ಸಿಎಎ ವಿರುದ್ಧ ಬೇಕಿರುವುದು ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳುವ ಹೋರಾಟವೋ ಅಥವಾ ನಿಜವಾದ ಜನಾಂದೋಲನವೋ?

ರಾಜಕೀಯ ರಾಜ್ಯ

ಭಾರತದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳಿಗೆ ಭಿನ್ನವಾಗಿ ಜನರು ಪೌರತ್ವ ಕಾಯ್ದೆಯ ವಿರುದ್ಧ ಬೀದಿಗೆ ಇಳಿದಿದ್ದು ಇದು ಕೇವಲ ಒಂದು ಅಥವಾ ಎರಡನೇ ದಿನದ ಹೋರಾಟವಾಗದೇ ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಿಸುತ್ತಲೇ ಇದೆ. ಈ ನಡುವೆಗೆ ಕೆಲವು ಜನರು ರಾಜಕೀಯ ಪಕ್ಷಗಳು ಈ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುತ್ತಿಲ್ಲ ಎಂದು ಹೇಳುತ್ತಿದ್ದು ಇದೀಗ ನಮ್ಮಲ್ಲಿ ನಡೆಯಬೇಕಾಗಿರುವುದು ರಾಜಕೀಯ ಹೋರಾಟವೋ ಅಥವಾ ನಿಜವಾದ ಜನಾಂದೋಲನವೋ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ.

Related image

ಇದರೊಂದಿಗೆ ಈಗ ಹೋರಾಟದ ಸ್ವರೂಪಗಳು ತೀರಾ ಬೋರಿಂಗ್ ಎನ್ನುವಂತಹ ಸನ್ನಿವೇಶವನ್ನು ತಲುಪಿದ್ದು ಈ ನಿಜದ ಹೋರಾಟದ ಸನ್ನಿವೇಶವನ್ನು ಜನಾಂದೋಲವನ್ನಾಗಿ ರೂಪಿಸುವ ಬದಲು ಸನ್ನಿವೇಶವನ್ನು ತಮ್ಮ ವೈಯಕ್ತಿಕ ಇಮೇಜ್ ಅನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದು ಇದೊಂತರಾ ಕೆಟ್ಟ ಬೆಳವಣಿಗೆಯಾಗಿ ಮಾರ್ಪಡುತ್ತಿದೆ.

ಈಗ ಕೆಲ ವರ್ಷಗಳ ಹಿಂದೆ ಜನರಿಗೆ ಹಾಸ್ಯಘೋಷ್ಠಿಗಳು ಮನರಂಜನೆ ನೀಡುತ್ತಿದ್ದವು ಈಗ ಭಾಷಣಗಳು! ಟೌನ್‌ಹಾಲ್, ಫ್ರೀಡಂಪಾರ್ಕ್, ಆನಂದರಾವ್ ಸರ್ಕಲ್ ನಲ್ಲಿ ಟೈಂಪಾಸ್ ಮಾಡೋದು ಬಿಟ್ಟು ಬೇರೆ ಏನಾದರೂ ಯೋಚನೆ ಮಾಡಬೇಕು. ಗಾಂಧೀಜಿ ಅವರ ಹೋರಾಟಗಳನ್ನು ಒಮ್ಮೆ ಅವಲೋಕಿಸಿ. ಕೇಂದ್ರ ಸರ್ಕಾರ ನಿಮ್ಮ ಭಾಷಣಗಳಿಗೆ, ಘೋಷಣೆಗಳಿಗೆ ಜಗ್ಗುವುದಿಲ್ಲ. ನಾವು ಕಾಫೀ ಟೀಗೂ ಜಿಎಸ್‌ಟಿ ಮೂಲಕ ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ ಬೀದಿಯಲ್ಲಿ ನಿಂತು ಘೋಷಣೆ ಕೂಗುವ ಬದಲು ತೆರಿಗೆ ಕಟ್ಟುವುದನ್ನು ನಿಲ್ಲಿಸಿ, ಜಿಎಸ್‌ಟಿ ವಿಧಿಸುವ ಹೋಟೆಲ್ ನಲ್ಲಿ ತಿಂಡಿ ತಿನ್ನುವುದನ್ನು ತ್ಯಜಿಸಿ ಬೀದಿ ಬದಿ ವ್ಯಾಪಾರಿಗಳನ್ನು ಬೆಂಬಲಿಸಬೇಕು.

Related image

ಇನ್ನು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವ ಬದಲು ಶುಲ್ಕ ಕಟ್ಟದೇ ತರಗತಿಗಳಿಗೆ ಹಾಜರಾಗಿ. ಟಿವಿ ಮಾಧ್ಯಮಗಳನ್ನು ನೋಡುತ್ತಾ ಬಯ್ದುಕೊಳ್ಳುವ ಬದಲು ಕೇಬಲ್ ಕನೆಕ್ಷನ್ ತೆಗೆಸಿ. ಜನ ಟಿವಿ ಸೀರಿಯಲ್, ನ್ಯೂಸ್ ಚಾನಲ್, ಹಾಸ್ಯ ಕಾರ್ಯಕ್ರಮಗಳಿಂದ ಸಿಗದ ಮನರಂಜನೆಯನ್ನು ಜನ ಇಲ್ಲಿಂದ ಪಡೆದು ಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲದೇ ಕಡೆಯಲ್ಲಿ ಕಾಂಗ್ರೆಸ್ ಏನು ಮಾಡ್ತಿದೆ ಅಂತ ಆರೋಪ ಮಾಡಿಕೊಂಡು ಹೊಣೆಗಾರಿಕೆ ವರ್ಗಾಯಿಸಬೇಡಿ, ಕಾಂಗ್ರೆಸ್ ಮಾಡಿದ್ರೆ ರಾಜಕೀಯ ಪ್ರಜೆಗಳು ಮಾಡಿದ್ರೆ ಜನಾಂದೋಲನ… ನೀವೇ ನಿರ್ಧರಿಸಿ ನಿಮಗೆ ರಾಜಕೀಯ ಹೋರಾಟ ಬೇಕೋ ನಿಜವಾದ ಆಂದೋಲನ ಬೇಕೋ ಎಂದು!!!

Please follow and like us:

Leave a Reply

Your email address will not be published. Required fields are marked *