“ಮತದಾರ” – ಓಟು ಹಾಕುವ ಮುನ್ನ ಒಮ್ಮೆ ಎಲ್ಲರೂ ಓದಲೇಬೇಕಾದ ಶಿವಕುಮಾರ್ ಮಾವಲಿಯವರ ಕಥೆ !

ಮೂರು ವರ್ಷಗಳ ಹಿಂದೆ ಹಳ್ಳಿ ಬಿಟ್ಟು ಪ್ಯಾಟೆಗೆ ಹೋಗಿ ಗಾರೆ ಕೆಲಸಗಾರರ ತಂಡವೊಂದನ್ನು ಕಟ್ಟಿಕೊಂಡಿದ್ದ ಪುಂಡಲೀಕ ಮತ್ತೆ ಹಳ್ಳಿಗೆ ವಾಪಸ್ಸಾಗಿದ್ದರ ಹಿಂದಿನ ಕಾರಣ ಚುನಾವಣೆ ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತಿತ್ತು.ಅವನು ಬರಲಿಚ್ಛಿಸಿದ್ದನೋ ಇಲ್ಲವೋ ಆದರೆ ಚುನಾವಣೆಯಂಥ ಕಷ್ಟದ ದಿನಗಳಲ್ಲಿ ಸ್ಥಳೀಯ ಹಾಲಿ ಮಂತ್ರಿಯೊಬ್ಬನ ಆಣತಿಯಂತೆಯೇ ಅವನನ್ನು ಊರಿಗೆ ಕರೆತರಲಾಗಿತ್ತು . ಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗಿನ ಯಾವುದೇ ಚುನಾವಣೆಯ ಪ್ರಚಾರ ತಂತ್ರಗಳಲ್ಲಿ ಪುಂಡಲೀಕ ಪರಿಣಿತಿ ಹೊಂದಿದ್ದರಿಂದಲೇ ಅವನನ್ನು ಕರೆಸಿಕೊಳ್ಳಲಾಗಿತ್ತು‌. ಪ್ರಸ್ತುತ ಸರ್ಕಾರದಲ್ಲಿ ಸಂಸ್ಕೃತಿ ಮಂತ್ರಿಯಾಗಿದ್ದ ‘ಬೋರೇಗೌಡ’ನಿಗೆ ಮುಂಬರುವ ಚುನಾವಣೆಯಲ್ಲಿ […]

Continue Reading

ದೂಕಪ್ಪ – The Push Man

Chapter 1- ಮನಸ್ವಿನಿ ಅಮ್ಮಾ.. ಇವತ್ತು tiffen ಬಾಕ್ಸ್ ಬೇಡ..ನಾನು ಕ್ಯಾಂಟೀನ್ ನಲ್ಲಿ ಊಟ ಮಾಡ್ತೀನಿ..!! ಎಂದು ಮನಸ್ವಿನಿ ಮನೆಯಿಂದ ಹೊರಟಳು. ಅಮ್ಮನ ಅಡುಗೆ ಆ 22 ವರ್ಷದ ಬಾಲಕಿಗೆ ಇಷ್ಟವಾಗುತ್ತಿರಲಿಲ್ಲ ಅನ್ನುವುದರಲ್ಲಿ ಆಶ್ಚರ್ಯವೇನಿಲ್ಲ. M A in ಸೈಕಾಲಜಿ ವಿದ್ಯಾರ್ಥಿನಿಯಾದ ಆಕೆಗೆ ಕಾಲೇಜು ಹತ್ತಿರ ಬಂದಂತೆ ಏನೋ ಭಯ. ತನ್ನ ಕೊನೆ ವರ್ಷದ thesis ಗೆ ಒಂದು ಉತ್ತಮ ವಿಷಯ ಸಿಗದ ಕಾರಣ ಅವಳು ತನ್ನ ಕ್ಲಾಸ್ ನಲ್ಲಿ ಹಿಂದೆ ಬಿದ್ದಿದ್ದಳು. ಯಾವ ವಿಷಯವು ಆಕೆಗೆ […]

Continue Reading