ಹ್ಯಾಪಿ ನ್ಯೂ ಇಯರ್ ಎಂದ “ಅವನೇ ಶ್ರೀಮನ್ನಾರಾಯಣ”

ರಾಜ್ಯ ಸಿನಿಮಾ ಸ್ಯಾಂಡಲ್ ವುಡ್

ಕಲಾವಿದರು : ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ಬಾಲಾಜಿ ಮನೋಹರ್, ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ, ಮಧುಸೂಧನ್ ರಾವ್ನಿ  ಮುಖ್ಯಭೂಮಿಕೆಯಲ್ಲಿ ಕಾಣಿಸಿ ಕೊಂಡಿದ್ದಾರೆ. 

ನಿರ್ದೇಶಕ : ಸಚಿನ್ ರವಿ 

ಚಿತ್ರದ ಪ್ರಕಾರ  : ಆಕ್ಷನ್ ,ಕಾಮಿಡಿ ಮತ್ತು ರೋಮ್ಯಾನ್ಸ್

ಅವಧಿ   : 3 ಗಂಟೆ 6 ನಿಮಿಷ . 

ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಮೊದಲನೇ ಸ್ಥಾನ ಪಡೆದು ಕೊಂಡ ಸಿನಿಮಾ  ಅವನೇ ಶ್ರೀಮನ್ನಾರಾಯಣ, ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಈ ಸಿನಿಮಾ ಇಂದು ತೆರೆಕಂಡು ಸಿನಿ ರಸಿಕರ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಯಶಸ್ಸಿನ ಮೊದಲನೇ ಮೆಟ್ಟಿಲೇರಿದೆ.

Image result for avane srimannarayana

ಈ ಚಿತ್ರ  ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು ಜನರ ಶಿಳ್ಳೆ,ಚಪ್ಪಾಳೆ ಪಡೆದು ಕೊಳ್ಳುವಲ್ಲಿ ಅರ್ಹ  ಸ್ಥಾನ ಗಿಟ್ಟಿಸಿಕೊಂಡಿದೆ,ಸಿನಿಮಾ ಎನ್ನುವುದು ಒಂದು ಕಾಲ್ಪನಿಕ ಜಗತ್ತನ್ನು  ಅನಾವರಣಗೊಳಿಸಿ ಅದರ ಮೂಲಕ ಜನರ ಮನಸ್ಸಿಗೆ ಮನರಂಜನೆ ನೀಡುವ ಕಲರ್ ಫುಲ್  ಮಾಧ್ಯಮ. ಅವನೇ ಶ್ರೀಮನ್ನಾರಾಯಣ ಕೂಡ ಅದೇ ಕಲ್ಪನೆಯಲ್ಲಿ ನಿರ್ಮಾಣವಾಗಿರುವ  ಸಿನಿಮಾ. 

ನಾರಾಯಣನ ಲೋಕ ಬೇರೆಯದ್ದೆ ರೀತಿಯಲ್ಲಿದ್ದು, ದೃಶ್ಯ ವೈಭವವೂ ಕೂಡಾ ತುಂಬಾನೇ ಕಲಾತ್ಮಕ ಮತ್ತು ವಿಭಿನ್ನವಾಗಿರುವಂತೆ  ಸಿನಿಮಾದ ಕಥೆಯನ್ನು ಹೆಣೆದಿದ್ದಾರೆ ರಕ್ಷಿತ್.  ಪ್ರತಿ ದೃಶ್ಯದಲ್ಲಿಯೂ  ಚಿತ್ರತಂಡದ 3 ವರ್ಷದ ಶ್ರಮ ಕಾಣಸಿಗುತ್ತದೆ.

ರಕ್ಷಿತ್ ಮತ್ತು ತಂಡದ  ಈ ಚಿತ್ರ ಕಾಲ್ಪನಿಕವಾದ ಕಾರಣ ಯಾವ ದಶಕದಲ್ಲಿ ಚಿತ್ರಿತವಾಗುವ ಕಥೆ ಎಂದು ಹೇಳಿಲ್ಲ. ಆದರೆ ಕಲಾವಿದರ ವಸ್ತ್ರ ವಿನ್ಯಾಸ ಎಲ್ಲವನ್ನು ನೋಡಿದರೆ  ರೆಟ್ರೋ ಯುಗದಲ್ಲಿ  ನಡೆಯುತ್ತಿರುವ ಸಿನಿಮಾ ಎಂದುಕೊಳ್ಳಬಹುದು. ದಶಕಗಳ ಹಿಂದಿನ ಅನೇಕ ಇಂಗ್ಲಿಷ್ ಭಾಷೆಯ  ಸಿನಿಮಾಗಳನ್ನು  ನೆನಪಿಸುವ ಸಾಕಷ್ಟು ದೃಶ್ಯಗಳು ಚಿತ್ರದಲ್ಲಿವೆ.

ಒಂದು ದೊಡ್ಡ ಲೂಟಿಯ ಹಿಂದೆ ಪೂರ್ತಿ ಸಿನಿಮಾ ಮೂಡಿ ಬಂದಿದೆ. ಪ್ರೇಕ್ಷಕರನ್ನು  ಕೂಡ ಕಥೆಯ ಲೂಟಿಯ ಹಿಂದೆಯೇ ಹುಡುಕಾಡುತ್ತಾ ಹೋಗಬೇಕು. ಕೊನೆಗೆ ಈ ಲೂಟಿ ಯಾರಿಗೆ ಸಿಗುತ್ತದೆ,ಹಾಗೂ ಅದನ್ನು  ಹುಡುಕಲು ಮಾಡುವ ಪ್ರಯತ್ನಗಳೇನು  ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು. ಸಿನಿಮಾದ ಪ್ರತಿಯೊಂದು ದೃಶ್ಯವೂ ಎಲ್ಲೂ ಬೋರ್ ಆಗದಂತೆ ಮೂಡಿ ಬಂದಿದೆ.

Image result for avane srimannarayana

ಸಾಹಸ , ಕಲಾ ನಿರ್ದೇಶನ ಹಾಗೂ ಚಿತ್ರದ ಸಂಗೀತ ಹೈಲೆಟ್  ಆಗಿದೆ. ಇಡೀ ಸಿನಿಮಾವನ್ನು ವಿಭಿನ್ನ ಶೈಲಿಯಲ್ಲಿ ತೆರೆ ಮೇಲೆ ತರಲು ರಕ್ಷಿತ್‌ ಆ್ಯಂಡ್‌ ಟೀಮ್‌ ಪ್ರಾಮಾಣಿಕ ಪರಿಶ್ರಮ  ಮಾಡಿದ್ದು, ಸಂಕಲನದಲ್ಲಿ ಇನ್ನೊಂದಿಷ್ಟು ಎಚ್ಚರ ವಹಿಸಿ ಸಿನಿಮಾದ ಉದ್ದವನ್ನು ಕತ್ತರಿಸಿದ್ದರೇ ಚೆನ್ನಾಗಿತ್ತು ಎನಿಸುತ್ತದೆ.

ರಕ್ಷಿತ್‌ ಶೆಟ್ಟಿ ಸಿನಿಮಾ ಹುಚ್ಚಿನ ಆಸೆಯಿಂದಾಗಿ ತಮ್ಮ ಎಲ್ಲ ಪರಿಶ್ರಮವನ್ನು ಹಾಕಿ ನಾರಾಯಣನಾಗಿ ಚಿತ್ರದಲ್ಲಿ ಅವತರಿಸಿದ್ದಾರೆ. ಇಡೀ ಸಿನಿಮಾ  ಎಲ್ಲಿಯೂ ಕಟ್ಟುನಿಟ್ಟಿನ  ಪೊಲೀಸ್‌  ಅಧಿಕಾರಿಯಾಗದೆ  ಬುದ್ದಿವಂತ,ಕಿಲಾಡಿ ಪೊಲೀಸ್ ಅಧಿಕಾರಿಯಾಗಿ ಕಾಮಿಡಿ ಮಾಡುತ್ತಾ  ನಗಿಸುತ್ತಲೇ ಒಂದೊಳ್ಳೆ ಕಥೆಯನ್ನು ಸಿನಿ ರಸಿಕನಿಗೆ ತಲುಪಿಸುತ್ತಾರೆ.

ಕಾಮಿಡಿ, ಕಿಲಾಡಿತನ, ಸಾಹಸ, ಜಾಣತನ ಹೀಗೆ ಎಲ್ಲ ಅಂಶಗಳು ಈ ಪಾತ್ರದಲ್ಲಿ ಮೂಡಿಬಂದಿದೆ. ಶಾನ್ವಿ ಶ್ರೀವಾಸ್ತವ್ ಅವರ  ಲಕ್ಷ್ಮಿ ಪಾತ್ರವು  ಸುಂದರವಾಗಿ ವಿಭಿನ್ನವಾಗಿದೆ.  ಸಹಜ ನಟನೆಯ ಮೂಲಕ  ತುಂಬಾ  ಇಷ್ಟ ಆಗುತ್ತಾರೆ. ಕನ್ನಡ ಕಲಿತು ತಾನೇ ಚೆನ್ನಾಗಿ ಡಬ್ ಮಾಡಿದ್ದಾರೆ  ಶಾನ್ವಿ. ಇವರ ಕನ್ನಡ ಪ್ರೇಮಕ್ಕೆ ಅಭಿನಂದೆಗಳು ಹಾಗೂ ಶಾನ್ವಿ ಶ್ರೀವತ್ಸಾವ್‌ ಅವರದ್ದು ಇಷ್ಟು ದಿನಗಳಲ್ಲಿ ಇದು ಅತ್ಯುತ್ತಮವಾದ ನಟನೆ  ಎನ್ನಬಹುದು.

Related image

ಅಚ್ಯುತ್‌ಕುಮಾರ್‌ ಅವರದ್ದು  ಲವಲವಿಕೆಯ ನಟನೆ, ಬಾಲಾಜಿ ಮನೋಹರ್‌  ಅವರು ಇಡೀ ಸಿನಿಮಾ  ಅಬ್ಬರಿಸಿ ಬೊಬ್ಬಿರಿದಿದ್ದಾರೆ ಹಾಗೂ ಗೋಪಾಲ್‌ ದೇಶಪಾಂಡೆ, ಪ್ರಮೋದ್‌ ಶೆಟ್ಟಿ, ಕಿರಣ್‌ ನಾಯಕ, ವಿಜಯ್‌ ಚೆಂಡೂರ್‌ , ಅಶ್ವಿನ್‌ ಹಾಸನ್‌, ಸೇರಿದಂತೆ ಎಲ್ಲ ಕಲಾವಿದರು ಅವರ ನಟನೆಯನ್ನು ತುಂಬಾ ಚೆನ್ನಾಗಿಯೇ ನಟಿಸುವ ಮೂಲಕ ಕಥೆಗೆ ಜೀವ ತುಂಬಿದ್ದಾರೆ.ಸಿನಿಮಾ ತುಂಬಾ ಒಂದು ವಿಭಿನ್ನ ಲೋಕ ಅನಾವರಣಗೊಂಡಿರುವದರಿಂದ, ವಿಷುಯಲ್‌ ಟ್ರೀಟ್‌ಮೆಂಟ್‌ ವಿಭಿನ್ನ ರೀತಿಯಲ್ಲಿ  ಫೀಲ್‌ ಆಗುತ್ತದೆ

ಕಲ್ಪನೆಗಳನ್ನು ಚಂದದ ಹಂದರವಾಗಿ ಜೋಡಿಸಿರುವ ರಕ್ಷಿತ್ ಶೆಟ್ಟಿಯ ಕಲಾ ಕುಸುರಿಯನ್ನು ಒಮ್ಮೆ ಚಿತ್ರ ಮಂದಿರದಲ್ಲೇ ನೋಡಿ ಕಣ್ತುಂಬಿಕೊಳ್ಳಿ

Please follow and like us:

Leave a Reply

Your email address will not be published. Required fields are marked *