ನಾಳೆಯಿಂದ ಕಾಮಿಡಿ ಕಿಲಾಡಿ ಸೀಸನ್ -3 ನಲ್ಲಿ ಬರ್ತಿದ್ದಾರೆ ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ !

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿ ಸೀಸನ್ -3 ನಾಳೆಯಿಂದ ಆರಂಭವಾಗಲಿದ್ದು ತನ್ನದೇ ಆದ ಮನರಂಜನೆಯ ಕಾರಣಕ್ಕೆ ಕುತೂಹಲವನ್ನು ಮೂಡಿಸಿದೆ. ಈ ಕಾರ್ಯಕ್ರಮದಲ್ಲಿ ಇನ್ನು ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ ಇವರು ಮಿಂಚು ಹರಿಸಲಿದ್ದು ಕಲಾಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆಯ ರಾಮಪ್ಪ -ಹನುಮಂತಮ್ಮ ದಂಪತಿಗಳ ಪುತ್ರರಾದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆಯವರು 1996 ರಿಂದ  ರಂಗಭೂಮಿ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಶಿವಮೊಗ್ಗ ತಾಲ್ಲೂಕು ಗಾಜನೂರಿನ ಮೊರಾರ್ಜಿ […]

Continue Reading

ಕಿರುತರೆ ಲೋಕದ ನೂತನ ಧೃವತಾರೆ ಶಿವಮೊಗ್ಗದ ಈ “ಕಾಕರಾಜ” !

ಆಧುನಿಕ ಕಿರುತೆರೆ ರಂಗವು ಸೊರಗುತ್ತಿರುವಂತಹ ವೇಳೆ ಮಲೆನಾಡಿನ ಪ್ರತಿಭೆಯೊಂದು ಕಿರುತರೆ ಲೋಕಕ್ಕೆ ಪ್ರವೇಶಿಸಿದ್ದು ಹೊಸ ಭರವಸೆಯನ್ನು ಮೂಡಿಸಿದೆ. ಕಷ್ಟಸಾಧ್ಯವಾದ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಚುಟುಕಾದ ಅಭಿನಯದ ಮೂಲಕ ಗಮನಸೆಳೆಯುತ್ತಿರುವ ಶನಿ ಧಾರಾವಾಹಿಯ ಕಾಕರಾಜ ಪಾತ್ರಧಾರಿ ಹರೀಶ್ ಅವರು ಇದೀಗ ಕಿರುತರೆ ಲೋಕಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಮೂಲತಃ ಶಿವಮೊಗ್ಗದವರಾದ ಇವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರಿಸಿದಂತವರು. ನಂತರ ಚಿತ್ರರಂಗಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಆಗಿ ಅರಂಭಗೊಂಡ ಇವರ ಕಲಾಸೇವೆಯು ನಂತರದಲ್ಲಿ ಎಲ್ಲಿಗೋ ಹೋಯಿತು. ಇದರ ಪರಿಣಾಮವಾಗಿಯೇ […]

Continue Reading

ಪ್ರೇಕ್ಷಕರ ಮೇಲೆ ಮಾರಯ್ಯನ ಕತ್ತಿಯನ್ನು ಬೀಸಿದ “ಕನ್ನಗತ್ತಿ” !?

12ನೇ ಶತಮಾನದ ಶರಣ ಚಳುವಳಿಯ ನೇತಾರ ಮತ್ತು ಕ್ರಾಂತಿಕಾರಿ ಚಳುವಳಿಯ ಹಿಂದಿನ ಶಕ್ತಿ ಬಸವಣ್ಣನವರ ಕಲ್ಯಾಣದ ಕಥೆ ಕನ್ನಗತ್ತಿ ಮಾರಯ್ಯನ  ವೃತ್ತಾಂತವನ್ನು ವಿಸ್ತಾರವಾಗಿ ವಿಶ್ಲೇಷಿಸುತ್ತಾ  ಮಾರಯ್ಯನ ಚೋರ ಧರ್ಮದ ಮೂಲಕ ಕಲ್ಯಾಣದ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಮತ್ತು ಚೋರ ಧರ್ಮವೂ ಸಹ ಜೀವಪರವಾಗಿರಬಹುದು ಎಂಬ ಆಶಯವನ್ನು ತೋರಿಸುವ ಮತ್ತು ಎಂದಿನಂತೆ ಪ್ರಭುತ್ವವು ಯಾರ ಪರವಾಗಿರುತ್ತದೆ, ಒಂದು ವೇಳೆ ಪ್ರಭುತ್ವದ ಆಲೋಚನೆಗಳು ಸರಿಯಿದ್ದರೂ ಅವಕಾಶವಾದಿಗಳು ತಮ್ಮ ವಿಕ್ಷಿಪ್ತ ಹಾಗೂ ಸ್ವಾರ್ಥಮಯ ನಡವಳಿಕೆಗಳ ಮೂಲಕ ಹೇಗೆ ಪ್ರಭುತ್ವವನ್ನೂ ಸಹ ಹೇಗೆ […]

Continue Reading

ಇದೇ ಜುಲೈ 12 ರಂದು ಶಿವಮೊಗ್ಗದಲ್ಲಿ ಹೊಂಗಿರಣ ತಂಡದಿಂದ ಕಾರ್ನಾಡರ “ಹೂವು” ನಾಟಕ ಪ್ರದರ್ಶನ !

ಇತ್ತೀಚಿಗಷ್ಟೇ ನಮ್ಮೆಲ್ಲರನ್ನು ಅಗಲಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಟ, ನಿರ್ದೇಶಕ ಹಾಗೂ ರಂಗಭೂಮಿಯ ದಿಗ್ಗಜ ಗಿರೀಶ್ ಕಾರ್ನಾಡರ ನೆನಪಿಗಾಗಿ ಅವರು ರಚಿಸಿದ “ಹೂವು” ನಾಟಕವನ್ನು ಇದೇ ಜುಲೈ 12 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಶಿವಮೊಗ್ಗದ ಹೆಸರಾಂತ ರಂಗ ತಂಡ ಹೊಂಗಿರಣ (ರಿ) ತಂಡದ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ನಾಟಕವವನ್ನು ಹೆಸರಾಂತ ರಂಗಕರ್ಮಿಗಳಾದ ಡಾ.ಸಾಸ್ವೆಹಳ್ಳಿ ಸತೀಶ್ ಅವರು ನಿರ್ದೇಶಿಸುತ್ತಿದ್ದು, ಚಂದ್ರಶೇಖರ ಶಾಸ್ತ್ರಿ ಅವರು ಅಭಿನಯಿಸುತ್ತಿದ್ದಾರೆ. ಈ ನಾಟಕಕ್ಕೆ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀ.ಹರಿಗೆ […]

Continue Reading

ರಂಗಬೆಳಕು ರಂಗಕರ್ಮಿ ಕೊಟ್ರಪ್ಪ.ಜಿ. ಹಿರೇಮಾಗಡಿ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಘೋಷಣೆ!

ಶಿವಮೊಗ್ಗದ ರಂಗಕರ್ಮಿಯಾದ ಶ್ರೀ. ಕೊಟ್ರಪ್ಪ,ಜಿ. ಹಿರೇಮಾಗಡಿ ಅವರಿಗೆ 2019 ನೇ ಸಾಲಿನ ಸಿಜಿಕೆ ರಂಗಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಿಜಿಕೆ ರಂಗಪ್ರಶಸ್ತಿ ಸಮಿತಿಯು ಶಿವಮೊಗ್ಗದ  ಕೊಟ್ರಪ್ಪ ಜಿ.ಹಿರೇಮಾಗಡಿ   ಅವರಿಗೆ 2019ನೇ ಸಾಲಿನ ಪ್ರಶಸ್ತಿ ನೀಡಲಿದ್ದು ಪ್ರದಾನ ಸಮಾರಂಭವು ಇದೇ ತಿಂಗಳ 27ರಂದು ಅಂದರೆ ಸಿಜಿಕೆ ಅವರ ಹುಟ್ಟು ಹಬ್ಬದಂದು ನಡೆಯಲಿದೆ. ಕೊಟ್ರಪ್ಪ ಜಿ. ಹಿರೇಮಾಗಡಿ ಅವರು ಮೂಲತಃ ಸೊರಬ ತಾಲೂಕಿನ ಗ್ರಾಮೀಣ ಪ್ರತಿಭೆಯಾಗಿದ್ದು ಈ ಸದ್ಯ ಗಾಜನೂರು ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಾಥಮಿಕ ಶಿಕ್ಷಣದಲ್ಲಿ ರಂಗಕಲೆ […]

Continue Reading

ನಾಗಮಂಡಲದ ಗಿರೀಶ್ ಕಾರ್ನಾಡ್ ಅಸ್ತಂಗತ – ಮುಂದುವರೆದ ವಿದ್ಯಾವಂತರ ಸಂಭ್ರಮಿಸುವ ವಿಕೃತಿ !

ತಮ್ಮ ನಾಟಕ. ಗದ್ಯ ಪದ್ಯಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು  ನೀಡಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹಿರಿಯ ವಿಚಾರವಾದಿ ಡಾ.ಗಿರೀಶ್ ಕಾರ್ನಾಡ್ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ […]

Continue Reading

ಮೊದಲ ನಾಟಕದಲ್ಲೇ ಭರವಸೆ ಮೂಡಿಸಿದ ಯುವ ನಾಟಕಕಾರ ರಂಗನಾಥ್ !

ರಂಗಭೂಮಿಗೆ ಮತ್ತಷ್ಟು ಯುವಕರು ಉತ್ಸಾಹದಿಂದ ಬರುತ್ತಿದ್ದಾರೆ. ನಟನೆ ನಿರ್ದೇಶನ ಬರಹ ಹೀಗೆ ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ರಂಗಭೂಮಿಗೆ ತಮ್ಮದೇ ಆದ ಆಲೋಚನೆಗಳ ಮೂಲಕ ಕೊಡುಗೆ ನೀಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಸಾಲಿಗೆ ಇದೀಗ ಶಿವಮೊಗ್ಗದ ಯುವ ಪ್ರತಿಭೆ ರಂಗನಾಥ್ ಅವರು ಸೇರ್ಪಡೆಗೊಂಡಿದ್ದು ನಟನೆ ಹಾಗೂ ನಿರ್ದೇಶನದಿಂದ ಇದೀಗ ನಾಟಕಗಾರನಾಗಿ ಬಡ್ತಿ ಪಡೆದಿದ್ದಾರೆ. ಇತ್ತೀಚೆಗೆ ಡಾ.ಕೆ.ಟಿ. ವಿಜಯ ಕುಮಾರ್ ಅವರ ಸಂಶೋಧನಾ ಪ್ರಬಂಧವನ್ನು ಆಧರಿಸಿ ಗೊರುಕನ 1974 ಎಂಬ  ನಾಟಕ ಬರೆದಿರುವ ಇವರು ತಮ್ಮ ನಾಟಕ […]

Continue Reading

ಮೇ 26 ಕ್ಕೆ ಶಿವಮೊಗ್ಗದಲ್ಲಿ ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ “ಮೃಗತೃಷ್ಣಾ”ನಾಟಕ ಪ್ರದರ್ಶನ.

ಇದೇ ತಿಂಗಳ 26 ನೇ ತಾರೀಖಿನಂದು  ಅಂದರೆ ಭಾನುವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹೊಂಗಿರಣ (ರಿ) ಸಂಸ್ಥೆಯ ವತಿಯಿಂದ  ವಸುಮತಿ ಉಡುಪ ಅವರು ರಚನೆಯ ರಾಜ್ಯದ ಹಿರಿಯ ರಂಗಕರ್ಮಿ ಡಾ.ಸಾಸ್ವೆಹಳ್ಳಿ ಸತೀಶ್ ಅವರ ನಿರ್ದೇಶನದ “ಮೃಗತೃಷ್ಣಾ” ನಾಟಕದ ಮೊದಲ ಪ್ರದರ್ಶನವಿದೆ. ಹೊಂಗಿರಣದ ಉತ್ತಮ ನಾಟಕಗಳ ಸಾಲಿಗೆ ಸೇರುವಂತಹ ನಾಟಕ ಇದು ಎಂಬ ಅಭಿಪ್ರಾಯವನ್ನು ನಾಟಕದ ನಿರ್ದೇಶಕರಾದ ಡಾ.ಸಾಸ್ವೆಹಳ್ಳಿ ಸತೀಶ್ ಅವರು ವ್ಯಕ್ತಪಡಿಸಿದ್ದು ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುವುದೆಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನು ಹಲವು ಉತ್ತಮ ಕಲಾವಿದರನ್ನು ಒಳಗೊಂಡಿರುವ ಹೊಂಗಿರಣ […]

Continue Reading