ರವಿ ಅವರ “ಪರಿಸರ” ಎಂಬ ಕವಿತೆ !

ಮಳೆಬಂದರೆ ಹರಿಯುತ್ತದೆ ಊರೊಳಗೆ ನೀರು ಬರದೇ ಇದ್ದರೆ ದಾಹಕ್ಕಾಗಿ ಎಲ್ಲೆಡೆ ಕೂಗು ಉರಿಯುತಿದೆ ಧಗಧಗ ಕಾಡು ಬೇಯುತ್ತಿವೆ ಮರಗಿಡ ಪ್ರಾಣಿಪಕ್ಷಿಗಳು ಭೂಮಿಯು ಬಸಿದಿದೆ ನೆತ್ತರು ಕುಸಿದು ಬೀಳುತ್ತಿದೆ ನಿತ್ರಾಣಗೊಂಡು ಪ್ರಕೃತಿಯ ಅಂಗಾಂಗಗಳಿಗೆ ಹಬ್ಬುತ್ತಿವೆ ಹಣ ಅಧಿಕಾರ ಅಂತಸ್ತುಗಳ ಸೋಂಕುರೋಗಗಳು; ನಿಂತ ನೆಲ; ಬಾನಸೂರುಗಳು ಸುಡುತ್ತಿರುವುದನ್ನು ಮರೆಸುತಿವೆ ದೇವರು ಧರ್ಮ ಜಾತಿ ರಕ್ತಗಳು ! ✍🏼 ರವಿ ಸಿದ್ಲಿಪುರ Share on: WhatsAppPlease follow and like us:

Continue Reading