reading

ಭಾರತ ಕಂಡ ಏಕೈಕ ಜಾತ್ಯಾತೀಯ ಪ್ರಧಾನಿ ಪಂಡಿತ್ ನೆಹರೂ ಅವರು ಭಾರತೀಯರಿಗೆ ಹೇಳಿದ್ದೇನು ಗೊತ್ತೇ ?

ಸ್ವತಂತ್ರ ಭಾರತದ ಇತಿಹಾಸದಲ್ಲಿ ನೆಹರೂ ಅವರನ್ನು ಬಿಟ್ಟರೆ ಇನ್ಯಾವ ಪ್ರಧಾನಿಯೂ ಸಹ ತನ್ನ ದೇಶ ಜಾತ್ಯಾತೀತ ರಾಷ್ಟ್ರವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಬೇಕೆಂದು ನಿರ್ದಿಷ್ಟವಾಗಿ ಬಯಸಿಲ್ಲ. ಸದಾ ದೇಶದ ಆರೋಗ್ಯಕರ ವಾತಾವರಣದ ಕುರಿತು ಚಿಂತಿಸುತ್ತಿದ್ದ ನೆಹರೂ ಅವರು ದೇಶದ ಇತಿಹಾಸದ ಸಂಘರ್ಷಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅಂತಹ ನೆಹರೂ ಅವರ ಧ್ಯೇಯಗಳು ಅವರದ್ದೇ ಆದ ಈ ಕೆಳಗಿನ ಮಾತುಗಳಲ್ಲಿ ವ್ಯಕ್ತವಾಗಿದೆ. ದ್ವೇಷ ಮಾಡಲು ನಾವು ಪರಸ್ಪರ ಸ್ಪರ್ಧೆ ನಡೆಸಿದರೆ ನಮ್ಮ ಮನುಷ್ಯತ್ವದ ತಳಹದಿ ಕುಸಿಯುತ್ತದೆ ಮತ್ತು ದೇಶವೂ ಕುಸಿಯುತ್ತದೆ. ಒಂದು […]

Continue Reading

ದೆಹಲಿ ಗಲಭೆಗಳನ್ನು ನಿಯಂತ್ರಿಸದ ಅಮಿತ್ ಷಾ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ !

ದೆಹಲಿಯಲ್ಲಿ ಮತ್ತೊಮ್ಮೆ ಹಿಂಸಾಚಾರವು ಭುಗಿಲೆದ್ದಿದ್ದು ಮತ್ತೊಮ್ಮೆ ಹಿಂಸೆಯನ್ನು ತಡೆಗಟ್ಟಲು ವಿಫಲರಾಗಿರುವ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಪಟ್ಟು ಕಾಂಗ್ರೆಸ್ ಪಟ್ಟು ಹಿಡಿದಿದ್ದು ದೆಹಲಿಯ ಮುಖ್ಯಮಂತ್ರಿ ಕೇಜ್ರೀವಾಲ್ ಗೂ ಸಹ ಛಾಟಿ ಬೀಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು – ಕುಸಿಯುತ್ತಿರುವ ದೆಹಲಿಯ ಸನ್ನಿವೇಶವನ್ನು ಕಂಡು ಕಾಂಗ್ರೆಸ್ ಪಕ್ಷವು ಚಿಂತಿತಗೊಂಡಿದೆ. ಹೀಗಾಗಿಯೇ ನಾವು ದೆಹಲಿಯ ಸನ್ನಿವೇಶದ ಕುರಿತಂತೆ ಮಾತನಾಡಲು ಈ ತುರ್ತು ಸಭೆಯನ್ನು ಕರೆದಿದ್ದೇವೆ.ದೆಹಲಿ ಇಂದಿನ ಪರಿಸ್ಥಿಗೆ ಬಿಜೆಪಿ ನಾಯಕರ ಪ್ರಚೋದನಾಕಾರಿಯಾದ ಹೇಳಿಕೆಗಳೇ ಕಾರಣ. ಅವರಲ್ಲೊಬ್ಬ […]

Continue Reading

ಅತ್ತ ಪಾಕಿಸ್ತಾನವನ್ನು ಹೊಗಳಿದ ಟ್ರಂಪ್ – ಇತ್ತ ಟ್ರಂಪ್ ಅನ್ನು ಹೊಗಳಿದ ಮೋದಿ – ಈಗ ಎಲ್ಲಿ ಹೋಯಿತು ಬಿಜೆಪಿಗರ ದೇಶಭಕ್ತಿ ?

ಅಮೇರಿಕಾ ಚುನಾವಣೆಗೆ ಇನ್ನೂ ಕೆಲವೇ ಸಮಯ ಇರುವಂತೆ ಪ್ರಚಾರದ ಉದ್ದೇಶದಿಂದ ಭಾರತಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮವಾಗಿ ಸಾಥ್ ನೀಡುತ್ತಿದ್ದಾರೆ. ತಮ್ಮ ಪ್ರಚಾರದ ಭಾಗವಾಗಿ ಗಾಂಧಿ ಸ್ಥಳ, ದೆಹಲಿ ಮತ್ತು ತಾಜ್ ಮಹಲ್ ಕಡೆ ತಿರುಗುತ್ತಿರುವ ಇವರು ವಿಶ್ವದ ಮಾಧ್ಯಮ ವಲಯದಲ್ಲಿ ಭರಪೂರವಾದ ಪ್ರಚಾರವನ್ನು ಪಡೆಯುತ್ತಿದ್ದಾರೆ. ಇನ್ನು ನಿನ್ನೆ ಮೊಟೇರಾ ಕ್ರೀಡಾಂಗಣದಲ್ಲಿ ಮಾತನಾಡಿದ ಟ್ರಂಪ್ ಹಾಗೂ ಮೋದಿ ಪರಸ್ಪರ ಹರ್ಷ ಪಡುತ್ತಾ ಇದ್ದರು. ಆದರೆ ತೀರಾ ತಮಾಷೆಯೆಂದರೆ ಎಲ್ಲಿಯೂ ಭಾರತ […]

Continue Reading

ಮಾತಿನ ಲಯ ತಪ್ಪಿದ ಅಮೂಲ್ಯಾಳಿಗೆ ಪೂರ್ತಿ ಮಾತಾಡಲು ಬಿಡದೇ ದೇಶದ್ರೋಹಿ ಅನ್ನುತ್ತಿರುವ ವ್ಯಭಿಚಾರಿ ಮಾಧ್ಯಮ ವಲಯ ಮತ್ತು ಕಡುಮೂರ್ಖ ಜನರು!

ಮಾತು ಮುಗಿಸುವ ಮುನ್ನವೇ ಕತೆ ಮುಗಿಸುವ ರೀತಿಯಲ್ಲಿ ಅಮೂಲ್ಯ ಮೇಲೆ ಮುಗಿಬಿದ್ದು ಆಕೆಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಸರ್ಕಾರ ಮತ್ತು ಘಟನೆಗೆ ಸುಣ್ಣ ಬಣ್ಣ ಬಳಿದು ಟಿ ಆರ್ ಪಿ ರಂಗಿನಲ್ಲಿ ಮಿಂದೆದ್ದು ರಂಗಿನಾಟ ಆಡುತ್ತಿರುವ ವ್ಯಭಿಚಾರಿ ಮಾಧ್ಯಮ ವಲಯವು ಸಾಮಾನ್ಯ ಜನರನ್ನು ದಾರಿ ತಪ್ಪಿಸುವಲ್ಲಿ ಸಂಪೂರ್ಣ ಯಶ ಕಂಡಿದೆ. ಇನ್ನು ರಾಜಕೀಯ ಕಾರಣಕ್ಕಾಗಿ ಅಮೂಲ್ಯ ವಿಷಯದಲ್ಲಿ ವಸ್ತುನಿಷ್ಠತೆಯಿಂದ ವಿಮರ್ಶಿಸದ ಜನರು ಆಕೆಯ ಮಾತುಗಳನ್ನು ಪೂರ್ಣವಾಗಿ ಕೇಳಿಸಿಕೊಳ್ಳದೇ ಮುಗಿಬಿದ್ದಿರುವುದು ಹಾಸ್ಯಾಸ್ಪದ ಸಂಗತಿಗಳಲ್ಲಿ ಒಂದಾಗಿದ್ದು ಜನರು ತಾವೆಂತಹ […]

Continue Reading