ದೀಪಿಕಾ ಪಡುಕೋಣೆಯನ್ನು ವಿರೋಧಿಸುವ ಭರದಲ್ಲಿ “ಕುಂಬಳಕಾಯಿ ಕಳ್ಳರು ನಾವೇ” ಎಂದು ಒಪ್ಪಿಕೊಂಡ ದೀಪಿಕಾ ವಿರೋಧಿ ಬಣ!

ಬಾಲಿವುಡ್ ರಾಜಕೀಯ ರಾಷ್ಟ್ರೀಯ ಸಿನಿಮಾ

ಬಾಲಿವುಡ್ ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆಯವರು ಜೆಎನ್ ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ಅವರ ಮುಂಬರು ಚಿತ್ರ “ಚಿಪಾಕ್” ಸಿನಿಮಾ ನೋಡದಂತೆ ಟ್ವಿಟರ್ ನಲ್ಲಿ ಅಭಿಯಾನ ಶುರುವಾಗಿದ್ದು “ಬಿಜೆಪಿ ಭಕ್ತರು” ಎಂದೇ ಗುರುತಿಸಲ್ಪಡುವ ಜನರ ಗುಂಪು ದೀಪಿಕಾ ಪಡುಕೋಣೆ ಅವರನ್ನು ಹೀನಾಮಾನವಾಗಿ ಟೀಕೆಗೆ ಇಳಿದಿದ್ದು ದೇಶದ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಕೆಳ ಹಂತಕ್ಕೆ ಜಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related image

JNU ಹಿಂಸೆಗೆ ಕಾರಣ ಎಡಪಂಥೀಯರೆಂದು ಬಿಜೆಪಿ ಬೆಂಬಲಿಗರ ವಾದ. ಆದರೆ ದೀಪಿಕಾ ಪಡುಕೋಣೆ JNUಗೆ ಹೋಗಿದ್ದು ಹಿಂಸೆಯನ್ನು ವಿರೋಧಿಸಿಯೇ ಹೊರತು ಹಿಂಸೆಗೆ ಇಂಥವರೇ ಕಾರಣವೆಂದು ಆಕೆ ಎಲ್ಲೂ ಹೇಳಿಲ್ಲ. JNUನಲ್ಲೂ ಆಕೆ ಭಾಷಣ ಮಾಡಿಲ್ಲ. ಆದರೆ ದೀಪೀಕಾ JNUನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಬಿಜೆಪಿಗರು ಆಕೆಯನ್ನು ಹಣಿಯಲು ಓವರ್ ಟೈಮ್ ಕೆಲಸ ಆರಂಭಿಸಿ, JNUನಲ್ಲಿ ನಡೆದ ಹಿಂಸೆಗೆ ಯಾರು ಕಾರಣವೆಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ

ಆಕೆ ಖಂಡಿಸಿರೋದು ಹಿಂಸೆಯನ್ನೇ ಹೊರತು ಸಂಘಟನೆಗಳನ್ನಲ್ಲ. ಆದರೆ ಆಕೆಯನ್ನು ನೋಡುತ್ತಿದ್ದಂತೆ ಕುಂಬಳ ಕಾಯಿ ಕಳ್ಳರ ರೀತಿಯಲ್ಲಿ ಹೆಗಲು ಮುಟ್ಟಿಕೊಳ್ಳಲು ಆರಂಭಿಸಿದವರು, ಹಿಂಸೆಯಲ್ಲಿ ತಮ್ಮ ಕೈವಾಡವನ್ನು ಸಾಬೀತುಪಡಿಸುತ್ತಿದ್ದಾರಷ್ಟೇ.”

Please follow and like us:

Leave a Reply

Your email address will not be published. Required fields are marked *