ಮಾತಿನ ಲಯ ತಪ್ಪಿದ ಅಮೂಲ್ಯಾಳಿಗೆ ಪೂರ್ತಿ ಮಾತಾಡಲು ಬಿಡದೇ ದೇಶದ್ರೋಹಿ ಅನ್ನುತ್ತಿರುವ ವ್ಯಭಿಚಾರಿ ಮಾಧ್ಯಮ ವಲಯ ಮತ್ತು ಕಡುಮೂರ್ಖ ಜನರು!

ಮಾತು ಮುಗಿಸುವ ಮುನ್ನವೇ ಕತೆ ಮುಗಿಸುವ ರೀತಿಯಲ್ಲಿ ಅಮೂಲ್ಯ ಮೇಲೆ ಮುಗಿಬಿದ್ದು ಆಕೆಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಸರ್ಕಾರ ಮತ್ತು ಘಟನೆಗೆ ಸುಣ್ಣ ಬಣ್ಣ ಬಳಿದು ಟಿ ಆರ್ ಪಿ ರಂಗಿನಲ್ಲಿ ಮಿಂದೆದ್ದು ರಂಗಿನಾಟ ಆಡುತ್ತಿರುವ ವ್ಯಭಿಚಾರಿ ಮಾಧ್ಯಮ ವಲಯವು ಸಾಮಾನ್ಯ ಜನರನ್ನು ದಾರಿ ತಪ್ಪಿಸುವಲ್ಲಿ ಸಂಪೂರ್ಣ ಯಶ ಕಂಡಿದೆ. ಇನ್ನು ರಾಜಕೀಯ ಕಾರಣಕ್ಕಾಗಿ ಅಮೂಲ್ಯ ವಿಷಯದಲ್ಲಿ ವಸ್ತುನಿಷ್ಠತೆಯಿಂದ ವಿಮರ್ಶಿಸದ ಜನರು ಆಕೆಯ ಮಾತುಗಳನ್ನು ಪೂರ್ಣವಾಗಿ ಕೇಳಿಸಿಕೊಳ್ಳದೇ ಮುಗಿಬಿದ್ದಿರುವುದು ಹಾಸ್ಯಾಸ್ಪದ ಸಂಗತಿಗಳಲ್ಲಿ ಒಂದಾಗಿದ್ದು ಜನರು ತಾವೆಂತಹ […]

Continue Reading

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಎಡವಟ್ಟು – ಮುಗಿಬಿದ್ದ ಪ್ರತಿಪಕ್ಷಗಳು !

ಇಂದು ಸದನದಲ್ಲಿ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಅವರು ಮಾಡಿಕೊಂಡ ಎಡವಟ್ಟಿನಿಂದಾಗಿ ಇಂದು ಸದನದಲ್ಲಿ ವಿಪಕ್ಷಗಳ ನಾಯಕರು ಅವರ ಮೇಲೆ ಮುಗಿದು ಬಿದ್ದರು. ಸದನದಲ್ಲಿ ಮಾತನಾಡುವ ವೇಳೆ ಗೋವಿಂದ ಕಾರಜೋಳ ಅವರು ಸಮ್ಮಿಶ್ರ ಸರ್ಕಾರವು ಹಣಕಾಸು ಇಲಾಖೆಯ ಒಪ್ಪಿಗೆಯಿಲ್ಲದೇ ಸುಮಾರು 6 ಪಟ್ಟು ಹೆಚ್ಚಿಗೆ ಅನುದಾನವನ್ನು ಮಂಜೂರು ಮಾಡಿದೆ ಎಂಬ ಆರೋಪವನ್ನು ಮಾಡಿದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ವಿಪಕ್ಷದವರು ಕಾರಜೋಳ ಅವರ ಮೇಲೆ ಮುಗಿ ಬಿದ್ದರು. ಅದರಲ್ಲೂ ಹಣಕಾಸು ಇಲಾಖೆಯ ಒಪ್ಪಿಗೆಯಿಲ್ಲದೇ ಯಾವ […]

Continue Reading

ಕ್ರಿಕೆಟ್ ಲೋಕದ ದಂತ ಕಥೆ, ಸಚಿನ್ ತೆಂಡೂಲ್ಕರ್ ಅವರ ಮುಡಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯ ಗರಿ !

ಜರ್ಮನಿಯ ಬರ್ಲಿನ್‌ನಲ್ಲಿ ಆಯೋಜಿಸಿದ್ದ  ಅದ್ಧೂರಿ ಸಮಾರಂಭದಲ್ಲಿ  ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವ್ಹಾ ಅವರು 2011 ಏಕದಿನ ವಿಶ್ವಕಪ್ ಗೆಲುವಿನ ಸಾಧನೆಗಾಗಿ 2000 ದಿಂದ  2020ನೇ ಇಸವಿಯ ವರೆಗಿನ ‘ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿ’ಯನ್ನು ಭಾರತ ಕ್ರಿಕೆಟ್ ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿ ಗೌರವಿಸಿದರು.  ಇದು ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿತ್ತು.  ಡೈಮ್ಲರ್ ಹಾಗೂ ರಿಚ್‌ ಮಂಟ್ ಸಹಯೋಗದೊಂದಿಗೆ 1999 ರಲ್ಲಿ  ಆರಂಭವಾಗಿರುವ ಲಾರೆಸ್ ಕ್ರೀಡಾ ಪ್ರಶಸ್ತಿಯು 20ನೇ […]

Continue Reading

ಒಂದೆಡೆ ಆರ್ ಎಸ್ ಎಸ್ ವಿರುದ್ಧ ಸದನದಲ್ಲಿ ಸಿದ್ದರಾಮಯ್ಯ ಪರೋಕ್ಷ ವಾಗ್ದಾಳಿ – ಇನ್ನೊಂದೆಡೆ ಯಡಿಯೂರಪ್ಪನವರ ಬಗ್ಗೆ ಸಾಫ್ಟ್ ಕಾರ್ನರ್!?

ಇಂದು ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸರ್ಕಾರದ ಸರ್ವಾಧಿಕಾರೀ ಧೋರಣೆಗಳನ್ನು ಪ್ರಶ್ನಿಸುತ್ತಾ ಆರ್ ಎಸ್ ಎಸ್ ಹಾಗೂ ಯಡಿಯೂರಪ್ಪನವರ ಮೇಲೆ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿರುವ ಜನರನ್ನು ಪ್ರಶ್ನಿಸಿದರು. ಮುಂದುವರೆದು ಮಾತನಾಡುತ್ತಾ.. ಪ್ರತಿರೋಧ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಸರ್ಕಾರ ರೂಪಿಸಿ ಜಾರಿಗೊಳಿಸುವ ಯಾವುದೇ ಕಾನೂನಿಗೆ ಪರ-ವಿರೋಧದ ಅಭಿಪ್ರಾಯಗಳು ಮೂಡಿಬರುವುದು ಸಾಮಾನ್ಯ. ಹೀಗೆ ಮೂಡಿಬಂದ ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯತ್ನಿಸಿದರೆ ಅದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಲ್ಲಿನ […]

Continue Reading

ಸದನದಲ್ಲಿ ಮೊಳಗಿದ ಪಾಕಿಸ್ತಾನ ಹಾಗೂ ತುಕ್ಡೇ ತುಕ್ಡೇ ಗ್ಯಾಂಗ್ ಕೂಗು – ಬಿಜೆಪಿ ಮತ್ತು ಅದರ ಐಟಿ ಸೆಲ್ ಕೂಲಿಗಳೇ ನಿಜವಾದ ತುಕ್ಡೇ ಗ್ಯಾಂಗ್ ಎಂದ ಪ್ರಿಯಾಂಕ್ ಖರ್ಗೆ!

ವಿಧಾನಸಭೆ ಸದನದಲ್ಲಿ ಇದೀಗ ವಿಚಿತ್ರ ಎನಿಸುವಂತೆ ಪಾಕಿಸ್ತಾನ ಹಾಗೂ ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಬಾಲಿಷತನದ ಹೇಳಿಕೆಗಳು ಚರ್ಚೆಯಾಗುಂತಹ ಮಟ್ಟಕ್ಕೆ ಇದೇ ಮೊದಲ ಬಾರಿಗೆ ಇಳಿದಿದ್ದು ಸದನದ ಘನತೆಯು ಕುಂದುವಂತಹ ವಾತಾವರಣ ಸೃಷ್ಟಿಯಾಗಿದೆ. ಇನ್ನು ಈ ಬಗ್ಗೆ ವಿಧಾನಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಅದರ ಐಟಿ ಸೆಲ್ ಕೂಲಿಗಳೇ ನಿಜವಾದ ತುಕ್ಡೇ ಗ್ಯಾಂಗ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು. ಆದರೂ ಸಹ […]

Continue Reading

ಸರ್ಕಾರವು ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಮಾಹಿತಿ ನೀಡಿದೆ – ಸಿದ್ದರಾಮಯ್ಯ !

ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯಪಾಲರು ಇಂದು ಸದನದ ಮುಂದೆ ಮಂಡಿಸಿದ ವಿಷಯಗಳ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಸಿ.ಎಂ ಸಿದ್ದರಾಮಯ್ಯನವರು ಸರ್ಕಾರವು ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಮಾಹಿತಿ ನೀಡಿದೆ ಎಂದು ಆರೋಪಿಸಿದ್ದಾರೆ. ಮುಂದುವರೆಯುತ್ತಾ, “ಪ್ರವಾಹ ಬಂದು 6 ತಿಂಗಳಾಗಿದೆ ಇನ್ನೂ ಕೂಡ ಕೃಷಿಭೂಮಿ ಕೊಚ್ಚಿಹೋದವರಿಗೆ, ಅಂಗಡಿಮುಂಗಟ್ಟು, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ, ಶಾಲಾ ಕೊಠಡಿಗಳ ದುರಸ್ತಿ ಮಾಡಿಲ್ಲ. ಎಷ್ಟೋ ಮಂದಿ ಪ್ರವಾಹ ಸಂತ್ರಸ್ತರು ಈಗಲೂ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ದುಸ್ಥಿತಿಯ ಬಗ್ಗೆ ಪತ್ರಿಕೆಗಳಲ್ಲಿ […]

Continue Reading

ಮುಟ್ಟಿನಿಂದಲೇ ಹುಟ್ಟುವ ಮನುಜ ಮುಟ್ಟಾದ ಹೆಣ್ಣನ್ನು ದೂಷಿಸುವುದೇಕೆ?

ಈ ಜಗತ್ತು ಎಷ್ಟೇ ಮುಂದಿದ್ದರೂ ಮನುಷ್ಯ ಮಾತ್ರ ಮೂಢ ನಂಬಿಕೆಗಳಿಗೆ ದಾಸನಾಗಿ ತನಗರಿವಿಲ್ಲದೇ ಕೆಲವೊಮ್ಮೆ ಅರಿವಿದ್ದು ಹೇಯ ಕೃತ್ಯಗಳನ್ನ ಮಾಡುತ್ತಲ್ಲೇ ಬಂದಿದ್ದಾನೆ. ಅದರಲ್ಲೂ ಹೆಣ್ಣು ಮಕ್ಕಳ ಮೇಲಿನ ಗೌರವ,ಕಾ ಳಜಿ ಎಲ್ಲವನ್ನು ಮರೆತು  ಅವಮಾನಕರ ಘಟನೆಗಳು ಜರುಗುವಂತೆ  ವರ್ತಿಸುತ್ತಿದ್ದಾನೆ. ಹೆಣ್ಣು ಮಕ್ಕಳ ಮೇಲಿನ ಕಾಳಜಿಯನ್ನ ಮರೆತು ಗುಜರಾತ್‌ನ ಭುಜ್‌ನ ಶ್ರೀ ಸಹಜಾನಂದ ಬಾಲಕಿಯರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕಾಲೇಜೊಂದರಲ್ಲಿ ಹೆಣ್ಣು ಮಕ್ಕಳ ಋತು ಚಕ್ರದ ಬಗೆಗಿನ ಮೇಲೆ ಅವಮಾನವೀಯ ಘಟನೆ ನೆಡೆದಿದೆ, ಭುಜ್‌ನ ಶ್ರೀ ಸಹಜಾನಂದ ಬಾಲಕಿಯರ […]

Continue Reading

ಪುಲ್ವಾಮಾ ದಾಳಿಯಿಂದ ಮೋದಿಗೆ ಸಿಕ್ತು ಭರಪೂರ ಪ್ರಚಾರ – ಮಡಿದ ಯೋಧರಿಗಿನ್ನೂ ಸಿಕ್ಕಿಲ್ಲ ಸೂಕ್ತ ಪರಿಹಾರ !

ಜನಗಣಮನ-ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ! ನಾವೆಂದೂ ಮರೆಯಲಾರೆವು ಆ ದಿನ,ನಮ್ಮ ಕೆಚ್ಚೆದೆಯ ಯೋಧರು ಬಲಿದಾನಗೈದ ದಿನ.2019ರ ಫೆಬ್ರವರಿ 14ರಂದು ವಿಶ್ವದಲ್ಲಿನ ಎಲ್ಲಾ ಹಿರಿಯ ಮತ್ತು ಕಿರಿಯ ಸಮುದಾಯಗಳು ತಮ್ಮ ಪ್ರೇಮ ನಿವೇಧನೆ ಮಾಡಿಕೊಳ್ಳಲು ಪ್ರೇಮಿಗಳ ದಿನ ಆಚರಿಸುತ್ತಿದ್ದರು. ಅದೇ ದಿನ ಕಾಶ್ಮೀರದ ಪುಲ್ವಾಮ ನಗರದಲ್ಲಿ  ಯಾರು ಊಹಿಸದಂತ ಕರಾಳ ಘಟನೆಯೊಂದು ಯಾರ ಅರಿವಿಗೂ ಬರದಂತೆ ಪಾಕಿಸ್ತಾನಿ  ಉಗ್ರರು ಸಂಚು ರೂಪಿಸಿ ತಮ್ಮ  ಅಟ್ಟಹಾಸ ಮೆರೆಯುತ್ತಾರೆ.  ಹೌದು ಕಳೆದ ವರ್ಷ ಫೆಬ್ರವರಿ 14 ರಂದು  ಜಮ್ಮು […]

Continue Reading

ಆರ್.ಅಶೋಕ್ ಮಗನಿಂದ ಆಕ್ಸಿಡೆಂಟ್, ಇಬ್ಬರು ಅಮಾಯಕರ ದಾರುಣ ಸಾವು – ಅಪರಾಧಿಯ ರಕ್ಷಣೆಗೆ ನಿಂತ ಬಿಜೆಪಿ !

ರಾಜ್ಯ ಬಿಜೆಪಿ ಸರ್ಕಾರದ ಕಂದಾಯ ಸಚಿವರಾದ ಆರ್.ಅಶೋಕ್ ಅವರ ಪುತ್ರ ಶರತ್ ಅವರು ಬೇಜವಾಬ್ದಾರಿಯುತವಾಗಿ ಕಾರು ಚಾಲನೆ ಮಾಡಿದ ಪರಿಣಾಮ ಇಬ್ಬರು ಅಮಾಯಕರ ಪ್ರಾಣವೇ ಹೊರಟು ಹೋಗಿದ್ದು, ಜನರನ್ನು ಸಾಯಿಸಿದ ಈತ ಅಲ್ಲಿಂದ ನಿಧಾನಕ್ಕೆ ಕಾಲ್ಕಿತ್ತಿದ್ದು ಆತನನ್ನು ಬಚಾವು ಮಾಡಲು ಸ್ವತಃ ಆರ್ ಅಶೋಕ್ ಅವರೇ ಸರ್ಕಾರದ ಪ್ರಭಾವವನ್ನು ಬಳಸಿದ್ದು ತಪ್ಪಿತಸ್ಥನನ್ನು ರಕ್ಷಿಸುವ ಕೆಟ್ಟ ಕೆಲಸದಲ್ಲಿ ತೊಡಗಿದ್ದಾರೆ. ಮೊನ್ನೆಯಷ್ಟೇ ಮೇಕ್ರಿ ವೃತ್ತದ ಬಳಿ ಪ್ರಕರಣವೊಂದರಲ್ಲಿ ಸಿಲುಕಿದ್ದ ಹ್ಯಾರಿಸ್ ಅವರ ಪುತ್ರ ನಲಪಾಡ್ ಅವರೂ ಸಹ ಅಫಘಾತ ಮಾಡಿ […]

Continue Reading

ಈರುಳ್ಳಿ ಹಾಗೂ ಅಗತ್ಯ ವಸ್ತುಗಳ ನಂತರ ಇದೀಗ ದುಬಾರಿಯಾದ ಬೆಂಗಳೂರು ಮೆಟ್ರೋ, ಕೆಎಸ್ ಆರ್ ಟಿಸಿ ಟಿಕೆಟ್ ಹಾಗೂ ಅಡುಗೆ ಅನಿಲ!

ಗಗನಕ್ಕೇರಿದ್ದ ತರಕಾರಿ ಮತ್ತು ಈರುಳ್ಳಿ ಬೆಲೆ ಇಳಿಯುತ್ತಿದ್ದಂತೆ ಗ್ರಾಹಕರಿಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದ್ದು, ಅಡುಗೆ ಅನಿಲ ಸಿಲಿಂಡರ್  ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಭಾರವನ್ನು ಹೊರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈಗಾಗಲೇ ಬೆಂಗಳೂರಿನ ಮೆಟ್ರೋ ಟಿಕೆಟ್ ಪ್ರಯಾಣದ ದರವನ್ನೂ ಸಹ ಹೆಚ್ಚಳ ಮಾಡಿರುವ ಸರ್ಕಾರವು, ಇದೀಗ KSRTC ಪ್ರಯಾಣದ ದರವನ್ನೂ ಸಹ ಏರಿಸಲು ಮುಂದಾಗಿದ್ದು ತಮ್ಮ ಆರ್ಥಿಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರ ಮೇಲೆ ದಿನೇ ದಿನೇ ತೆರಿಗೆಯ […]

Continue Reading