About Us

 

Nation Today.News ಎಂಬುದು ಮುಖ್ಯವಾಗಿ ನಮ್ಮ ಸುತ್ತಲಿನ ರಾಜಕೀಯ, ಸಾಮಾಜಿಕ, ಹಾಗೂ ರಾಜಕೀಯ ವಿದ್ಯಮಾನಗಳನ್ನು ಕುರಿತಂತೆ ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಯುವಕರ ಪರಿಣಾಮಕಾರಿ ಅಭಿವ್ಯಕ್ತಿಗೆ ವೇದಿಕೆಯಾಗುವ ಉದ್ದೇಶವನ್ನು ಹೊಂದಿದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಕೆಲ ನಿಖರ ಮಾಹಿತಿ, ದತ್ತಾಂಶ ಹಾಗೂ ಕಲ್ಪನಾಧಾರಿತ ವಿಷಯಗಳ ಮೂಲಕವೂ ಜನರಿಗೆ ಸತ್ಯದ ಇತರೆ ಮಗ್ಗಲುಗಳನ್ನು ಪರಿಚಯಿಸುವ ಉದ್ದೇಶವೂ ಆ ಮೂಲಕ ಯುವಕರಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ.

ಎಲ್ಲರಲ್ಲೂ ಮೂಡುವಂತಹ ಸಮಾಜ ಪರವಾದ ಈ ಸಹಜ ತುಡಿತದ ಜೊತೆಗೆ ನೀವೂ ಹೆಗಲಾಗಬೇಕೆಂಬುದು ನಮ್ಮ ನಿರೀಕ್ಷೆ. ನಿಜಕ್ಕೂ ನೀವೂ ಸಹ ನಿಮ್ಮ ಸುತ್ತಣ ಸಂಗತಿಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು, ರಾಜಕೀಯ ವಿಚಾರಗಳನ್ನು ತಿಳಿಸಲು ಹಾಗೂ ಸುತ್ತಣ ಅನೀತಿಗಳನ್ನು ಪ್ರತಿಭಟಿಸಲು ಹಾಗೂ ನಿಮ್ಮ ಸಾಹಿತ್ಯಿಕ ಬರಹಗಳನ್ನು ಪ್ರಕಟಿಸಲು ನೆರವಾಗುವ ಈ ವೇದಿಕೆ ಹಲವು ಮಹತ್ವದ ಆಶಯಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ತರ್ಕಬದ್ಧವಾಗಿ ಮತ್ತು ಸತ್ಯದ ನೆಲೆಯಲ್ಲಿ ಯೋಚಿಸಲು ನೆರವಾಗುವಂತಹ ವಿಚಾರಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದ್ದು, ಉತ್ತಮ ಸಮಾಜ ನಿರ್ಮಾಣದೆಡೆಗೆ ನಿಮ್ಮೆಲ್ಲರನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ.